3 ಕೋಟಿಗೆ Kantara ತೆಲುಗು ವಿತರಣೆ ಹಕ್ಕು ಖರೀದಿಸಿದ ಅಲ್ಲು ಅರ್ಜುನ್ ತಂದೆ ಅರವಿಂದ್?

Published : Oct 18, 2022, 09:10 AM ISTUpdated : Oct 18, 2022, 09:13 AM IST
3 ಕೋಟಿಗೆ Kantara ತೆಲುಗು ವಿತರಣೆ ಹಕ್ಕು ಖರೀದಿಸಿದ ಅಲ್ಲು ಅರ್ಜುನ್ ತಂದೆ ಅರವಿಂದ್?

ಸಾರಾಂಶ

ಅಕ್ಟೋಬರ್ 15ರಿಂದ ಟಾಲಿವುಡ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ ಕಾಂತಾರ ಸಿನಿಮಾ. ಅಲ್ಲು ಸಂಸ್ಥೆ ವಿತರಣೆ ಹಕ್ಕು ಖರೀದಿಸಿದ ಮೊತ್ತ ಎಷ್ಟು ಗೊತ್ತಾ? 

ಕನ್ನಡ ಸಿನಿಮಾಗಳು ಗಡಿಗೂ ಮೀರಿ ಅಬ್ಬರಿಸಬಹುದು ಎಂದು ಸಾಭೀತು ಮಾಡಲು ಹೊಂಬಾಳೆ ಸಿನಿಮಾ ಇರುವುದು ಅನ್ನೋದು ಸಿನಿ ರಸಿಕರ ಮಾತು. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಜನರನ್ನು ತಲುಪುವ ಬದಲು ಸಿನಿಮಾ ಹಿಟ್ ಆದ ಮೇಲೆ ಪ್ಯಾನ್ ಇಂಡಿಯಾ ಮಾಡಬೇಕು ಆಗ ಸಿನಿಮಾ ಗೆಲ್ಲುವುದು ಎಂದು ಈ ಹಿಂದೆ ರಿಷಬ್ ಶೆಟ್ಟಿ ಹೇಳಿದ್ದರು ಈಗ ಅದನ್ನು ಪ್ರೂವ್ ಮಾಡುತ್ತಿದ್ದಾರೆ. 

ಕನ್ನಡ ನಂತರ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿತ್ತು. ಜನ ಸಾಮಾನ್ಯರು ಮಾತ್ರವಲ್ಲದೆ ಟಾಪ್ ಸೆಲೆಬ್ರಿಟಿಗಳು ಕೂಡ ಕಾಂತಾರವನ್ನು ಮೆಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಸಿನಿಮಾದ ಜನಪ್ರಿಯತೆ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಇದೀಗ ತೆಲುಗು ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿ ಎಂದು ಅಭಿಮಾನಿಗಳು ಒತ್ತಾಯಿಸಿರುವುದಕ್ಕೆ ಅಲ್ಲು ಸಂಸ್ಥೆ ವಿತರಣೆ ಹಕ್ಕು ಪಡೆದುಕೊಂಡಿತ್ತು. 

ಹೌದು! ಅಕ್ಟೋಬರ್ 15ರಂದು ತೆಲುಗು ಭಾಷೆಯಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿತ್ತು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಜನರಿಗೆ ತಲುಪಬೇಕು ಎಂದು ಹೊಂಬಾಳೆ ಫಿಲ್ಮಂ ತೆಲುಗು ವಿತರಣೆ ಹಕ್ಕನ್ನು ಅಲ್ಲು ಅರವಿಂದ್ ಸಂಸ್ಥೆಗೆ 3 ಕೋಟಿಗೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮೂರು ದಿನಗಳಲ್ಲಿ ಬಿಗ್ ಕೆಲಕ್ಷನ್ ಮಾಡಿರುವ ಕಾರಣ ಅಲ್ಲು ಸಂಸ್ಥೆ ಕನ್ನಡಿಗರ ಸಿನಿಮಾದಿಂದ ಲಾಟರಿ ಹೊಡದಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

ಸಿನಿಮಾ ಬಗ್ಗೆ ಸೆಲೆಬ್ರಿಟಿಗಳ ಮಾತು:

ಮೋಹಕ ತಾರೆ ರಮ್ಯಾ:

ಒಂದು ಅದ್ಭುತ ಸಿನಿಮಾ ನೋಡಿದಾಗ ಅದನ್ನು ವರ್ಣಿಸಲು ಪದಗಳು ಇರುವುದಿಲ್ಲ ಏಕೆಂದರೆ ನಿರೀಕ್ಷೆಗೂ ಮೀರಿದ ಫಲಿತಾಂಶ ಸಿಕ್ಕಿದೆ. ಈ ಸಾಲಿಗೆ ಕಾಂತಾರ ಸಿನಿಮಾ ಸೇರಿಕೊಳ್ಳುತ್ತದೆ.ಈ ಸಿನಿಮಾವನ್ನು ನೀವು ನೋಡಿ ಎಕ್ಸಪೀರಿಯನ್ಸ್‌ ಮಾಡಬೇಕು. ಈ ಸಿನಿಮಾ ಮೂಲಕ ಭೂತ ಕೋಲ ಬಗ್ಗೆ ತಿಳಿದುಕೊಂಡಿರುವೆ. ಚಿತ್ರದ ಕೊನೆ 10 ಸಿನಿಮಾದಲ್ಲಿ ರಿಷಬ್ ತನ್ನ ಪ್ರದರ್ಶನದಲ್ಲಿ ದೈವಿಕ ಹಸ್ತಕ್ಷೇಪವನ್ನು ಹೊಂದಿದ್ದನುಸಿನಿಮಾ ನೋಡಿದ ಮೇಲೆ 100% ನನ್ನ ಮಾತು ಒಪ್ಪಿಕೊಳ್ಳುತ್ತೀರಿ. ರಿಷಬ್‌ ನಿಮ್ಮ ಪ್ರತಿಭೆ ಬಗ್ಗೆ ಹೇಳಲು ಆಗುವುದಿಲ್ಲ ಆದರೆ ಈ ಸಿನಿಮಾ ಮೂಲಕ ನಮ್ಮ ಹೆಮ್ಮ ತಂದಿದ್ದೀರಿ.ಹೊಂಬಾಳೆ ಫಿಲ್ಮ್ಸ್‌, ವಿಜಯ್ ಕಿರಗಂದೂರು ಮತ್ತು ಕಾರ್ತಿಕ್‌ ನೀವು ಹೇಗೆ ಪ್ರತಿ ಸಲವೂ ಇಷ್ಟೊಂದು ಅದ್ಭುತವಾದ ಸಿನಿಮಾ ಮಾಡಲು ಸಾಧ್ಯ? ಪ್ರಗತಿ ಶೆಟ್ಟಿ ನಿಮ್ಮ ಮೊದಲ ಸಿನಿಮಾ ಇದು ಚೆನ್ನಾಗಿ ಅಭಿನಯಿಸಿದ್ದೀರಿ.'ಕಾಂತಾರ ಸಿನಿಮಾ ತಪ್ಪದೆ ನೋಡಿ. ರಾಜ್‌ ಬಿ ಶೆಟ್ಟಿ ಸೂಪರ್ ಆಗಿ ಭೂತ ಕೋಲ ದೃಶ್ಯವನ್ನು ಸಂಯೋಜನೆ ಮಾಡಿದ್ದೀರಿ'

ಕುತೂಹಲ ಹೆಚ್ಚಾಗ್ತಿದೆ, ಕಾಂತಾರ ನೋಡಲು ಕಾಯುತ್ತಿದ್ದೇನೆ; ನಟಿ ಕಂಗನಾ ರಣಾವತ್

ಶಿಲ್ಪಾ ಶೆಟ್ಟಿ:

'ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಪೋಸ್ಟ್. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ. ಓ ಮೈ ಗಾಡ್ ಎಂಥ ಸಿನಿಮಾ. ಅದ್ಭುತವಾದ ನರೇಟಿವ್, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್‌ ನೋಡಿ ಗೂಸ್‌ಬಂಪ್ಸ್ ಬಂತು. ನಾನು ಸೇರಿದಂತೆ ವೀಕ್ಷಕನನ್ನು ಆ ಜಗತ್ತಿಗೆ ಕರೆದುಕೊಂಡು ಹೋಗುತ್ತೆ. ನಿಜವಾಗಿಯೂ ನನ್ನನ್ನು ನನ್ನ ಊರಿಗೆ ಕರೆದೊಯ್ತು ಇದು ಸಿನಿಮಾ ಶಕ್ತಿ. ಯಾವುದೇ ಪಕ್ಷಪಾತವಿಲ್ಲದೆ, ಕಥೆ ಹೇಳುವಿಕೆ, ಅಭಿನಯ, ನಂಬಿಕೆ ಮತ್ತು ಅದ್ಭುತ ನಿರ್ದೇಶನ. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಹುಮುಖ ಪ್ರತಿಭೆಗೆ ಹ್ಯಾಟ್ಸ್ ಆಫ್. ಸಕ್ಸಸ್ ಎಂಜಾಯ್ ಮಾಡಿ'

ಯಾರು ಗೊತ್ತಾಯ್ತಾ? ಇವ್ರೇ ರೀ 'ಕಾಂತಾರ'ದ ಶೀಲಾ; ನಿಜಕ್ಕೂ ಯಾರಿವರು, ಇಲ್ಲಿದೆ ಸಂಪೂರ್ಣ ಮಾಹಿತಿ

ಅನುಷ್ಕಾ ಶೆಟ್ಟಿ:

'ಕಾಂತಾರ ಸಿನಿಮಾ ವೀಕ್ಷಿಸಿದೆ. ತುಂಬಾ ತುಂಬಾ ಇಷ್ಟವಾಯಿತು. ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ಇಡೀ ತಂಡ ಅಮೇಜಿಂಗ್. ಈ ಅದ್ಭುತ ಅನುಭವಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲಿ ಈ ಚಿತ್ರ ವೀಕ್ಷಿಸಿ'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?