
'ಒಂದು ಕೆಜಿಎಫ್ ಸಿನಿಮಾ ಇಡೀ ಸ್ಯಾಂಡಲ್‌ವುಡ್ ಇಂಡಸ್ಟ್ರಿಯನ್ನು ಚೇಂಜ್ ಮಾಡುತ್ತದೆ ಎಂದು ನಾನು ನಂಬುವುದಿಲ್ಲ. ನನ್ನ ಪ್ರಕಾರ ಕೆಜಿಎಫ್ ಸಿನಿಮಾ ಒಂದು ಪರಿಪೂರ್ಣ ತಂಡದ ಪರಿಶ್ರಮ. ನಾನೊಬ್ಬ ಮಾಡಿರುವ ಸಿನಿಮಾ ಅದಲ್ಲ, ಇಡೀ ತಂಡ ಕೆಜಿಎಫ್ ಸಕ್ಸಸ್‌ಗೆ ಶ್ರಮಿಸಿದೆ. ನನ್ನ ಪ್ರಕಾರ ನಾವು ಎಲ್ಲಾ ಗಡಿಗಳನ್ನು ದಾಟಿ ಮುಂದೆ ಸಾಗಬೇಕು. ಜಗತ್ತಿನ ಮುಂದೆ ನಾವು, ಇಂಡಿಯಾದವ್ರು ಬರ್ತಿದೀವಿ ಎಂದು ಹೇಳ್ಬೇಕು ನಾವು' ಎಂದಿದ್ದಾರೆ ಸಭೆಯೊಂದರಲ್ಲಿ ಯುವಜನತೆ ಮುಂದೆ ಮಾತನಾಡುತ್ತಿದ್ದ ಕನ್ನಡದ ರಾಕಿಂಗ್ ಸ್ಟಾರ್ ಯಶ್.
ಇಂದಿನ ಜನರೇಶನ್ ಯೂಥ್‌ಗಳು ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನಾವು ಚಿಕ್ಕಪುಟ್ಟ ವಿಷಯಗಳಿಗೆ ಹೊಡೆದಾಡುವ, ಮನಸ್ತಾಪಗಳಿಗೆ ಕಾರಣವಾಗುವ ಬದಲು ಸಾಧ್ಯವಿರುವ ಎಲ್ಲವನ್ನೂ ಸಾಧಿಸಲು ಶ್ರಮಿಸಬೇಕು. ಜಗತ್ತಿನ ಮುಂದೆ ತಲೆ ಎತ್ತಿ ನಿಂತು ನಾವು ಭಾರತೀಯರು ಬರುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳುವಂತಾಗಬೇಕು' ಎಂದಿದ್ದಾರೆ ಪ್ಯಾನ್ ಇಂಡಿಯಾ ಸ್ಟಾರ್ ಯಶ್.
ಜಾಗ ಬದಲಾದರೂ ತಿನ್ನೋದು ಅನ್ನಾನೇ ಅಲ್ವಾ; ಆಕಾಶ್ ಮಾತಿಗೆ ಕಕ್ಕಾಬಿಕ್ಕಿಯಾದ ಸ್ನೇಹಿತ!
ಅಂದಹಾಗೆ, ನಟ ಯಶ್ ಕೆಜಿಎಫ್ ಬಳಿಕ ಯಾವುದೇ ಹೊಸ ಚಿತ್ರವನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿಲ್ಲ. ಆದರೆ, ಇದೇ ತಿಂಗಳು 19ರಂದು ಯಶ್ ನಾಯಕತ್ವದ ಹೊಸ ಚಿತ್ರದ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಯಶ್ ಸ್ವಲ್ಪ ಹಿಂಟ್ ಬಿಟ್ಟು ಕೊಟ್ಟಿದ್ದಾರೆ ಎನ್ನಬಹುದು. 'ಯಶ್ 19' ಎಂದು ಸಖತ್ ಸದ್ದು ಮಾಡುತ್ತಿರುವ ಮುಂಬರುವ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಯಶ್ ನಟನೆಯ ಹೊಸ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಎನ್ನಲಾಗುತ್ತಿದೆ.
ಸಡನ್ನಾಗಿ ರಜನಿಕಾಂತ್ ಲೈಫ್ ಟರ್ನಿಂಗ್; 25 ವರ್ಷ ಓದದೇ ಇಟ್ಟಿದ್ದ ಪುಸ್ತಕದಲ್ಲಿ ಅಂಥದ್ದೇನಿತ್ತು?
ಅಂದಹಾಗೆ, ಕೆಜಿಎಫ್ ಮತ್ತು ಕೆಜಿಎಫ್ 2 ಚಿತ್ರಗಳ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದು ವಿಶ್ವ ಮಟ್ಟದಲ್ಲಿ ತುಂಬಾ ಸೌಂಡ್ ಮಾಡಿದೆ. ಯಶ್ ನಾಯಕತ್ವದ ಈ ಸಿನಿಮಾ ಈವರೆಗೆ ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದೆ. ಆದರೆ ಕೆಜಿಎಫ್ ಸಿನಿಮಾದ ಕ್ರೆಡಿಟ್ ಇಡೀ ಟೀಮ್ ವರ್ಕ್ ಎಂದು ನಟ ಯಶ್ ಎಲ್ಲಾ ಕಡೆಯೂ ಹೇಳುತ್ತಾರೆ. ಯಾವುದೇ ಸಂದರ್ಶನ ಅಥವಾ ಮಾತುಕತೆ ವೇಳೆ ಯಶ್ 'ಕೆಜಿಎಫ್' ಸರಣಿ ಚಿತ್ರಗಳು ಇಡೀ ತಂಡದ ಶ್ರಮದಿಂದ ಮೂಡಿ ಬಂದಿರುವ ಸಕ್ಸಸ್. ಆದರೆ, ಅದೇ ಫೈನಲ್ ಅಲ್ಲ, ಮುಂದೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.