ಯಶ್ ನಾಯಕತ್ವ ಹಾಗು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾಗಳ ಖ್ಯಾತಿ ಮತ್ತು ಕಲೆಕ್ಷನ್ ಬಗ್ಗೆ ಜಗತ್ತಿಗೇ ತಿಳಿದಿದೆ. ಕೆಜಿಎಫ್ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್..
ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ. ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ರೇಂಜ್ ಸಾಕಷ್ಟು ಬದಲಾಗಿದೆ. ನಟ ಯಶ್ ಈಗ ಇಂಟರ್‌ನ್ಯಾಷನಲ್ ಪ್ರಸಿದ್ಧಿ ಹೊಂದಿರುವ ಪ್ಯಾನ್ ಇಂಡಿಯಾ ಸ್ಟಾರ್. ಅದನ್ನು ನ್ಯಾಷನಲ್ ಸ್ಟಾರ್ ಎಂದು ಕೂಡ ಹೇಳಬಹುದು. ನಟ ಯಶ್ ನಡೆ ನುಡಿ ಎಲ್ಲವೂ ಈಗ ಜಗತ್ತಿನ ಜನರಿಗೆ ಸ್ಪಿರಿಟ್ ಕೊಡುವಂಥದ್ದು ಎನ್ನಬಹುದು. ಹಾಗಿದ್ದರೆ ಯಶ್ ಆಡಿರುವ ಯಾವ ಮಾತನ್ನು ಇಲ್ಲಿ ಹೇಳಲಾಗಿದೆ ಗೊತ್ತೇ?
ನಟ ಯಶ್ ಮಾತನಾಡುತ್ತ 'ನಾನು ಯಾವತ್ತೂ ಹಣಕ್ಕಾಗಿ ಕೆಲಸ ಮಾಡಿಲ್ಲ. ಆದರೆ ನಾನು ಯಾವತ್ತೂ ಹಣಕ್ಕೆ ಮಹತ್ವ ಕೊಡ್ತೀನಿ. ನಾನು ಕೆಜಿಎಫ್ ಚಿತ್ರಕ್ಕೆ ಕೇವಲ ನಟನಲ್ಲ, ನಿರ್ಮಾಪಕ ಕೂಡ. ನನಗೆ ಹಣದ ಮಹತ್ವ ಚೆನ್ನಾಗಿ ಗೊತ್ತು.. ಆದರೆ ಹಣ ಯಾವತ್ತೂ ನನ್ನನ್ನು ಅಚ್ಚರಿಗೆ ಅಂದರೆ, ಎಕ್ಸೈಟ್‌ಮೆಂಟ್‌ಗೆ ದೂಡಿಲ್ಲ. ನಾನು ಕೆಜಿಎಫ್ ಚಿತ್ರದಲ್ಲಿ ನಟ ಮಾತ್ರವಲ್ಲ, ನಿರ್ಮಾಪಕ ಕೂಡ. ಹಣ ಎಂಬುದು ಅದೊಂದು ಶಕ್ತಿ ಅಥವಾ ಇಂಧನ. ಅದನ್ನು ಬಳಸಿಕೊಂಡು ನಾವು ಮತ್ತೊಂದು ಡೆಸ್ಟಿನೇಶನ್‌ಗೆ ಹೋಗಬಹುದು. ಅದಿಲ್ಲದಿದ್ದರೆ ನೀವು ಜೀವನದಲ್ಲಿ ಇರುವಲ್ಲಿಂದ ಮುಂದಕ್ಕೆ ಎಲ್ಲಿಗೂ ಹೋಗಲು ಆಗುವುದಿಲ್ಲ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಅಪರ್ಣಾ ಸಾವಿಗೆ ಯಾಕಿಷ್ಟು ಕಂಬನಿ, ಸಾವಿನ ಬಳಿಕವೂ ಜೀವಿಸೋದು ಅಂದ್ರೇನು ಅಂತ ಹೇಳಿಕೊಟ್ರಾ..?
ಅಂದರೆ, ಇಲ್ಲಿ ಒಂದು ಮಾತಂತೂ ಕ್ಲಿಯರ್ ಆಗಿದೆ. ನಟ ಯಶ್ ಕೆಜಿಎಫ್ ಸಿನಿಮಾದಲ್ಲೇ ನಿರ್ಮಾಪಕರು ಆಗಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿದ್ದಾರೆ. ಆದರೆ, ಎಲ್ಲರೂ ಅದನ್ನು ಮರೆತು, ಯಶ್ ಅವರು ಮುಂಬರುವ ಬಾಲಿವುಡ್‌ನ 'ರಾಮಾಯಣ' ಚಿತ್ರಕ್ಕೆ ಮೊಟ್ಟಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ ಅಂತಲೇ ಅಂದುಕೊಂಡಿದ್ದರು. ಹಾಗೆಯೇ ಸುದ್ದಿ ಕೂಡ ಆಗುತ್ತಿದೆ. ಆದರೆ, ನಿಜ ಸಂಗತಿ ಏನೆಂದರೆ, ನಟ ಯಶ್ ಅವರು ಕೆಜಿಎಫ್ ಚಿತ್ರದಲ್ಲೇ ತಮ್ಮ ಸಿನಿಮಾಗೆ ತಾವು ಕೂಡ ಬಂಡವಾಳ ಹೂಡಿದ್ದಾರೆ, ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಅಂದರೆ, ನಟ ಯಶ್, ರಾಮಾಯಣ ಚಿತ್ರಕ್ಕೂ ಮೊದಲೇ 'ಕೆಜಿಎಫ್'ನಲ್ಲೇ ಪ್ರೊಡ್ಯೂಸರ್ ಆಗಿದ್ದಾರೆ.
ಬೆಂಗಳೂರಲ್ಲೆ ಬೇಕಾದಷ್ಟು ಜಾಗ ಸಿಗ್ತವೆ, ಮಾರಿದ್ರೆ ತುಂಬಾ ರೇಟೂ ಬರುತ್ತೆ; ರಾಕಿಂಗ್ ಸ್ಟಾರ್ ಯಶ್!
ಅಂದಹಾಗೆ, ನಟ ಯಶ್ ನಾಯಕತ್ವ ಹಾಗು ಪ್ರಶಾಂತ್ ನೀಲ್ (Prashanth Neel) ಡೈರೆಕ್ಷನ್ ಸಿನಿಮಾಗಳಾದ 'ಕೆಜಿಎಫ್' & 'ಕೆಜಿಎಫ್ 2' ಸಿನಿಮಾಗಳ ಪ್ರಸಿದ್ಧಿ ಮತ್ತು ಕಲೆಕ್ಷನ್ ಬಗ್ಗೆ ಜಗತ್ತಿಗೇ ತಿಳಿದಿದೆ. ಕೆಜಿಎಫ್ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಜಾಸ್ತಿ ಆಗಿದ್ದು, ಈ ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಬರೆದಿದೆ. ಬಾಲಿವುಡ್‌ನ 'ದಂಗಲ್' ಹಾಗೂ ತೆಲುಗಿನ 'ಬಾಹುಬಲಿ-2' ಚಿತ್ರಗಳ ಬಳಿಕ ಯಶ್ ನಟನೆಯ 'ಕೆಜಿಎಫ್2' KGF 2 ಚಿತ್ರವು ಭಾರತದಲ್ಲಿ ಅತೀ ಹೆಚ್ಚಿನ ಗಳಿಕೆ ಕಂಡಿರುವ ಮೂರನೆಯ ಚಿತ್ರವಾಗಿ ಹೊರಹೊಮ್ಮಿದೆ.
ಹಾಸನದಲ್ಲೇ ಹುಟ್ಟಿರೋ ಮಗ ನಾನು, ನಮ್ ತಂದೆ-ತಾಯಿ ಹಾಸನದವ್ರೇ..; KGF ಸ್ಟಾರ್ ಯಶ್!
ಈ ಮೂಲಕ ಕೆಜಿಏಫ್-2 ಚಿತ್ರವು, ರಾಜಮೌಳಿ ನಿರ್ದೇಶನ ಮತ್ತು ಜೂನಿಯರ್ ಎನ್‌ಟಿಆರ್-ರಾಮ್ ಚರಣ್ ನಟನೆಯ 'ಆರ್‌ಆರ್‌ಅರ್' ಚಿತ್ರವನ್ನು ಕೆಳಕ್ಕೆ ತಳ್ಳಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಗೀತೂ ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್'ನಲ್ಲಿಯೂ ಯಶ್ ನಟಿಸುತ್ತಿದ್ದಾರೆ. ಇನ್ನೊಂದು ಸಂಗತಿ ಎಂದರೆ, ನಟ ಯಶ್ ರಾಮಾಯಣ ಸಿನಿಮಾಗೆ ಮತ್ತೆ ನಿರ್ಮಾಪಕರೂ ಆಗಿದ್ದು, ಈ ಮೂಲಕ ನಟ-ನಿರ್ಮಾಪಕರಾಗಿ ಮತ್ತೊಮ್ಮೆ ಮುಂದುವರೆದಿದ್ದಾರೆ.
ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!
ಒಟ್ಟಿನಲ್ಲಿ, ನಟ ಯಶ್ ಈಗ ವರ್ಲ್ಡ್ ಫೇಮಸ್ ಸ್ಟಾರ್. ಇನ್ನು ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಬಿಡುಗಡೆ ಬಳಿಕ ನಟ ಯಶ್ ಅವರನ್ನು ಜಾಗತಿಕ ನಟ ಎಂದೇ ಗುರುತಿಸಲಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೇ ಆದರೂ ಕನ್ನಡ ಮೂಲದ ನಟರೊಬ್ಬರು ಈ ಮಟ್ಟಿಗೆ ಜಗತ್ತೇ ಅಚ್ಚರಿಯಿಂದ ಕಣ್ಬಿಟ್ಟು ನೋಡುವಂತೆ ಬೆಳೆದಿರುವದೇ ಹೆಮ್ಮೆ ಪಡುವಂಥ ಸಂಗತಿ...!