ಅನುಶ್ರೀ ಮರ್ಯಾದೆ ತೆಗೆದ ವಂಶಿಕಾ, ಇನ್ಯಾರನ್ನು ಬಿಟ್ಟಳು ನೀವೇ ಹೇಳಿ?

By Shriram Bhat  |  First Published Oct 18, 2024, 5:42 PM IST

ಪುಟ್ಟ ವಂಶಿಕಾಳಿಂದ ದೊಡ್ಡ ಆಂಕರ್ ಅನುಶ್ರೀ ಮರ್ಯಾದೆ ಹೋಯ್ತಾ? ಅಥವಾ, ವಂಶಿಕಾ ತನ್ನ ಮರ್ಯಾದೆಯನ್ನು ತಾನೇ ತೆಗೆದುಕೊಂಡಳಾ? ಅಥವಾ ಅನುಶ್ರೀ ಅವರೇ ತಮ್ಮ ಮರ್ಯಾದೆ ತಾವೇ ಹರಾಜು ಹಾಕಿಕೊಂಡ್ರಾ ಅಂತ ನೀವೇ ಒಂದು ಕಾಮೆಂಟ್ ಮಾಡಿ ಪ್ಲೀಸ್.. 


ಅದೊಂದು ವೇದಿಕೆ. ಅರಳು ಹುರಿದಂತೆ ಮಾತನಾಡುವ ಇಬ್ಬರು ಅಲ್ಲಿ ವೇದಿಕೆ ಮೇಲಿದ್ದರು. ಒಬ್ಬರು ಕರ್ನಾಟಕವನ್ನೇ ಮಾತನಾಡಿಸುವ ಅನುಶ್ರೀ, ಇನ್ನೊಬ್ಬಳು ಪುಟ್ಟ ಹುಡುಗಿ ಸಖತ್ ಚೂಟಿ ವಂಶಿಕಾ. ಮೈಕ್‌ನಲ್ಲಿ ಅನುಶ್ರೀ (Anushree) ಅವರು ವಂಶಿಕಾ ಸಿನಿಮಾದಲ್ಲಿ ನಟಿಸಿದ್ದನ್ನು ಬಹಿರಂಗ ಪಡಿಸಿಬಿಟ್ಟರು. ಹಾಗೇ, ಪಕ್ಕದಲ್ಲಿದ್ದ ವಂಶಿಕಾ (Vanshika) ಬಳಿ 'ಸಿನಿಮಾದಲ್ಲಿ ನಿನ್ನ ಪಾತ್ರದ ಹೆಸರೇನು' ಎಂದು ಕೇಳಿಬಿಟ್ಟರು. 

ಅದಕ್ಕೆ ಪುಟ್ಟಿ ವಂಶಿಕಾ ಹೇಳಲೋ ಬೇಡವೋ ಎಂಬಂತೆ ಯೋಚಿಸುತ್ತ, ಕೊನೆಗೂ ಬಾಯ್ಬಿಟ್ಟು 'ತನು' ಎಂದಿದ್ದಾಳೆ. ಅಷ್ಟಕ್ಕೇ ಸುಮ್ಮನಾಗದ ಅನುಶ್ರೀ 'ನೀನು ವಸಿಷ್ಠ ಸಿಂಹ ಸರ್ ತರ ಆಕ್ಟ್ ಮಾಡ್ತೀಯಂತೆ.. ಅವರು ನಡೆದಾಡೋ ತರ, ಮಾತಾಡೋ ತರ ಎಲ್ಲಾ ಮಾಡ್ತೀಯಂತೆ.. ಎಲ್ಲಿ, ಒಮ್ಮೆ ಮಾಡಿ ತೋರ್ಸು ನೋಡೋಣ' ಅಂತ ಹೇಳ್ಬಿಟ್ರು. ಆದರೆ ವಂಶಿಕಾ 'ಅವೆಲ್ಲಾ ಸುಳ್ಳು, ಇಲ್ಲವೇ ಇಲ್ಲ, ನಂಗೆ ಅವೆಲ್ಲಾ ಬರೋದೇ ಇಲ್ಲ' ಅಂದುಬಿಡೋದಾ..!?

Tap to resize

Latest Videos

undefined

ಮೆಟ್ಟಿಲು ನೋಡ್ತಾ ನಿಲ್ಲಬಾರ್ದು, ಹತ್ತೋಕೆ ಪ್ರಯತ್ನ ಪಡ್ಬೇಕು; ಅಭಿಮನ್ಯುಗೆ ಕೋಮಲ್ ಕಿವಿಮಾತು!

ಅಷ್ಟೊಂದು ಜನರ ಮುಂದೆ ಅನುಶ್ರೀ ಹೇಳಿದ್ದು ಸುಳ್ಳು ಎಂದು ವಂಶಿಕಾ ನಿರೂಪಿಸಿದಂತೆ ಆಯ್ತಲ್ಲ..! ಅದನ್ನು ತಕ್ಷಣವೇ ಅರಿತ ಅನುಶ್ರೀ, 'ಅಲ್ಲ, ನೀನು ಇಷ್ಟೊಂದು ಜನರ ಮುಂದೆ ನಾನು ಹೇಳಿದ್ದು ಸುಳ್ಳು ಅಂತ ಹೇಳಿ ನನ್ ಮರ್ಯಾದೆ ತೆಗೆದ್ಬಿಟ್ಟೆ.. ಹಾಗಿದ್ರೆ, ನಿಮ್ ಸಿನಿಮಾ ಟೀಮ್ ನಂಗೆ ಹೇಳಿದ್ದು ಸುಳ್ಳೋ ಅಥವಾ ನೀನೇ ಹೇಳ್ತಿರೋದು ಸುಳ್ಳೋ..' ಅಂತ ಮತ್ತೊಮ್ಮೆ ವಂಶಿಕಾ ಬಳಿ ಕನ್ಫರ್ಮೇಶನ್ ಎಂಬಂತೆ ಕೇಳಿದ್ದಾರೆ. ಆದರೆ, ವಶಿಂಕಾ ಅದಕ್ಕೆ ಉತ್ತರಿಸಲೇ ಇಲ್ಲ!

'ಮಕ್ಕಳೇ ಹಾಗೆ, ಯಾವಾಗ ಅದೇನು ಮಾಡ್ತಾರೆ, ಅದೇನು ಹೇಳ್ತಾರೆ ಅಂತ ಗೊತ್ತಾಗೋದೇ ಇಲ್ಲ. ಆದರೆ, ಅನುಶ್ರೀ ಅದನ್ನು ಅರಿಯದೇ ಅಷ್ಟೊಂದು ಜನರ ಮುಂದೆ ವಂಶಿಕಾಳನ್ನು ನಂಬಿ ತಮ್ಮ ಮರ್ಯಾದೆ ತಾವೇ ತೆಗೆಸಿಕೊಂಡ್ರು..' ಅಂತಿದಾರೆ ಸೋಷಿಯಲ್ ಮೀಡಿಯಾದಲ್ಲಿ ಹಲವರು. ಕೆಲವರಂತೂ 'ವಂಶಿಕಾ ಇನ್ನೂ ಚಿಕ್ಕವಳು, ಅವಳನ್ನು ದೊಡ್ಡವರಂತೆ ಬಿಂಬಿಸಿಬೇಡಿ, ದೊಡ್ಡವರಂತೆ ಟ್ರೀಟ್ ಮಾಡ್ಬೇಡಿ.. ಅವಳಿಗೆ ಬೆಳೆಯಲು ಬಿಡಿ..' ಎನ್ನುತ್ತಿದ್ದಾರೆ. 

ಆದರೆ, ಇನ್ನೂ ಕೆಲವರು 'ವಂಶಿಕಾ ಅಪ್ಪ ಮಾಸ್ಟರ್ ಆನಂದ್ ಕೂಡ ಬಾಲ ಕಲಾವಿದರೇ ಆಗಿದ್ದರು. ಅವರಪ್ಪನ ಪ್ರತಿಭೆ ಮಗಳಲ್ಲೂ ಬಂದಿದೆ. ಅವಳು ಚಿಕ್ಕವಳಾದರೇನು, ದೊಡ್ಡವಳಾದರೇನು? ಪ್ರತಿಭೆಯನ್ನು ವೇದಿಕೆಗಳಲ್ಲಿ, ಸಿನಿಮಾ-ಸೀರಿಯಲ್ ಹಾಗೂ ರಿಯಾಲಿಟಿ ಶೋ ಸೇರಿದಂತೆ ಎಲ್ಲಾ ಕಡೆ ಬಳಸಿಕೊಳ್ಲಿ ಬಿಡಿ..' ಎಂದು ಕಾಮೆಂಟ್ ಮಾಡಿದ್ದಾರೆ. 

ಮಾಲಾಶ್ರೀ ಮತ್ತು ಸುಧಾರಾಣಿ ಮಧ್ಯೆ ಅಂದು ಏನಾಗಿತ್ತು? ಸೀಕ್ರೆಟ್ ಬಿಚ್ಚಿಟ್ಟ 'ಮನ ಮೆಚ್ಚಿದ ಹುಡುಗಿ'..!

ಒಟ್ಟಿನಲ್ಲಿ, ಪುಟ್ಟ ವಂಶಿಕಾಳಿಂದ ದೊಡ್ಡ ಆಂಕರ್ ಅನುಶ್ರೀ ಮರ್ಯಾದೆ ಹೋಯ್ತಾ? ಅಥವಾ, ವಂಶಿಕಾ ತನ್ನ ಮರ್ಯಾದೆಯನ್ನು ತಾನೇ ತೆಗೆದುಕೊಂಡಳಾ? ಅಥವಾ ಅನುಶ್ರೀ ಅವರೇ ತಮ್ಮ ಮರ್ಯಾದೆ ತಾವೇ ಹರಾಜು ಹಾಕಿಕೊಂಡ್ರಾ ಅಂತ ನೀವೇ ಒಂದು ಕಾಮೆಂಟ್ ಮಾಡ್ಬಿಡಿ ಪ್ಲೀಸ್.. ಅದೇನು ಅಂತ ಪ್ರೂವ್ ಆಗ್ಬಿಡ್ಲಿ, ನೋಡಿಯೇ ಬಿಡೋಣ, ಏನಂತೀರಾ...!?

click me!