'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌

'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌

Published : May 12, 2026, 05:31 PM IST

ನಟಿ ಪ್ರಿಯಾಂಕಾ ಉಪೇಂದ್ರ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶಿಸಿರುವ "ಸೆಪ್ಟೆಂಬರ್ 21" ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ, ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶಿಸಿರುವ  "ಸೆಪ್ಟೆಂಬರ್ 21" ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ನಟ ಉಪೇಂದ್ರ ಅವರಿಂದ ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ. ಚಿತ್ರ ಮೇ 22 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿರುವ ರೋಗಿಯ ಸುತ್ತ ಈ ಸಿನಿಮಾದ ಕತೆ ಹೆಣೆಯಲಾಗಿದೆ.

ಟೀಸರ್​ ಮೂಲಕ ಕುತೂಹಲ
ನಟ ಡಾಲಿ ಧನಂಜಯ್​ ಅಭಿನಯಿಸಿರೋ ಮತ್ತೊಂದು ಸೆಂಟಿಮೆಂಟ್​ ಸ್ಟೋರಿಯ ಸಿನಿಮಾ ಮದರ್ ಪ್ರಾಮಿಸ್​.. ಈಗಾಗ್ಲೆ ಟೀಸರ್​ ಮೂಲಕ ಕುತೂಹಲ ಮೂಡಿಸಿರೋ ಈ ಸಿನಿಮಾವನ್ನ ಧನಂಜಯ್​ ಅವರೇ ನಿರ್ಮಾಣ ಮಾಡಿದ್ದಾರೆ. ಇದೀಗ ಅಮ್ಮಂದಿರ ದಿನಕ್ಕೆ ಅಂತ ಮದರ್​ ಫ್ರಾಮಿಸ್ ಸಿನಿಮಾದ ಮದರ್​​ ಸೆಂಟಿಮೆಂಟ್​ ಹಾಡು ಬಿಡುಗಡೆ ಆಗಿದೆ. ಈ ಹಾಡನ್ನ ಡಾಲಿ ಧನಂಜಯ್ ಅವರೇ ಬರೆದಿದ್ದು, ಸಂಚಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ಮೈಸೂರು ನಿರ್ದೇಶನ ಇದ್ದು, ವಿನಯ್ ಪ್ರಸಾದ್ ಡಾಲಿ ಅಮ್ಮನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ವೀರಗಾಸೆ ಹಿನ್ನೆಲೆಯ 'ರುದ್ರಾಭಿಷೇಕಂ' ಹಾಡು ಬಿಡುಗಡೆ
ನಮ್ಮ ಸಾಂಸ್ಕೃತಿಕ‌ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆಯನ್ನು ಆರಾಧಿಸುತ್ತ ಬಂದಿರುವ ಕುಟುಂಬ ಹಾಗೂ ವೀರಭದ್ರ ದೇವರ ಇತಿಹಾಸವನ್ನು ಹೇಳುವ ಸಿನಿಮಾ ರುದ್ರಾಭಿಷೇಕಂ. ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಕಾ ತಿಮ್ಮೇಶ್ ನಾಯಕಿಯಾಗಿದ್ದು, ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಸುದ್ದಿಘೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಹಾಡುಗಳನ್ನ ಬಿಡುಗಡೆ ಮಾಡಿದ್ದಾರೆ. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ವೀರಗಾಸೆ ಕಲಾವಿದ ರೋಲ್ ಜೊತೆ ಇದೇ ಮೊದಲ ಬಾರಿಗೆ ತಂದೆ, ಮಗನಾಗಿ, ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಗರುಡ ಸಿನಿಮಾ ಸಿದ್ಧ
ಇತ್ತೀಚಿನ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಎಐ ತಂತ್ರಜ್ಞಾನ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ, ಮುಂದಿನ ಕಾಲಘಟ್ಟದಲ್ಲಿ ಅದು ಜನರ ಮತ್ತು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ, ಅದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯುಕ್ತವಾಗುತ್ತಾ ಎಂಬ ಕಂಟೆಂಟ್ ಆಧರಿಸಿ ಕನ್ನಡದಲ್ಲಿ ಗರುಡ ಅನ್ನೋ ಸಿನಿಮಾ ಸಿದ್ಧವಾಗಿದೆ. ಶೈವಂ ಫಿಲಂಸ್ ಮೂಲಕ ಕಿರಣ್ ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜತೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ರೀತ್ವಾನ್ ಶ್ರೀನಿವಾಸ್, ಸೌರವ್ ಪ್ರಶಾಂತ್, ದಿವ್ಯಾ ಚಂದ್ರ , ವಿವೇಕ್ ಅಭಿಮಹೇಶ್, ಅಭಿಷೇಕ್, ಕಿರಣ್, ವಿನಯ್ ಪ್ರಭಾಕರ್ ನಟಿಸಿದ್ದಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more