ಟೇಕ್ ಇಟ್ ಈಸಿ, ಏನೇ ಬಂದರೂ ನೋಡಿಕೊಳ್ಳೋಣ: ಇದು 'ಮರ್ಯಾದೆ ಪ್ರಶ್ನೆ'!

By Shriram Bhat  |  First Published Oct 18, 2024, 7:13 PM IST

ಈ ಚಿತ್ರವನ್ನು ನೋಡದಿದ್ದರೆ ನಿರ್ಮಾಕರಾಗಿರುವ ಅವರಿಬ್ಬರದೂ 'ಮರ್ಯಾದೆ ಪ್ರಶ್ನೆ' ಬೀದಿಗೆ ಬರಲಿದೆ..ಸದ್ಯ ಪ್ರಚಾರಕಾರ್ಯ ಶುರು ಮಾಡಿರುವ ಸಿನಿಮಾ ಟೀಮ್, ಸಿನಿಮಾ ಬಿಡುಗಡೆ ಲೇಟ್ ಮಾಡಿದರೆ ಎದುರಾಗಲಿದೆ 'ಮರ್ಯಾದೆ ಪ್ರಶ್ನೆ..!


ಸಖತ್ ಸ್ಟುಡಿಯೋ (Sakkath Studio) ಮೂಲಕ ಕನ್ನಡ ಚಿತ್ರರಂಗಕ್ಕೊಂದು ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿಯನ್ನು ಕೇಳಿಯೇ ಇರುತ್ತೀರಿ.. ಆ ಸಮಯ ಬಹಳಷ್ಟು ಹತ್ತಿರ ಬರುತ್ತಿದೆ. ಇನ್ನೂ ಆ ಸಿನಿಮಾ ಬಂದಿಲ್ಲ ಅಂದ್ರೆ ನಿಜವಾಗಿಯೂ ಅದು 'ಮರ್ಯಾದೆ ಪ್ರಶ್ನೆ' ಆಗುತ್ತೆ ಅಲ್ವಾ? ಹೌಡು, ಖಂಡಿತವಾಗಿಯೂ ಅದು ಆರ್‌ಜೆ ಪ್ರದೀಪ್ ನಿರ್ಮಾಣದ 'ಮರ್ಯಾದೆ ಪ್ರಶ್ನೆ'..!

ಸಖತ್ ಸ್ಟುಡಿಯೋ ಬ್ಯಾನರ್‌, ಆರ್‌ಜೆ ಪ್ರದೀಪ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಮರ್ಯಾದೆ ಪ್ರಶ್ನೆ' ಸಿನಿಮಾ (Maryade Prashne) ಈಗ ಪ್ರಮೋಶನ್ ಹಂತಕ್ಕೆ ಬಂದಿದೆ. ಇದೀಗ 'ಕಷ್ಟ-ನಷ್ಟ ಯಾರಿಗಿಲ್ಲ? ಏನೇ ಬಂದರೂ ನೋಡಕೊಳ್ಳೋಣ, Easy take it Easy "ಬಾಳು" crazy crazy..' ಎನ್ನುವ ಹಾಡು ಯೂಟ್ಯೂಬ್‌ ಮೂಲಕ ಲಾಂಚ್ ಆಗಿದೆ. ನಟ ಶರಣ್ (Sharan Hruday) ಈ ಹಾಡನ್ನು ಹಾಡಿದ್ದು, ಇದಕ್ಕೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಸಂಗೀತ ನೀಡಿರುವವರು ಅರ್ಜುನ್ ರಾಮು. 

Tap to resize

Latest Videos

undefined

ಸಿಂಪಲ್ ಸುನಿಗೆ 'ದೇವರು ರುಜು ಮಾಡಿದನು', ನ್ಯೂ ಹೀರೋ ವೀರಾಜ್‌ಗೆ ಸಿಕ್ತು ಆಶೀರ್ವಾದ!

ಆರ್‌ಜೆ ಪ್ರಧಿಪ್ ಕಥೆಗೆ ನಾಗರಾಜ್ ಸೋಮಯಾಜಿ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು 'ಮರ್ಯಾದೆ ಪ್ರಶ್ನೆ' ಸಿನಿಮಾ ಮಾಡಿದ್ದಾರೆ. ಅದು ಯಾರ ಮರ್ಯಾದೆ ಪ್ರಶ್ನೆ? ಆರ್‌ಜೆ ಪ್ರದೀಪ್‌ ಅವರದೋ, ನಟನಟಿಯರದೋ, ನಿರ್ದೇಶಕರದೋ, ಕನ್ನಡ ಚಿತ್ರರಂಗದ್ದೋ ಅಥವಾ ಪ್ರೇಕ್ಷಕರದ್ದೋ ಎಂದು ತಿಳಿದುಕೊಳ್ಳಲು 'ಮರ್ಯಾದೆ ಪ್ರಶ್ನೆ' ಸಿನಿಮಾವನ್ನೇ ನೋಡಬೇಕಂತೆ.. ಹಾಗಂದಿದೆ 'ಮರ್ಯಾದೆ ಪ್ರಶ್ನೆ' ಮಾಡಿರುವ ಸಿನಿಮಾ ಟೀಮ್!

ಶ್ವೇತಾ ಆರ್‌ ಪ್ರಸಾದ್ ಹಾಗೂ ವಿದ್ಯಾಗಂಧಿ ರಾಜನ್ 'ಮರ್ಯಾದೆ ಪ್ರಶ್ನೆಯನ್ನು ಜಂಟಿಯಾಗಿ ನರ್ಮಾಣ ಮಾಡಿದ್ದಾರೆ. ನೀವು ಈ ಚಿತ್ರವನ್ನು ನೋಡದಿದ್ದರೆ ನಿರ್ಮಾಕರಾಗಿರುವ ಅವರಿಬ್ಬರದೂ 'ಮರ್ಯಾದೆ ಪ್ರಶ್ನೆ' ಬೀದಿಗೆ ಬರಲಿದೆ ಎಂಬುದನ್ನು ಮರೆಯಲಾಗದು! ಸದ್ಯ ಪ್ರಚಾರಕಾರ್ಯ ಶುರು ಮಾಡಿರುವ ಸಿನಿಮಾ ಟೀಮ್ ಆದಷ್ಟು ಬೇಗ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಲೇಟ್ ಆದರೆ ಮತ್ತೆ ಎದುರಾಗಲಿದೆ 'ಮರ್ಯಾದೆ ಪ್ರಶ್ನೆ..!

ಅನುಶ್ರೀ ಮರ್ಯಾದೆ ತೆಗೆದ ವಂಶಿಕಾ, ಇನ್ಯಾರನ್ನು ಬಿಟ್ಟಳು ನೀವೇ ಹೇಳಿ?

ಈ ಹಾಡಿನಲ್ಲಿ  ನಟರ ಪಾತ್ರದ ಪರಿಚಯದ ಜೊತೆ ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜವನ್ನು ಪರಿಚಯಿಸುವ ಸಲುವಾಗಿ ಸಾಂದರ್ಭಿಕವಾಗಿ ಈ ಹಾಡನ್ನು ಬಳಸಲಾಗಿದೆ ಎಂದು ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ತಿಳಿಸಿದ್ದಾರೆ.

ಈಗಾಗಲೇ ಬಿಡುಗಡೆ ಮಾಡಿರುವ ಕ್ಯಾರೆಕ್ಟರ್ ಪೋಸ್ಟರ್ ನಲ್ಲಿ ರಾಕೇಶ್ ಅಡಿಗ ಅವರು ಒಬ್ಬ ಕಾರ್ಯಕರ್ತನಾಗಿ  ಸುನಿಲ್ ರಾವ್ ಅವರು ಒಬ್ಬ ಡೆಲಿವರಿಬಾಯಾಗಿ, ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ.

ಅಮೂಲ್ಯಾ ಅಣ್ಣ ದೀಪಕ್ ಅರಸ್ ಲೈಫ್ ಸ್ಟೋರಿ ಅಂತಿಂಥದ್ದಲ್ಲ, ಏನೇನೋ ಆಗಿಬಿಟ್ಟಿತ್ತು..!

ಮಧ್ಯಮ ವರ್ಗದ ಬಗ್ಗೆ ಇರುವ ಈ ಕತೆಯಲ್ಲಿ ಈ ಹಾಡು ತುಂಬಾ ಸೊಗಸಾದ ಸಾಹಿತ್ಯವನ್ನು ಒಳಗೊಂಡಿದೆ.ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಧನಾತ್ಮಕ ಚಿಂತನೆಗೆ ಕರೆದೊಯ್ಯುತ್ತದೆ. ದಿನ ಬೆಳಗಾದರೆ ಕೇಳುವ ಹಾಡಾಗಿರಬೇಕು ಎಂಬುದು  ಈ ಹಾಡಿನ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ. ಈ ಹಾಡು  ಸಕ್ಕತ್ ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಹೊಂದಿದ್ದು ಹಾಡಿಗೆ ಒಳ್ಳೆಯ ಅಭಿಪ್ರಾಯಗಳು ಮೂಡಿ ಬರುತ್ತಿದೆ.

click me!