'ಪಾಪ್ ಕಾರ್ನ್ ಮಂಕಿ ಟೈಗರ್' ಹುಡುಗಿ ಜೊತೆ ರಿಷಬ್ ಶೆಟ್ಟಿ ರೊಮ್ಯಾನ್ಸ್. ಹೊಂಬಾಳೆ ನಿರ್ಮಾಣದ 'ಕಾಂತಾರ'ಕ್ಕೆ ಚಾಲನೆ....
ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಆಗಸ್ಟ್ 27ರಂದು ರಿಷಬ್ ಶೆಟ್ಟಿ ಜೊತೆ ಕೈ ಜೊಡಿಸಿರುವ 'ಕಾಂತಾರ' ಚಿತ್ರದ ಮುಹೂರ್ತ ಮಾಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ' ಚಿತ್ರದ ಮುಹೂರ್ತ ಕುಂಭಾಶಿಯ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಅಣ್ಣ ಮಂಜುನಾಥ್ ಕ್ಲಾಪ್ ಮಾಡಿದ್ದಾರೆ. ಉದ್ಯಮಿ ಉದಯ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ನಿರ್ಮಾಪಕ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಹಾಗೂ ಚಿತ್ರ ತಂಡದವರು ಉಪಸ್ಥಿತರಿದ್ದರು.
100 ಚಿತ್ರಗಳ ಸರದಾರನಿಗೆ ಕತೆ ಹೇಳೋದೇ ಖುಷಿ: ರಿಷಬ್ ಶೆಟ್ಟಿ'ಇದೇ ಮೊದಲ ಬಾರಿಗೆ ಧೈರ್ಯ ಮಾಡಿ ನನ್ನ ನಿರ್ದೇಶನ ಸಿನಿಮಾದಲ್ಲಿ ನಾನೇ ನಟಿಸುವ ಮನಸ್ಸು ಮಾಡಿದ್ದೇನೆ. ನಿಗೂಢ ಅರಣ್ಯದಲ್ಲಿ ಸಿಗುವುದೆಲ್ಲಾ ಅಚ್ಚರಿಯೇ,' ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 'ಕಾಂತಾರ ಚಿತ್ರದ ಮುಹೂರ್ತ ಇಂದು ಹುಟ್ಟೂರಿನ ಶ್ರೀ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರಕ್ಕೆ ಬೆನ್ನೆಲುಬಬಾಗಿ ನಿಂತಿರುವ ವಿಜಯ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಆಗಮಿಸಿ ಶುಭ ಕೋರಿದ ಪ್ರತಿಯೊಬ್ಬರುಗೂ ಪ್ರೀತಿಯ ನಮನ. #kantara ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ,' ಎಂದು ರಿಷಬ್ ಬರೆದುಕೊಂಡಿದ್ದಾರೆ.
ಇಂದಿನಿಂದ ಕುಂದಾಪುರ ಆಸುಪಾಸಿನ ಕೆರಾಡಿ, ಹೆಮ್ಮಾಡಿ ಚಿತ್ರೀಕರಣ ನಡೆಯಲಿದೆ. ವರ್ಷಾಂತ್ಯದೊಳಗೆ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ಯೋಜಿಸಿದೆ.
ಕಾಂತಾರ ಚಿತ್ರದ ಮುಹೂರ್ತ ಇಂದು ಹುಟ್ಟೂರಿನ ಶ್ರೀ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರಕ್ಕೆ ಬೆನ್ನೆಲುವಾಗಿ ನಿಂತಿರುವ @vijaykiragandur ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಆಗಮಿಸಿ ಶುಭ ಕೋರಿದ ಪ್ರತಿಯೊಬ್ಬರುಗೂ ಪ್ರೀತಿಯ ನಮನ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ 😊✌🏻 pic.twitter.com/TXiftjWDuI
— Rishab Shetty (@shetty_rishab)