ರಾಜ್‌ಕುಮಾರ್ ಮತ್ತು ಪುನೀತ್‌ಗೆ ಊಟ ಬಡಿಸಿದ್ದ ಸಚಿವ ಜಮೀರ್ ಅಹ್ಮದ್; ಫೋಟೋ ವೈರಲ್!

By Vaishnavi Chandrashekar  |  First Published Oct 1, 2024, 5:06 PM IST

 ಜಮೀರ್ ಅಹ್ಮದ್ ಜೊತೆ ಅಣ್ಣಾವ್ರ ಫ್ಯಾಮಿಲಿ, ಪ್ರಭಾಸ್‌ ಬಗ್ಗೆ ಸ್ಪಷ್ಟನೆ ಕೊಟ್ಟ ಅರ್ಷದ್ ಮತ್ತು ಕಾಂತಾರ ಚಿತ್ರಕ್ಕೆ ಎರಡು ವರ್ಷ...
 


ರಾಜ್​ಕುಮಾರ್ ಹಾಗೂ ಪುನೀತ್ ಇಂದು ನಮ್ಮ ಜೊತೆ ಇಲ್ಲ. ಅವರು ಇಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಎಂದಿಗೂ ಮಾಯ ಆಗುವಂಥದ್ದಲ್ಲ. ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಈಗ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದೆ. ಇದಕ್ಕೆ ಮೆಚ್ಚುಗೆ ಸಿಕ್ಕಿದೆ. ಈ ಫೋಟೋದಲ್ಲಿ ಇರೋದು ಬೇರೆ ಯಾರೂ ಅಲ್ಲ ಶಾಸಕ ಹಾಗೂ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರೋ ಜಮೀರ್ ಅಹ್ಮದ್. ಸ್ವತಃ ಜಮೀರ್ ಅಹ್ಮದ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರು ಹಾಗು ಅಪ್ಪುಗೆ ಊಟ ಬಡಸಿದ್ದಾರೆ ಜಮೀರ್​ ಅಹ್ಮದ್​.. 

ನಾನು ಪ್ರಭಾಸ್​ಗೆ ಜೋಕರ್ ಎಂದಿಲ್ಲ; ಅರ್ಷದ್ ವಾರ್ಸಿ ಸ್ಪಷ್ಟನೆ..!

Tap to resize

Latest Videos

undefined

ಹಿಂದಿ ಚಿತ್ರರಂಗದ ನಟ ಅರ್ಷದ್ ವಾರ್ಸಿ ಇತ್ತೀಚೆಗೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟ ಆಗಲೇ ಇಲ್ಲ. ಪ್ರಭಾಸ್ ಬಗ್ಗೆ ನನಗೆ ಬೇಸರ ಇದೆ. ಅವರು ಜೋಕರ್ ರೀತಿ ಕಾಣಿಸಿದ್ದಾರೆ’ ಎಂದಿದ್ರು. ಇದನ್ನ ಕೇಳಿ ಪ್ರಭಾಸ್ ಫ್ಯಾನ್ಸ್ ಸಿಟ್ಟಾಗಿದ್ರು.  ನಿರ್ದೇಶಕ ನಾಗ್ ಅಶ್ವಿನ್ ಕೂಡ ಬೇಸರ ಹೊರಹಾಕಿದ್ದರು. ಈ ಬಗ್ಗೆ ಕೊನೆಗೂ ಅರ್ಷದ್ ವಾರ್ಸಿ ಅವರು ಸ್ಪಷ್ಟನೆ ನೀಡಿದ್ದಾರೆ.  ‘ನಾನು ಪಾತ್ರದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ವೈಯಕ್ತಿಕ ಅಲ್ಲ. ಪ್ರಭಾಸ್ ಓರ್ವ ಅದ್ಭುತ ಕಲಾವಿದ. ಅವರು ಆಗಾಗ ತಮ್ಮನ್ನು ಸಾಬೀತು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದು ನಮಗೆ ಗೊತ್ತು’ ಎಂದಿದ್ದಾರೆ.

ಅವಮಾನ ಆಗಿದೆ ಅನ್ನೋದು ವೈಯಕ್ತಿಕ, ಸಂಸ್ಥೆ ಮೇಲೆ ಆಪಾದನೆ ಹಾಕೋದು ಅಪರಾಧ: ಖಡಕ್ ಉತ್ತರ ಕೊಟ್ಟ ಕಿಚ್ಚ

ನನಗೆ ನಿಮ್ಮ ಅವಾರ್ಡ್ ಬೇಕಿಲ್ಲ: ಹೇಮಂತ್ ರಾವ್

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೀಡಿರೋ ಕನ್ನಡದ ಖ್ಯಾತ ನಿರ್ದೇಶಕ ಹೇಮಂತ್ ರಾವ್ ಅವರು ಐಫಾ 2024ರಲ್ಲಿ ಭಾಗಿ ಆಗಿದ್ರು. ಇದರ ಸಂಘಟಕರ ವಿರುದ್ಧ ಇದೀಗ ಹೇಮಂತ್​ ರಾವ್ ಅಸಮಾಧಾನ ಹೊರಹಾಕಿದ್ದಾರೆ. ಅವರ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ನಾಮಿನೇಟ್ ಆಗಿತ್ತು. ಆದ್ರೆ ಇದಕ್ಕೆ ಅವಾರ್ಡ್ ಸಿಕ್ಕಿಲ್ಲ. ಅವರಿಗೆ ಅವಾರ್ಡ್ ಸಿಕ್ಕಿಲ್ಲ ಎಂಬ ಬಗ್ಗೆ ಯಾವುದೇ ಬೇಸರ ಇಲ್ಲ. ಆದರೆ, ಇದನ್ನು ತಿಳಿಯಲು ನಾವು ಸುಖಾಸುಮ್ಮನೆ ಮುಂಜಾನೆ 3 ಗಂಟೆವರೆಗೆ ಕಾಯಬೇಕಾಯಿತು ಎಂದು ಬೇಸರ ಹೊರಹಾಕಿದ್ದಾರೆ.

ಸತ್ಯ ಧರಿಸಿರುವ ವಿಗ್ ತೆಗೆಯಲು ಕಣ್ಣೀರಿಟ್ಟ ಗೌತಮಿ ಜಾದವ್; ಕೊಂಕು ಮಾಡಿದವರಿಗೂ ಆಶ್ಚರ್ಯ!

ರಿಷಬ್ ಶೆಟ್ಟಿಯ ಕಾಂತಾರಕ್ಕೆ 2 ವರ್ಷ..!

ನಟ ನಿರ್ದೇಶಕ ರಿಷಬ್ ಶೆಟ್ಟಿಗೆ ಪ್ಯಾನ್​ ಇಂಡಿಯಾದಲ್ಲಿ ಇಮೇಜ್ ತಂದುಕೊಟ್ಟ ಸಿನಿಮಾ ಕಾಂತಾರ. ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಎರಡು ದಿನ ಆಗಿದೆ. ಹೀಗಾಗಿ ಕಾಂತಾರ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್​​​ ಸಂತಸ ಹಂಚಿಕೊಂಡಿದೆ. ಕಾಂತಾರ ಗೆಲ್ಲಿಸಿದ್ದೀರಾ. ಈಗ ಕಾಂತಾರ ಚಾಪ್ಟರ್​ 1 ಬರುತ್ತಿದೆ. ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಕಾಂತಾರ ಚಾಪ್ಟರ್​1 ಬರಲಿದೆ ಅಂತ ಹೇಳಿಕೊಂಡಿದ್ದಾರೆ.

click me!