ಕಾಂತಾರ ಪ್ರೀಕ್ವೆಲ್‌ಗೆ ಭಾರೀ ತಯಾರಿ, 'ನ ಭೂತೋ ನ ಭವಿಷ್ಯತಿ' ಎಂಬಂತೆ ನಡಿತಿರೋ ಶೂಟಿಂಗ್!

By Shriram Bhat  |  First Published Nov 8, 2024, 6:30 PM IST

ಸದ್ಯ ಕಾಂತಾರ ಪ್ರೀಕ್ವೆಲ್ಗಾಗಿ ಪ್ಯಾನ್ ವಿಶ್ವದಾದ್ಯಂತ ಸಮಸ್ತ ಸಿನಿ  ಪ್ರೇಮಿಗಳು ಚಾತಕಪಕ್ಷಿಗಳಂತೆ ಕಾಯ್ತಿದ್ದಾರೆ. ಅದ್ರಲ್ಲೂ ಫಸ್ಟ್ ಲುಕ್ ಟೀಸರ್ ರಿಲೀಸ್ ಆದ್ಮೇಲಂತೂ ಕಾಂತಾರ ಪ್ರೀಕ್ವೆಲ್ಮೇಲಿನ ನಿರೀಕ್ಷೆ ಸಪ್ತಸಾಗರವನ್ನೇ ದಾಟಿ ನಿಂತಿದೆ. ಫಸ್ಟ್ ಲುಕ್ ಮೂಲಕ ..


ಜನರ ಮನಸ್ಸಿಗೆ ಒಂದು ಸಿನಿಮಾ ಇಷ್ಟ ಆಯ್ತು ಅಂದ್ರೆ, ಅದನ್ನ ಬಾಚಿ ಅಪ್ಪಿಕೊಂಡು ಮೆರಿಸ್ತಾರೆ. ಅಷ್ಟೇ ಅಲ್ಲ, ಆ ಸಿನಿಮಾದ ಮುಂದಿನ ವರ್ಷನ್​ಗಾಗಿ ತುದಿಗಾಲಿನಲ್ಲಿ ಕಾಯ್ತಿರ್ತಾರೆ. ಅಂಥದ್ದೇ ಒಂದು ಸಿನಿಮಾ ಕಾಂತಾರ. ಈ (Kantara Prequel) ಸಿನಿಮಾದ ಸೀಕ್ವೆಲ್​ ಬರಲ್ಲ, ಬದಲಾಗಿ ಪ್ರೀಕ್ವೆಲ್​ ಬರುತ್ತೆ ಅನ್ನೋದು ನಿಮ್​ಗೆಲ್ಲಾ ಗೊತ್ತೇ ಇದೆ. ಆದ್ರೆ ಈ ಪ್ರೀಕ್ವೆಲ್​ ಹೇಗೆ​ ರೆಡಿಯಾಗ್ತಿದೆ..? ಶೂಟಿಂಗ್​ ಎಲ್ಲಿವರೆಗೆ ಬಂದಿದೆ..?  ಅನ್ನೋದು ಗೊತ್ತಾ..? ಚಾನ್ಸೇ ಇಲ್ಲ ಬಿಡಿ.. ಇಲ್ಲಿದೆ ನೋಡಿ ಎಲ್ಲ ಮಾಹಿತಿ..  

ಈಗಾಗ್ಲೇ 2 ಹಂತದ ಶೂಟಿಂಗ್ ಮಾಡಿರೋ ರಿಷಬ್ ಶೆಟ್ಟರ ಟೀಮ್, ​​ಮುಂದೆ ಈಗ ಬರೋಬ್ಬರಿ 60 ದಿನಗಳ ಕಾಲ ನಿರಂತರ ಶೂಟಿಂಗ್​ ಮಾಡೋಕೆ ಪ್ಲಾನ್ ಮಾಡಿದ್ದಾರೆ.. ಹೌದು, ಬಣ್ಣದ ಲೋಕದಲ್ಲಿ ಹೊಸ ಇತಿಹಾಸ ಬರೆದ ಸಿನಿಮಾ ಕಾಂತಾರ.. ವಿಶ್ವಾದಾದ್ಯಂತ ಪ್ರೇಕ್ಷಕರು ಮೆಚ್ಚಿ-ಅಪ್ಪಿಕೊಂಡು ಕೊಂಡಾಡಿದ ಚಿತ್ರ... ವಾರೇ ವಾ, ಸಿನಿಮಾ ಅಂದ್ರೆ ಇದಪ್ಪ ಅಂತ ಹೊಗಳಿಸಿಕೊಂಡ ಚಿತ್ರ.. ಬಾಕ್ಸ್​​ ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ಚಿತ್ರ. ಅವಾರ್ಡ್​ಗಳ ಮೇಲೆ ಅವಾರ್ಡ್​​ಗಳನ್ನ ಮುಡಿಗೇರಿಸಿಕೊಂಡ ಚಿತ್ರ. 

Tap to resize

Latest Videos

undefined

ಪ್ರಭಾಸ್ ಜೊತೆ ಭಾರೀ ಒಪ್ಪಂದ ಮಾಡಿಕೊಂಡ ಹೊಂಬಾಳೆ ಫಿಲಂಸ್; ಡಾರ್ಲಿಂಗ್ ಲಕ್ ನೋಡ್ರೀ!

ಸದ್ಯ ಕಾಂತಾರ ಪ್ರೀಕ್ವೆಲ್ಗಾಗಿ ಪ್ಯಾನ್ ವಿಶ್ವದಾದ್ಯಂತ ಸಮಸ್ತ ಸಿನಿ  ಪ್ರೇಮಿಗಳು ಚಾತಕಪಕ್ಷಿಗಳಂತೆ ಕಾಯ್ತಿದ್ದಾರೆ. ಅದ್ರಲ್ಲೂ ಫಸ್ಟ್ ಲುಕ್ ಟೀಸರ್ ರಿಲೀಸ್ ಆದ್ಮೇಲಂತೂ ಕಾಂತಾರ ಪ್ರೀಕ್ವೆಲ್ಮೇಲಿನ ನಿರೀಕ್ಷೆ ಸಪ್ತಸಾಗರವನ್ನೇ ದಾಟಿ ನಿಂತಿದೆ. ಫಸ್ಟ್ ಲುಕ್ ಮೂಲಕ ಪ್ಯಾನ್ ಇಂಡಿಯಾ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ರಿಷಬ್ ಶೆಟ್ಟಿ. 

ಈಗಾಗ್ಲೇ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಕಣಕ್ಕಿಳಿದಿರೋ ರಿಷಬ್ ಶೆಟ್ಟಿ ಕುಂದಾಪುರದಲ್ಲಿಯೇ ಫಸ್ಟ್ ಶೆಡ್ಯುಲ್​​​​ ಮುಗಿಸಿದ್ದಾರೆ.  ಜೊತೆಗೆ ತಮ್ಮ ಹುಟ್ಟೂರಾದ ಕೆರಾಡಿ ಬಳಿ ದೊಡ್ಡ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ.. ಕಾಂತಾರ ಪ್ರೀಕ್ವೆಲ್ ಸಿನಿಮಾದ  2 ಶೆಡ್ಯೂಲ್​ಗಳು ಈಗಾಗಲೇ ಮುಗಿದಿದ್ದು. 3ನೇ  ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗ್ತಾ ಇದೆ .ಈ ಹಂತದಲ್ಲಿಶೂಟಿಂಗ್ನಲ್ಲಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲು ರಿಷಬ್ ಪ್ಲಾನ್ ಮಾಡಿದ್ದಾರಂತೆ.. ಅದಕ್ಕಾಗಿ RRR ಖ್ಯಾತಿಯ ಸ್ಟಂಟ್ ಮಾಸ್ಟರ್ ಟೂಡೊರ್ ಲ್ಯಾಜರೋವ್ ನ ಕರೆಸಿಕೊಂಡಿದ್ದಾರೆ.

RRR  ಸಿನಿಮಾದ ಆಕ್ಷನ್ ದೃಶ್ಯಗಳನ್ನ ಕಂಪೋಸ್ ಮಾಡಿದ್ದ ಈ ಸಾಹಸ ನಿರ್ದೇಶಕ ಟೂಡೊರ್ ಲ್ಯಾಜರೋವ್ ಈಗ ಕಾಂತಾರ ಪ್ರೀಕ್ವೆಲ್​ಗೆ ಅದ್ಭುತ ಸಾಹಸ ಸನ್ನಿವೇಶಗಳನ್ನ ಸಂಯೋಜನೆ ಮಾಡ್ತಾ ಇದ್ದಾರೆ.  ಮುಂದಿನ 60 ದಿನಗಳ ಕಾಲ ಶೆಟ್ಟರ ಟೀಮ್​​ ಆ್ಯಕ್ಷನ್ ಹಾಗೂ ಕೆಲ ಪ್ರಮುಖ ದೃಶ್ಯಗಳ ಶೂಟ್​ನಲ್ಲಿ ಭಾಗಿ ಆಗಲಿದ್ದಾರಂತೆ. ರಿಷಬ್ ಈಗಾಗಲೇ ಕುದುರೆ ಸವಾರಿ ಹಾಗೂ ಕಲರಿಪಯಟ್ಟು ವಿದ್ಯೆಗಳನ್ನ ಕೂಡ ಕಲಿತಿದ್ದಾರೆ.  

ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?

'ಕಾಂತಾರ: ಚಾಪ್ಟರ್ 1' ನಲ್ಲಿ ಕದಂಬರ ಕಾಲದ   ಕಥೆ ಇದೆ ಎನ್ನಲಾಗ್ತಾ ಇದೆ. ಅದಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆಯಂತೆ.  ಈ 60 ದಿನಗಳ ಸಾಹಸ ಸನ್ನಿವೇಶಗಳ ಚಿತ್ರೀಕರಣದ ಬಳಿಕ ತಂಡ ಸಾಂಗ್ ಶೂಟ್​ ನಡೆಸಲಿದೆ. ಸಾಂಗ್ ಶೂಟ್ ಮುಗಿದ್ರೆ ಕಾಂತಾರ ಚಿತ್ರೀಕರಣ ಕಂಪ್ಲೀಟ್ ಆಗಲಿದೆ.  ಒಟ್ಟಾರೆಯಾಗಿ ಕಾಂತಾರ ಚಾಪ್ಟರ್​​ 1 ಅಪ್​ಡೇಟ್​ ಕೇಳಿರೋ ಫ್ಯಾನ್ಸ್​​ ಫುಲ್​ ಖುಷಿಯಾಗಿದ್ದಾರೆ..  ಕಾಂತಾರ ಹೊಸ ಚಾಪ್ಟರ್​​ ನೋಡೋಕೆ ತುದಿಗಾಲ ಮೇಲೆ ನಿಂತಿದ್ದಾರೆ.

click me!