ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಓಂ ಪ್ರಕಾಶ್ ನೇರ ಮಾತುಗಳಿಂದ ಶಾಕ್ ಆದ ಚಿತ್ರತಂಡ...
ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ಯಾಕೆ ಕನ್ನಡ ಸಿನಿಮಾಗಳು ಕಲೆಕ್ಷನ್ ಮಾಡುತ್ತಿಲ್ಲ ಹಾಗೂ ಯಾಕೆ ಪರಭಾಷೆ ಸಿನಿಮಾಗಳಿಗೆ ಹೆಚ್ಚಿನ ಥಿಯೇಟರ್ ಸ್ಕ್ರೀನ್‌ಗಳು ಸಿಗುತ್ತಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೇರ ನುಡಿಗೆ ಖ್ಯಾತಿ ಪಡೆದಿರುವ ಓಂ ಪ್ರಕಾಶ್‌ರವರ ಮಾತುಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ, ಸಿನಿ ಮಂದಿ ಶಾಕ್ ಆಗಿದ್ದಾರೆ.
'ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾ ತುಂಬಿಸಿದರೆ ಮಾತ್ರ ಜನ ಸಿನಿಮಾ ನೋಡುವುದು. ನಾವು ರಿಲೀಸ್ ಮಾಡಿದಾಗ ಜನರು ಬರ್ತಾರೆ ಅನ್ನೋ ಮನಸ್ಥಿತಿಯಲ್ಲಿ ಇರ್ಬೇಡಿ. ಒಳ್ಳೆ ಸಿನಿಮಾ ಹಾಕಿದ್ದೀನಿ ಜನ ಬಂದಿಲ್ಲ ಅಂತ ಚಿತ್ರತಂಡ ಹೇಳುತ್ತದೆ ...ಅವರಿಗೆ ಹಾಗೆ ಹೇಳುವ ಅಧಿಕಾರವಿಲ್ಲ. ಜನರು ಸಿನಿಮಾ ಚೆನ್ನಾಗಿದೆ ಎಂದು ಹೇಳಬೇಕು. ಕಷ್ಟ ಪಟ್ಟು ಸಿನಿಮಾ ಮಾಡಿರುವೆ ಎಂದು ಯಾರು ಪಬ್ಲಿಕ್‌ನಲ್ಲಿ ಹೇಳಬೇಡಿ..ಇಷ್ಟ ಪಟ್ಟು ಸಿನಿಮಾ ಮಾಡಿ ನಾವು ಥಿಯೇಟರ್‌ಗೆ ಬಂದು ಚಪ್ಪಾಳೆ ಹೊಡೆಯುತ್ತೀನಿ' ಎಂದು ಬಿ ಗಣಪತಿ ಅವರ ಸಂದರ್ಶನದಲ್ಲಿ ಮಾತನಾಡಿದ್ದಾರೆ.
undefined
ಮಧ್ಯರಾತ್ರಿ 12 ಗಂಟೆಗೆ ಆಡಿಷನ್, 2.30ಗೆ ಸೆಲೆಕ್ಟ್; ಅವಕಾಶ ಗಿಟ್ಟಿಸಿಕೊಂಡ ಘಟನೆ ಬಿಚ್ಚಿಟ್ಟ 'ಬೃಂದಾವನ' ನಟ
ಕನ್ನಡ ಬೆಳಸಬೇಕು...ಬೇರೆ ಭಾಷೆಗಳಿಗೂ ಗೌರವ ಕೊಡೋಣ ಆದರೆ ಕನ್ನಡಿಗರಲ್ಲಿ ಯಾರೂ ಇಲ್ಲ ಅಂತ ಹೇಳಬೇಡಿ. ಮಂಗಳೂರಿನವರು ಸಿನಿಮಾ ಮಾಡುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ....ಯಾಕೆ ಹಾಗೆ ಹೇಳುತ್ತಿರುವುದು? ಮಂಗಳೂರು ಅಫ್ಘಾನಿಸ್ತಾನದಲ್ಲಿ ಇದ್ಯಾ? ನಮ್ಮ ಹುಡುಗರು ಯಾಕೆ ಅವರ ಬಗ್ಗೆ ಕಾಮೆಂಟ್ ಮಾಡಬೇಕು. ಶೆಟ್ರು ಗ್ಯಾಂಗ್‌ಗೆ ಯಶಸ್ಸು ಸಿಕ್ಕಿದೆ ಅವರಿಗೆ ಸಪೋರ್ಟ್ ಮಾಡೋಣ ಎಂದು ಓಂ ಪ್ರಕಾಶ್ ಹೇಳಿದ್ದಾರೆ.
ನಟ-ನಟಿಯರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದು ನೀವು ಹೀರೋ ಆಗಿ ನಿಂತ ಮೇಲೆ. ನಿಮ್ಮ ಯಶಸ್ಸಿಗೆ ಬೆನ್ನ ಹಿಂದೆ ನಿಂತಿರುವ ಜನರು. ಅಭಿಮಾನಿಗಳಿಗೋಸ್ಕರ ಸಿನಿಮಾ ಮಾಡಲೇ ಬೇಕು. ಹಸಿವು ಆ ಹೋರಾಟ ನಾಯಕರಲ್ಲಿ ಕಡಿಮೆ ಆಗಿದೆ. ಬೇರೆ ಭಾಷೆ ನಿರ್ದೇಶಕರು ಬಂದು ನಿಮ್ಮನ್ನು ಹಿಟ್ ಮಾಡಿಲ್ಲ ಕನ್ನಡಿಗರು ಬೆಳೆಸಿರುವುದು. ನಮ್ಮ ಕನ್ನಡ ಸಿನಿಮಾವನ್ನು ಚೆನ್ನೈನಲ್ಲಿ ರಿಲೀಸ್ ಮಾಡಿ. ರಿಲೀಸ್ ಮಾಡಿದರೆ ಕನ್ನಡಿ ಸಿನಿಮಾ ಮಂದಿ ಟ್ಯಾಕ್ಸ್ ಕಟ್ಟುತ್ತಿದ್ದಾರೆ ಅಂತ ಹೇಳಿ. ಶಾರುಖ್ ಖಾನ್ ಸಿನಿಮಾ ಕೋಟಿಯಲ್ಲಿ ಸಂಪಾದನೆ ಮಾಡಿದೆ ಇದಕ್ಕೆ ಕರ್ನಾಟಕದ ಲಾಭನೂ ಸೇರಿದೆ ಎಂದಿದ್ದಾರೆ ಓಂ ಪ್ರಕಾಶ್.
ಇದು... ಇದು ಚೆನ್ನಾಗಿರೋದು; ಇದ್ದಕ್ಕಿದ್ದಂತೆ ಸಣ್ಣಗಾದ ಶ್ರುತಿ ಹರಿಹರನ್‌ನ ನೋಡಿ ಬೆಂಕಿ ಎಂದ ನೆಟ್ಟಿಗರು!
ನಮ್ಮಲ್ಲಿ ಕನ್ನಡ ಸಿನಿಮಾ ಮಾಡ್ತಿಲ್ಲ ಒಳ್ಳೆ ಕಥೆ ಇಲ್ಲ ಅಂತ ಒಪ್ಪಿಕೊಳ್ಳಿ. ಕುಳಿತುಕೊಂಡು ಮಾತನಾಡುವುದಿಲ್ಲ ಚರ್ಚೆ ಮಾಡಲ್ಲ. ನಾನು ಸಿನಿಮಾ ಮಾಡಿದ್ದೀನಿ ಹಿಟ್ ಆಗುತ್ತೆ ಅಂತ ಓವರ್ ಕಾನ್ಫಿಡೆನ್ಸ್‌ನಿಂದ ಹೇಳಬೇಡಿ..ಸಿನಿಮಾ ಚೆನ್ನಾಗಿದೆ ಎಂದು ಹೇಳಲು ಧೈರ್ಯ ಇರುವುದು ಪಬ್ಲಿಕ್‌ಗೆ ಮಾತ್ರ. ಯಶ್ ನಮ್ಮ ಕನ್ನಡದವರು ನಾವು ಅವರಿಗೆ ಗೌರವ ಕೊಡಬೇಕು. ಸಿನಿಮಾ ಮಾಡುವ ನಿರ್ದೇಶಕರ ನಡುವೆ ಯುದ್ಧ ಇರಬೇಕು ಅದು ಹೊರತು ಪಡಿಸಿದರೆ ಮಾತ್ರ ನಾವು ಸ್ನೇಹಿತರು. ಕಾಂಪಿಟೇಷನ್ ಇಲ್ಲ ಅಂದ್ರೆ ಸಿನಿಮಾ ಹಿಟ್ ಆಗಲ್ಲ ಎಂದು ಓಂ ಪ್ರಕಾಶ್ ಹೇಳಿದ್ದಾರೆ.