ನಟ ದರ್ಶನ್ ಚಿತ್ರರಂಗದ ಪಯಣಕ್ಕೆ 25 ವರ್ಷ: ಯಜಮಾನನ ಬೆಸ್ಟ್ 10 ಚಿತ್ರಗಳು ಯಾವ್ದು?

Published : Feb 14, 2024, 08:08 PM IST
ನಟ ದರ್ಶನ್ ಚಿತ್ರರಂಗದ ಪಯಣಕ್ಕೆ 25 ವರ್ಷ: ಯಜಮಾನನ ಬೆಸ್ಟ್ 10 ಚಿತ್ರಗಳು ಯಾವ್ದು?

ಸಾರಾಂಶ

ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಈ 25 ವರ್ಷದಲ್ಲಿ ದರ್ಶನ್ ಹಲವು ಹಿಟ್ ಸಿನಿಮಾಗಳ ಕೊಟ್ಟಿದ್ದಾರೆ. ಆ ಹಿಟ್ ಸಿನಿಮಾಗಳಲ್ಲಿ ದಿ ಬೆಸ್ಟ್ 10 ಸಿನಿಮಾಗಳ ಬಗ್ಗೆ ಹೇಳಲೇಬೇಕು.

ಶ್ರಮದ ಜೊತೆಗೆ ಅದೃಷ್ಟ ಒಂದೊದ್ದಿರೆ ಸಾಕು, ಯಾವುದೇ ಕ್ಷೇತ್ರದಲ್ಲಾದರೂ ಸಕ್ಸಸ್ ಸಿಗುತ್ತೆ. ಈ ಮಾತು ಚಿತ್ರರಂಗಕ್ಕೆ ಕೂಡಾ ಸೂಟ್ ಆಗುತ್ತೆ. ಅವಕಾಶಕ್ಕಾಗಿ ಅಲೆದು, ಶೂಟಿಂಗ್ ಸೆಟ್ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇಂದು ದೊಡ್ಡ ಮಟ್ಟಕ್ಕೆ ಬೆಳೆದ ಎಷ್ಟೋ ಕಲಾವಿದರಿದ್ದಾರೆ. ಯಶ್, ಸುದೀಪ್, ಧ್ರುವ, ದುನಿಯಾ ವಿಜಯ್, ಗಣೇಶ್ ಎಲ್ಲರೂ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಅಲೆದವರೇ. ಆದ್ರೆ ನಟ ದರ್ಶನ್ ಒಬ್ಬ ಲೈಟ್ ಬಾಯ್ ಆಗಿ ಸಿನಿಮಾ ಖರಿಯರ್ ಶುರುಮಾಡಿ ಇಂದು ಸ್ಟಾರ್ ಹೀರೋ ಆಗಿದ್ದಾರೆ. 

ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಈ 25 ವರ್ಷದಲ್ಲಿ ದರ್ಶನ್ ಹಲವು ಹಿಟ್ ಸಿನಿಮಾಗಳ ಕೊಟ್ಟಿದ್ದಾರೆ. ಆ ಹಿಟ್ ಸಿನಿಮಾಗಳಲ್ಲಿ ದಿ ಬೆಸ್ಟ್ 10 ಸಿನಿಮಾಗಳ ಬಗ್ಗೆ ಹೇಳಲೇಬೇಕು. ಖಳನಟ ತೂಗುದೀಪ್ ಶ್ರೀನಿವಾಸ್ ಪುತ್ರ ನಟ ದರ್ಶನ್ ಚಿತ್ರರಂಗದಲ್ಲಿ ಬರೋಬ್ಬರಿ 25 ವಸಂತಗಳನ್ನ ಪೂರೈಸಿದ್ದಾರೆ. ದರ್ಶನ್ ತಮ್ಮ ಸಿನಿ ಕರಿಯರ್ನಲ್ಲಿ ಸೋಲು ಗೆಲುವು ಎರಡನ್ನೂ ಸಮನಾಗಿ ಅನುಭವಿಸಿದ್ದಾರೆ. ಆದ್ರೆ ಈ ಕರಿಯರ್ನಲ್ಲಿ ದಿ ಬೆಸ್ಟ್ 10 ಸಿನಿಮಾಗಳನ್ನ ಹುಡುಕಿದ್ರೆ ಮೊದಲು ಸಿಗೋದೇ ಮೆಜೆಸ್ಟಿಕ್. ದರ್ಶನ್ ಹೀರೋ ಆಗಿ ಹೆಜ್ಜೆ ಇಟ್ಟ ಮೊದಲ ಸಿನಿಮಾ ಮೆಜೆಸ್ಟಿಕ್.

ಈ ಸಿನಿಮಾದಲ್ಲೇ ದರ್ಶನ್ ತಾನೆಂಥಾ ಮಾಸ್ ಹೀರೋ ಅಂತ ಲಾಂಗ್ ಹಿಡಿದು ತೋರಿಸಿದ್ರು. ಆಗಿನ ಕಾಲಕ್ಕೆ 50 ಲಕ್ಷದಲ್ಲಿ ಸಿದ್ಧವಾಗಿದ್ದ ಮೆಜೆಸ್ಟಿಕ್ ಒಂದುವರೆ ಕೋಟಿ ಕಲೆಕ್ಷನ್ ಮಾಡಿತ್ತು.  ದರ್ಶನ್ ಸಿನಿ ಖರಿಯರ್ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ಗೆ ವಿಶೇಷ ಸ್ಥಾನ ಇದೆ. ಪ್ರೇಮ್ ನಿರ್ದೇಶಿಸಿದ್ದ ಕರಿಯಾ ಸಿನಿಮಾ ಇಂದಿಗೂ ದರ್ಶನ್ ಅಭಿಮಾನಿಗಳ ಫೇವರಿಟ್. 2003ರಲ್ಲಿ ಬಂದ ಕರಿಯಾ ಸಿನಿಮಾ ಅಂದಿಗೆ 3 ಕೋಟಿ ಕಲೆಕ್ಷನ್ ಮಾಡಿತ್ತು. ಆ ಬಳಕ ದರ್ಶನ್ಗೆ ಮಾಸ್ ಇಮೇಜ್ಖಾಯಂ ಗೊಳಿಸಿದ್ದು 'ದಾಸ' ಸಿನಿಮಾ. ಈ ಸಿನಿಮಾ ಕೂಡ 3 ಕೋಟಿ ಕಲೆಕ್ಷನ್ ಮಾಡಿದೆ. ದರ್ಶನ್ ನಟನೆಯ ಕಲಾಸಿಪಾಳ್ಯ ಸಿನಿಮಾ ದಿ ಬೆಸ್ಟ್ ಸಿನಿಮಾಗಳಲ್ಲೊಂದು. 

ದರ್ಶನ್ ರಕ್ಷಿತಾ ಜೊತೆಯಾಗಿದ್ದ ಈ ಮೂವಿ ಅಂದು 8 ಕೋಟಿ ಗಳಿಸಿತ್ತು. ಇದಾದ ಮೇಲೆ ಆ ಮಟ್ಟದ ಹಿಟ್ ಸಿನಿಮಾಗಳನ್ನ ಕೊಡದ ದರ್ಶನ್ ಮತ್ತೆ ಎದ್ದು ಬಂದಿದ್ದು ಸಾರಥಿ ಸಿನಿಮಾದಲ್ಲಿ. ಗಂಡ ಹೆಂಡತಿ ಜಗಳದಿಂದ ಜೈಲು ವಾಸ ಅನುಭವಿಸಿದ್ಧ ದರ್ಶನ್ಗೆ ಸಾರಥಿ ಸಿನಿಮಾ 8 ಕೋಟಿಗೂ ಅಧಿಕ ಕಲೆಕ್ಷನ್ ತಂದುಕೊಡ್ತು. ದರ್ಶನ್ ಮತ್ತೆ ಎದ್ದು ಬಂದ್ರು. ದರ್ಶನ್ ಕರಿಯರ್ನಲ್ಲಿ ಲಾಲಿ ಹಾಡು, ನನ್ನ ಪ್ರೀತಿಯ ರಾಮು, ಸಂಗೊಳ್ಳಿ ರಾಯಣ್ಣ, ಹಾಗು ಕುರುಕ್ಷೇತ್ರ ಸಿನಿಮಾಗಳನ್ನ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಕಮರ್ಷಿಯಲಿ ಹಿಟ್ ಆದ ಸಿನಿಮಾ ಬುಲ್ ಬುಲ್. 

ಮೊದಲ ಹಂತದ ಡೆವಿಲ್ ಶೂಟಿಂಗ್ ಕಂಪ್ಲೀಟ್: ದರ್ಶನ್ ಹುಟ್ಟುಹಬ್ಬಕ್ಕೆ ಸಿದ್ಧವಾಗಿದೆ 'ದಿ ಹೀರೋ' ಟ್ರೀಟ್!

ರಚಿತಾ ರಾಮ್ ಜೊತೆ ದರ್ಶನ್ ಈ ಸಿನಿಮಾದಲ್ಲಿ ಮಿಂಚಿದ್ರು. 12 ಕೋಟಿ ಖರ್ಚಿನ ಬುಲ್ ಬುಲ್ 25 ಕೋಟಿ ಕೆಲೆಕ್ಷನ್ ಮಾಡಿತ್ತು. ಈಗಿನ ಟ್ರೆಂಡ್ಗೆ ಜಯಮಾನ ಕೂಡ ದೊಡ್ಡ ಹಿಟ್ ಕೊಟ್ಟಿದೆ. 30 ಕೋಟಿಯ ಯಜಮಾನ 55 ಕೋಟಿ ಗಳಿಸಿದೆ. ಇನ್ನು 2021ರಲ್ಲಿ ಬಂದ ರಾಬರ್ಟ್ 102 ಕೋಟಿ ಗಳಿಸಿದ್ರೆ, ಇತ್ತೀಚೆಗೆ ಬಂದ ಕಾಟೇರ ಬೇರೆಯದ್ದೇ ರೆಕಾರ್ಡ್ ಬರೆದಿದೆ. ಈ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆಗ್ಲೇ 100 ಕೋಟಿ ಕ್ಲಬ್ ಸೇರಿದೆ. ತನ್ನ 25 ವರ್ಷದ ಸಿನಿ ಜರ್ನಿಯಲ್ಲಿ 66 ಸಿನಿಮಾಗಳನ್ನ ಮಾಡಿರೋ ದರ್ಶನ್ 18ಕ್ಕು ಹೆಚ್ಚು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್