
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಮತ್ತು ಪುತ್ರ ಜೂನಿಯರ್ ಸಿ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ನೋಡಲು ಸೇಮ್ ಚಿರಂಜೀವಿಯೇ. ಹೀಗಾಗಿ ಎಲ್ಲರೂ ಪುಟಾಣಿಯನ್ನು ಚಿರು ಎಂದೇ ಕರೆಯುತ್ತಿದ್ದಾರೆ. ಆದರೆ ಚಿಂಟುಗೆ ಒಂದು ಹೆಸರು ಬೇಕಲ್ವಾ? ಹೀಗಾಗಿ ನಾಮಕರಣದ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಪುತ್ರನಿಗೆ ತೊಟ್ಟಿಲು ಶಾಸ್ತ್ರ ಮಾಡಿದ ಮೇಘನಾ ರಾಜ್ ಈ ವರ್ಷ ನಾಮಕರಣ ಮಾಡುವ ಪ್ಲಾನ್ ಮಾಡಿದ್ದಾರಂತೆ. 'ಕೋವಿಡ್ ಕಾರಣದಿಂದ ಈವರೆಗೂ ನಾಮಕರಣ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮಗನಿಗೆ ನಾಮಕರಣ ಮಾಡಲಾಗುತ್ತದೆ. ಮಗುವಿಗೆ ಹೆಸರನ್ನು ಇನ್ನೂ ಫೈನಲ್ ಮಾಡಿಲ್ಲ, ಆದಷ್ಟು ಬೇಗ ಹೆಸರು ಫೈನಲ್ ಮಾಡಬೇಕು. ನಾನು ಸದ್ಯಕ್ಕೆ ಚಿನ್ನಾರಿ, ಬಟಾಣಿ ಎನ್ನುವ ಹೆಸರುಗಳಿಂದ ಕರೆಯುತ್ತಿದ್ದೇನೆ,' ಎಂದು ಮೇಘನಾ ರಾಜ್ ಖಾಸಗಿ ವೆಬ್‌ಗೆ ಹೇಳಿದ್ದಾರೆ.
ಮಗನಿಗೆ 10 ತಿಂಗಳು ತುಂಬುತ್ತಿದ್ದಂತೆ, ಕ್ಯಾಮೆರಾ ಎದುರಿಸುತ್ತಿರುವೆ ಎಂದು ಫೋಟೋ ಹಂಚಿಕೊಂಡ ಮೇಘನಾ ರಾಜ್ ಇನ್‌ಸ್ಟಾಗ್ರಾಂ ಮೂಲಕ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೊಂದು ಬ್ರ್ಯಾಂಡ್ ವಸ್ತುಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. 'ಕೆಲವು ಆಫರ್‌ಗಳು ಬಂದಿವೆ. ಆದರೆ ಮಗನ ಜೊತೆ ನಾನೀಗ ಇರಬೇಕಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಮನೆಯಲ್ಲಿ ಮಗ ಇರುವುದಿರಿಂದ ನಾನು ಹೊರಗಡ ಹೋಗಿ, ಬರುವುದು ತುಂಬಾ ರಿಸ್ಕ್. ಮುಂದಿನ ವರ್ಷ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತೇನೆ. ನಟನೆ ಮುಂದುವರೆಸುವೆ,' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.