OMG..! ಎಂಥಾ ಸಿನಿಮಾ, ಮತ್ತೆ ನನ್ನ ಊರಿಗೆ ಕೊಂಡೊಯ್ತು; 'ಕಾಂತಾರ' ನೋಡಿದ ಶಿಲ್ಪಾ ಶೆಟ್ಟಿ

By Shruiti G Krishna  |  First Published Oct 17, 2022, 12:52 PM IST

ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿದ ಶಿಲ್ಪಾ ಶೆಟ್ಟಿ OMG ಎಂಥ ಸಿನಿಮಾ ಎಂದು ಹೇಳಿದ್ದಾರೆ. 


ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಗಡಿಗೂ ಮೀರಿ ಅಬ್ಬರಿಸುತ್ತಿದೆ. ಭಾರಿ ಬೇಡಿಕೆಯ ಮೇರೆಗೆ ಕಾಂತಾರ ಪರಭಾಷೆಗಳಲ್ಲಿ ರಿಲೀಸ್ ಆಗಿದೆ. ಇದೀಗ ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಹಿಂದಿಯಲ್ಲಿ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ವಿಶೇಷ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡುತ್ತಿದೆ. ಅಂದಹಾಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 

ತೆಲುಗು ಸ್ಟಾರ್ ಪ್ರಭಾಸ್, ನಾನಿ, ರಾಣಾ ದಗ್ಗುಬಾಟಿ, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಧನುಷ್, ಕಾರ್ತಿ ಸೇರಿದಂತೆ ಅನೇಕ ಸ್ಟಾರ್ಸ್ ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ವಿಶೇಷ ಎಂದರೆ ತೆಲುಗು ಸ್ಟಾರ್ ಪ್ರಭಾಸ್ ಎರಡು ಬಾರಿ ಕಾಂತಾರ ಸಿನಿಮಾ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.  ಇದೀಗ ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಇದೀಗ ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. 

Tap to resize

Latest Videos

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ ಎಂಥ ಅದ್ಭುತವಾದ ಸಿನಿಮಾ ಎಂದು ಹೇಳಿದ್ದಾರೆ. ಸಿನಿಮಾ ನೋಡಿ ರೊಮಾಂಚನ ವಯಿತು ಎಂದು ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ. 'ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಪೋಸ್ಟ್. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ. ಓ ಮೈ ಗಾಡ್ ಎಂಥ ಸಿನಿಮಾ. ಅದ್ಭುತವಾದ ನರೇಟಿವ್, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್‌ ನೋಡಿ ಗೂಸ್‌ಬಂಪ್ಸ್ ಬಂತು. ನಾನು ಸೇರಿದಂತೆ ವೀಕ್ಷಕನನ್ನು ಆ ಜಗತ್ತಿಗೆ ಕರೆದುಕೊಂಡು ಹೋಗುತ್ತೆ. ನಿಜವಾಗಿಯೂ ನನ್ನನ್ನು ನನ್ನ ಊರಿಗೆ ಕರೆದೊಯ್ತು ಇದು ಸಿನಿಮಾ ಶಕ್ತಿ. ಯಾವುದೇ ಪಕ್ಷಪಾತವಿಲ್ಲದೆ, ಕಥೆ ಹೇಳುವಿಕೆ, ಅಭಿನಯ, ನಂಬಿಕೆ ಮತ್ತು ಅದ್ಭುತ ನಿರ್ದೇಶನ. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಹುಮುಖ ಪ್ರತಿಭೆಗೆ ಹ್ಯಾಟ್ಸ್ ಆಫ್. ಸಕ್ಸಸ್ ಎಂಜಾಯ್ ಮಾಡಿ' ಎಂದು ಹೇಳಿದ್ದಾರೆ. 

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ 'ಕಾಂತಾರ' ಕಲೆಕ್ಷನ್; ಹಿಂದಿ ಮಂದಿಯ ನಿದ್ದೆಗೆಡಿಸಿದ ರಿಷಬ್ ಶೆಟ್ಟಿ

ಕರ್ನಾಟಕ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ ಬಳಿಕ ಬಾಲಿವುಡ್‌ಗೆ ಹಾರಿದರು. ಅಲ್ಲೇ ಖ್ಯಾತಿ ಗಳಿಸಿದ ಶಿಲ್ಪಾ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ. ಆದರೂ ತನ್ನ ಊರಿನ ಆಚಾರ, ವಿಚಾರಗಳ ಬಗ್ಗೆ ಇರುವ ಸಿನಿಮಾ ನೋಡಿ  ಹೊಗಳಿರುವುದು ವಿಶೇಷ.

ರಿಷಬ್ ಶೆಟ್ಟಿ ನೀವು ಅದ್ಭುತ; 'ಕಾಂತಾರ' ನೋಡಿ ವಿಮರ್ಶೆ ಮಾಡಿದ ಅನುಷ್ಕಾ ಶೆಟ್ಟಿ

ಸಿನಿಮಾ ನೋಡಿ ಅನುಷ್ಕಾ ಶೆಟ್ಟಿ ಹೇಳಿದ್ದೇನು?

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ಸಹ ಸಿನಿಮಾ ನೋಡಿ ಹೊಗಳಿದ್ದಾರೆ.  'ಕಾಂತಾರ ಸಿನಿಮಾ ವೀಕ್ಷಿಸಿದೆ. ತುಂಬಾ ತುಂಬಾ ಇಷ್ಟವಾಯಿತು. ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ಇಡೀ ತಂಡ ಅಮೇಜಿಂಗ್. ಈ ಅದ್ಭುತ ಅನುಭವಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲಿ ಈ ಚಿತ್ರ ವೀಕ್ಷಿಸಿ' ಎಂದು ಹೇಳಿದ್ದರು.

click me!