Rider Movie Piracy: ಸೈಬರ್ ಕ್ರೈಂ ಠಾಣೆಗೆ ನಿರ್ಮಾಪಕ ಲಹರಿ ವೇಲು ದೂರು

Kannadaprabha News   | Asianet News
Published : Dec 28, 2021, 08:36 AM ISTUpdated : Dec 28, 2021, 10:09 AM IST
Rider Movie Piracy: ಸೈಬರ್ ಕ್ರೈಂ ಠಾಣೆಗೆ ನಿರ್ಮಾಪಕ ಲಹರಿ ವೇಲು ದೂರು

ಸಾರಾಂಶ

ನಟ ನಿಖಿಲ್ ಕುಮಾರ್ ನಟನೆಯ 'ರೈಡರ್‌' ಸಿನಿಮಾ ಪೈರಸಿ ವಿಚಾರ ಸಂಬಂಧ ನಿರ್ಮಾಪಕ ಲಹರಿ ವೇಲು ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 'ಡಿ.24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ರೈಡರ್‌ ಸಿನಿಮಾ ಎರಡು ದಿನಗಳಲ್ಲೇ ಪೈರಸಿಯಾಗಿದೆ.

ನಟ ನಿಖಿಲ್ ಕುಮಾರ್ (Nikhil Kumar) ನಟನೆಯ 'ರೈಡರ್‌' (Rider) ಸಿನಿಮಾ ಪೈರಸಿ ವಿಚಾರ ಸಂಬಂಧ ನಿರ್ಮಾಪಕ ಲಹರಿ ವೇಲು (Lahari Velu) ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 'ಡಿ.24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ರೈಡರ್‌ ಸಿನಿಮಾ ಎರಡು ದಿನಗಳಲ್ಲೇ ಪೈರಸಿಯಾಗಿದೆ. ಇದರಿಂದ ನಿರ್ಮಾಪಕರಿಗೆ ಬಹುದೊಡ್ಡ ನಷ್ಟಆಗಲಿದೆ. ಸಿನಿಮಾವನ್ನು ಪೈರಸಿ (Piracy) ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ನಿರ್ಮಾಪಕ ಲಹರಿ ವೇಲು ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲಹರಿ ವೇಲು, 'ಸಿನಿಮಾಗಳು ಪೈರಸಿಯಾದರೆ ಯಾರು ಕೂಡ ಚಿತ್ರಮಂದಿರಕ್ಕೆ ಬರುವುದಿಲ್ಲ. ಸಾಲ ಮಾಡಿ ಬಂಡವಾಳ ಹೂಡಿ ಸಿನಿಮಾ ಮಾಡಿದ ನಿರ್ಮಾಪಕರು ಬೀದಿಗೆ ಬರುತ್ತಾರೆ. ಈ ಹಿಂದೆ ನಾನು ಸಾಕಷ್ಟುಜನ ನಿರ್ಮಾಪಕರು ತೊಂದರೆ ಅನುಭವಿಸಿದ್ದನ್ನು ನೋಡಿದ್ದೇನೆ. ಕನ್ನಡ ಸಾಕಷ್ಟುಚಿತ್ರಗಳು ಪೈರಸಿಯಾಗಿ ನಿರ್ಮಾಪಕರು ನಷ್ಟಅನುಭವಿಸಿದ್ದಾರೆ. ಕಿಡಿಗೇಡಿಗಳು ರೈಡರ್‌ ಸಿನಿಮಾವನ್ನು ಪೈರೆಸಿ ಮಾಡಿ ಟೆಲಿಗ್ರಾಂ ಆ್ಯಪ್‌ಗೆ ಲಿಂಕ್‌ ಹಾಕಿದ್ದಾರೆ. ಈ ಸಂಬಂಧ ಉತ್ತರ ವಿಭಾಗ ಡಿಸಿಪಿ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಿದ್ದೇನೆ. ಡಿಸಿಪಿ ಅವರು ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ' ಎಂದರು.

Rider Movie: ರಾಮನಗರಕ್ಕೆ 'ರೈಡರ್​' ಭೆಟಿ, ನಿಖಿಲ್‌ಗೆ ಭರ್ಜರಿ ಸ್ವಾಗತ

ತಮಿಳಿನ  ವೆಬ್‌ಸೈಟ್‌ ಒಂದರಿಂದ 'ರೈಡರ್‌' ಚಲನಚಿತ್ರ ಪೈರಸಿಯಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಚಿತ್ರನಟ ನಿಖಿಲ್‌ ಕುಮಾರ್‌ ತಿಳಿಸಿದ್ದಾರೆ.  ಪೈರಸಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇದರಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮಗಳಾಗುತ್ತಿದ್ದು, ಚಿ​ತ್ರ​ರಂಗ ಉ​ಳಿ​ಯ​ಬೇ​ಕೆಂದರೆ ಪೈರಸಿ ಹಾ​ವ​ಳಿ​ಯನ್ನು ತ​ಡೆ​ಯ​ಬೇಕು ಎಂದು ಹೇಳಿದ್ದಾರೆ.ಜ. 18ಕ್ಕೆ ಮ​ತ್ತೊಂದು ಚಿತ್ರ ಸೆ​ಟ್ಟೇ​ರ​ಲಿದೆ. ಅ​ದರ ಬಗ್ಗೆ ಈ​ಗಲೇ ಹೇ​ಳಿ​ದರೆ ಕು​ತೂ​ಹಲ ಇ​ರು​ವು​ದಿಲ್ಲ. ಚಿತ್ರ ನಿರ್ಮಾಪ​ಕರು, ನಿರ್ದೇಶ​ಕರೂ ಬೇ​ಸರ ಮಾ​ಡಿ​ಕೊ​ಳ್ಳು​ತ್ತಾರೆ. ಮುಂದಿನ ದಿ​ನ​ಗ​ಳಲ್ಲಿ ತಿ​ಳಿ​ಸು​ತ್ತೇನೆ. ಮಂಡ್ಯಕ್ಕೆ ಹ​ತ್ತಿ​ರ​ವಾದ ಸಿ​ನಿಮಾ ನಿರ್ಮಾಣ​ವಾ​ಗು​ತ್ತದೆ ಎಂದು ಚು​ಟು​ಕಾಗಿ ಉ​ತ್ತ​ರಿ​ಸಿ​ದರು.

ಸಾ​ಮಾ​ನ್ಯ​ವಾಗಿ ಕ​ಥೆಯೇ ಹೀರೋ. ಒ​ಳ್ಳೆಯ ಕಥೆ ಒ​ಳ್ಳೆಯ ಪಾ​ತ್ರ​ಧಾ​ರಿ​ಯಾ​ಗ​ಬೇಕು. ಸಿ​ನಿಮಾ ಯಾವ ರೀತಿ ಬಂದಿದೆ. ಯಾವ ಅಂಶ ಇಷ್ಟಆ​ಗಿದೆ. ಮುಂದೆ ನಾವು ಯಾವ ರೀತಿ ಕೆ​ಲಸ ಮಾ​ಡ​ಬೇಕು ಎಂಬು​ದರ ಬಗ್ಗೆ ಚಿಂತನೆ ಮಾ​ಡು​ತ್ತೇವೆ. ಸಿ​ನಿಮಾ ಮಾ​ಡೋ​ದಿಕ್ಕೆ ತುಂಬಾ ಶ್ರ​ಮ​ ಪ​ಡ​ಬೇಕು. ಪ್ರೇಕ್ಷ​ಕರು ಸಾ​ಮಾ​ನ್ಯ​ವಾಗಿ ಚೆ​ನ್ನಾ​ಗಿದೆ, ಚೆ​ನ್ನಾ​ಗಿಲ್ಲ. ಪ​ರ​ವಾ​ಗಿಲ್ಲ ಎಂದಷ್ಟೇ ಹೇ​ಳು​ತ್ತಾರೆ. ಆ​ದರೆ ಒಂದು ಚಿತ್ರ ನಿರ್ಮಿಸ​ಬೇ​ಕಾ​ದರೆ ಎ​ಲ್ಲರೂ ಎ​ಷ್ಟೊಂದು ಕಷ್ಟ ಅ​ನು​ಭ​ವಿ​ಸಿ​ರು​ತ್ತಾರೆ ಎಂಬುದು ಅ​ವ​ರಿಗೆ ಮಾತ್ರ ಗೊತ್ತು ಎಂದು ಹೇ​ಳಿ​ದರು.

Nikhil Kumar About Rider: ರೈಡರ್ ಸಿನಿಮಾದ ಈ ಹಾಡು ನಿಖಿಲ್ ಪತ್ನಿ ರೇವತಿಗೂ ಫೇವರೇಟ್

ಚಿ​ತ್ರ​ರಂಗ​ದಲ್ಲಿ ಒ​ಳ್ಳೆಯ ಕ​ಲಾ​ವಿ​ದ​ನಾಗಿ ಜನ ನ​ನ್ನನ್ನು ಸ್ವೀ​ಕ​ರಿ​ಸಿ​ದ್ದಾರೆ. ಒ​ಳ್ಳೆಯ ಚಿ​ತ್ರ​ಗ​ಳನ್ನು ಕೊ​ಡ​ಬೇಕು. ನಾನು ಹಿಂತಿ​ರುಗಿ ನೋ​ಡಿ​ದಾಗ ಒ​ಳ್ಳೆಯ ಸಿ​ನಿಮಾ ಕೊ​ಟ್ಟಿ​ದ್ದೇನೆ ಎಂದು ನನ್ನ ಮ​ನ​ಸ್ಸಿಗೆ ತೃಪ್ತಿ ಸಿ​ಗ​ಬೇಕು ಎಂದರು. ರಾ​ಜ​ಕೀಯ ಎಂದು ಬಂದಾಗ ಅ​ದ​ರದ್ದೇ ಆದ ಜ​ವಾ​ಬ್ದಾ​ರಿ​ಗ​ಳಿವೆ. ರಾ​ಜ​ಕಾ​ರ​ಣದ ಬಗ್ಗೆ ರಾ​ಜ​ಕೀಯ ವೇ​ದಿ​ಕೆ​ಯಲ್ಲಿ ಚರ್ಚೆ ಮಾ​ಡು​ತ್ತೇನೆ ಎಂದು ತಮ್ಮ ರಾ​ಜ​ಕೀಯ ಕ್ಷೇ​ತ್ರದ ಬಗ್ಗೆ ಕೇ​ಳ​ಲಾದ ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿ​ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್