ಈ ಕಾರಣಕ್ಕೆ ರಚಿತಾ ರಾಮ್ ಇನ್ನು ಚಿತ್ರರಂಗದಲ್ಲಿದ್ದಾರೆ ಎಂದ ನಟ ದುನಿಯಾ ವಿಜಯ್

Published : Sep 14, 2022, 03:54 PM IST
  ಈ ಕಾರಣಕ್ಕೆ ರಚಿತಾ ರಾಮ್ ಇನ್ನು ಚಿತ್ರರಂಗದಲ್ಲಿದ್ದಾರೆ ಎಂದ ನಟ ದುನಿಯಾ ವಿಜಯ್

ಸಾರಾಂಶ

ನಟ ದುನಿಯಾ ವಿಜಯ್ ಮಾನ್ಸೂನ್ ರಾಗ ಪ್ರೀ ರಿಲೀಸ್ ಈವೆಂಟ್‌ನಲ್ಲಿ ರಚಿತಾ ರಾಮ್ ಅವರನ್ನು ಹಾಡಿಹೊಗಳಿದರು. 

ಸ್ಯಾಂಡಲ್ ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಮಾನ್ಸೂನ್ ರಾಗ ಸಿನಿಮಾ ಕೂಡ ಒಂದು. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿರುವ ಮಾನ್ಸೂನ್ ರಾಗ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಸಿನಿಮಾತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಆಗಮಿಸಿದ್ದರು. ನಟಿ ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್‌ ಕುಮಾರ್, ಯಶ ಶಿವಕುಮಾರ್ ಸೇರಿದಂತೆ ಇಡಿ ತಂಡ ಹಾಜರಗಿತ್ತು.

ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಸಿನಿಮಾತಂಡ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಅಂದಹಾಗೆ ದುನಿಯಾ ವಿಜಯ್ ಈ ಪ್ರೀ ರಿಲೀಸ್ ಈವೆಂಟ್‍‌ಗೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ರಚಿತಾ ರಾಮ್ ಅವರನ್ನು ಹಾಡಿಹೊಗಳಿದ್ದಾರೆ. 
ರಚಿತಾ ರಾಮ್ ಇಷ್ಟು ವರ್ಷ ಸಿನಿಮಾರಂಗದಲ್ಲಿ ಇದ್ದಾರೆ ಅಂದರೆ ರಚಿತಾ ಎದೆಯಲ್ಲಿ ಮೋಸ ಇಲ್ಲ ಹಾಗಾಗಿ ಎಂದು ಹೇಳಿದ್ದಾರೆ. ಧನಂಜಯ್ ಮತ್ತು ದುನಿಯಾ ವಿಜಯ್ ಇಬ್ಬರೂ ವೇದಿಕೆಯಲ್ಲಿ ನಿಂತು ಮಾತನಾಡುವಾಗ ರಚಿತಾ ರಾಮ್ ಅವರನ್ನು ಹಾಡಿಹೊಗಳಿದರು. 'ರಚಿತಾ ಎದೆಯಲ್ಲಿ ಮೋಸ ಇಲ್ಲ. ಅದಕ್ಕೆ ಅವರು ಇನ್ನೂ ಚಿತ್ರರಂಗದಲ್ಲಿದ್ದಾರೆ' ಎಂದು ಹೇಳಿದರು. 'ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ‌' ಎಂದು ಹೇಳಿದರು.  

ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ: ಧನಂಜಯ್

ಇನ್ನು ನಟಿ ಸುಹಾಸಿನಿ ಬಗ್ಗೆಯು ದುನಿಯಾ ವಿಜಯ್ ಮಾತನಾಡಿದ್ದಾರೆ. ಅವರನ್ನು ಹಾಡಿ ಹೊಗಳಿದ್ದಾರೆ.   ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಬಂಧನ ಪಾತ್ರ ಮಾಡ್ತೀನಿ.  
ಸುಹಾಸಿನಿ ಮೇಡಂ ಜೊತೆ ಒಂದ್ ಫೋಟೋ ತಗೋಬೇಕು' ಅಂತ ದುನಿಯಾ‌ ವಿಜಯ್ ಹೇಳಿದರು. ಇನ್ನು ನಟ ಧನಂಜಯ್ ಕೂಡ ಮಾತನಾಡಿ ಮಾನ್ಸೂನ್ ರಾಗ ತುಂಬಾ ನೆನಪುಗಳನ್ನ ಕೊಟ್ಟಿದೆ. ರಚಿತಾ ರಾಮ್ ಜೊತೆ ನಟಿಸಿದ್ದು ಖುಷಿಯಾಗಿದೆ. ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ ಅವಾಗ. ಕತ್ರಿ ಗುಪ್ಪೆಯಲ್ಲಿ ರಚಿತಾ ಇದ್ರು. ಆಗ ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ಮನೆ ಮುಂದೆ ಬೀಟ್ ಹಾಕ್ತಿದ್ವಿ' ಎಂದು ಹೇಳಿದರು. 

ದುನಿಯಾ ವಿಜಯ್‌ ಅವರನ್ನು ರಚಿತಾ ರಾಮ್ ಏನಂತ ಕರೆಯೋದು? ಡಿಂಪಲ್ ಕ್ವೀನ್ ಹೇಳಿದಿಷ್ಟು

ಇನ್ನು ನಟ ಧನಂಜಯ್ ಸುಹಾಸಿನಿ ಅವರಿಗಾಗಿ ಹಾಡು ಹಾಡಿದರು. ಧನಂಜಯ್ ಅವರ ಕವಿತೆಗೆ  ನೂರೊಂದು ನೆನಪು ಹಾಡನ್ನು ಸುಹಾಸಿನಿ ಹಾಡಿದ್ರು. ಧನಂಜಯ್ ಮತ್ತು ದುನಿಯಾ ವಿಜಯ್ ಹೊಗಳಿಗೆ ನಟಿ ರಚಿತಾ ರಾಮ್ ಎದ್ದು ಕೈ ಮುಗಿದರು. ಇನ್ನು ಮಾನ್ಸೂನ್ ರಾಗ ಮೂಲಕ ನಟಿ ಸುಹಾಸಿನಿ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಾನ್ಸೂನ್ ರಾಗ ಸಿನಿಮಾ ಸೆಪ್ಟಂಬರ್ 16ರಂದು ತೆರೆಗೆ ಬರುತ್ತಿದ್ದು ಅಭಿಮಾನಿಗಳು ಕಾರರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Radhika Pandit: ಯಶ್ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಬಗ್ಗೆ ನಿಮಗೆ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌