ಗಾಡ್ ಫಾದರ್ ಆ ಗುಟ್ಟನ್ನೂ ಅನುಶ್ರೀಗೆ ಹೇಳಿದ ಬುದ್ದಿವಂತ ಉಪೇಂದ್ರ!

Published : Dec 11, 2024, 06:00 PM IST
ಗಾಡ್ ಫಾದರ್ ಆ ಗುಟ್ಟನ್ನೂ ಅನುಶ್ರೀಗೆ ಹೇಳಿದ ಬುದ್ದಿವಂತ ಉಪೇಂದ್ರ!

ಸಾರಾಂಶ

ಉಪೇಂದ್ರ 'ಯುಐ' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಅದರಲ್ಲಿ ತಮ್ಮ ಗಾಡ್ ಫಾದರ್ ಬಗೆಗಿನ ಗುಟ್ಟೊಂದನ್ನು ಉಪೇಂದ್ರ ವಿವರಿಸಿದ್ದಾರೆ. ಹಣಕ್ಕಾಗಿ ಆಸಿಡ್ ಹಾಕುವ ಬೆದರಿಕೆ ಬಂದರೂ ಅವರು ಸ್ವಲ್ಪವೂ ವಿಚಲಿತರಾಗದೆ ಸಹನೆಯಿಂದ ಎದುರಿಸಿದ್ದನ್ನು ಉಪೇಂದ್ರ ಹೇಳಿದ್ದಾರೆ.

ಸ್ಯಾಂಡಲ್‌ವುಡ್ ನಟ-ನಿರ್ದೇಶಕ, ರಿಯಲ್ ಸ್ಟಾರ್ ಖ್ಯಾತಿಯ ಉಪೇಂದ್ರ (Real Stra Upendra) ಅವರು ಸದ್ಯ 'ಯುಐ' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಆಂಕರ್ ಅನುಶ್ರೀ ಬಳಿ ಸಂದರ್ಶನವೊಂದರಲ್ಲಿ ಉಪೇಂದ್ರ ಮಾತನಾಡಿರುವ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹಳಷ್ಟು ಲೈಕ್ಸ್ ಡಪೆಯುತ್ತಿದೆ. ಅದರಲ್ಲಿ ಅವರು ಯಾರ ಬಗ್ಗೆ ಮಾತನ್ನಾಡಿದ್ದಾರೆ, ಅದೇನು ಹೇಳಿದ್ದಾರೆ ಎಂಬ ಕುತೂಹಲಕ್ಕೆ ಮುಂದಿನ ಸ್ಟೋರಿ ನೋಡಿ.. 

'ನಿನಗೇ ಅನಿವಾರ್ಯತೆ ಬಂದ್ರೆ ಕಲಿತೀಯಾ ನೀನು.. ನಾನ್ಯಾರು ನಿಂಗೆ ಕಲಿಸೋಕೆ ಅಂತ.. ತುಂಬಾ ಟ್ರೂಥ್‌ಪುಲ್ ಅವ್ರು ನಿಜ ಹೇಳ್ಬೇಕು ಅಂದ್ರೆ..  ನಿಮ್ಗೆ ನಿಜ ಹೇಳ್ಬೇಕು ಅಂದ್ರೆ ನಮ್ ಸಿನಿಮಾದಲ್ಲಿನಾನು ಕ್ಯಾರೆಕ್ಟರ್‌ ಎಲ್ಲಾ ಸುಮ್ನೆ ಬಂದಿದ್ದಲ್ಲ, ಅವ್ರು ಹಾಗೇನೇ ಇದ್ರು.. ಪೇಶನ್ಸ್ ಅಂದ್ರೆ ಅಲ್ಟಿಮೇಟ್ ಪೇಶನ್ಸ್..  ಯಾರೋ ಒಬ್ಬ ಬಂದ ಕರಾಬ್‌ ಆಗಿ ಅವ್ರ ಮನೆಗೆ.. ಹೇಗಿತ್ತು ಅಂದ್ರೆ, ಅವ್ರ ಮನೆಗೆ ಯಾರು ಬೇಕಾದ್ರೂ ಯಾವಾಗ ಬೇಕಾದ್ರೂ ಬರಬಹುದು, ಹೋಗಬಹುದು ಅನ್ನೋ ತರ ಇತ್ತು.. 

ಏನ್ ಕಥೆ ಪ್ರದೀಪ್ ದೊಡ್ಡಯ್ಯ ಅವ್ರದ್ದು? ಔಟ್ ಆಫ್ ಸಿಲಬಸ್ ಹೋಗಿರೋದ್ಯಾಕೆ?

ಸೆಕ್ಯೂರಿಟಿ ಏನೂ ಇರ್ಲಿಲ್ಲ ಅವ್ರ ಮನೆಗೆ.. ನಾನೊಬ್ನೇ ಕೂತಿದ್ದೆ ಅವ್ರ ಜೊತೆನಲ್ಲಿ, ಒಬ್ಬ ಬಂದ ಡೈರೆಕ್ಟಾಗಿ, ಹೀಗೆ ವಾರ್ನ್ ಮಾಡಿದ.. 'ನಂಗೆ ನಾಳೆ ಹತ್ತು ಸಾವಿರ ರೂಪಾಯಿ ಕೊಡ್ಬೇಕು ನೀನು.. ಕೊಡ್ಲಿಲ್ಲ ಅಂದ್ರೆ ಆಸಿಡ್ ಹಾಕ್ತೀನಿ ನಿಂಗೆ.. ' ಅಂದ. ನಂಗೆ ಫುಲ್ ಶಾಕ್ ಆಗೋಯ್ತು.. ನಾನು ಆಗ ಕಾಲೇಜು ಓದ್ತಾ ಇದ್ದೆ.. ಫುಲ್ ಜೋಶ್ ಬೇರೆ.. ಹುಡುಗ್ರ ಕರ್ಕೊಂಡು ಬರ್ತೀನಿ ಅಂತ ಹೇಳ್ದೆ.. ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ಹುಡುಗ್ರ ಕರ್ಕೊಂಡು ನಿಮ್ಮನೆಗೆ ಬರ್ತೀನಿ' ಅಂದೆ. 

ಅವ್ರು ತುಂಬಾ ಸಹನೆಯಿಂದ 'ಅವೆಲ್ಲಾ ಬೇಡ' ಅನ್ನೋ ತರಹ ಕೈ ಸನ್ನೆ ಮಾಡಿದ್ರು.. ಮಾರನೇ ದಿನ ನಾನು ಅವ್ರ ಮನೆಗೆ ಬೇಗ ಹೋದೆ.. ಹೋದವ್ನೇ 'ಏನ್ ಸರ್, ಹತ್ತು ಗಂಟೆಗೆ ಬರ್ತೀನಿ ಅಂದವ್ನೇ' ಅಂದೆ.. ಆದ್ರೂ ಅವ್ರು ಸುಮ್ನೇ ಇದ್ದರು.. ಗೇಟ್ ಹಾಗೂ ಡೋರ್ ಯಾವತ್ತಿನ ತರಹ ತೆರೆದೇ ಇತ್ತು.. ಮನೆ ಒಳಕ್ಕೆ ಸುಮ್ಮನೇ ಕೂತಿದಾರೆ.. ನನ್ನ ಹತ್ರ 'ನೀನೇನೂ ಮಾತಾಡ್ಬೇಡ, ಅವ್ನು ಬರ್ಲಿ..' ಅಂದ್ರು.

ಡಾ. ರಾಜ್​ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ & ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !

ಬಂದ ಹತ್ತು ಗಂಟಗೆ ಸರಿಯಾಗಿ ಬಾಟ್ಲಿನಲ್ಲಿ ಆಸಿಡ್ ಹಿಡ್ಕೊಂಡೇ ಬಂದ.. ಬಂದವ್ನೇ ಅವ್ರ ಎದುರು ಬಂದು ಬಾಟಲಿ ಹಿಡ್ಕೊಂಡೇ ನಿಂತ.. 'ನಾನು ಕೊಡಲ್ಲ, ಆಸಿಡ್ ಹಾಕು' ಅಂದ್ರು.. ಅವ್ನು ಹಂಗೇ ನೋಡಿದ ಅವ್ರನ್ನ, ಆ ಕಡೆ ಈ ಕಡೆ ನೋಡಿ ಹಂಗೇ ಹೊರಟು ಹೋದ.. ಇವ್ರು ಸ್ವಲ್ಪನೂ ವಿಚಲಿತರಾಗೇ ಇಲ್ಲ.. ಎಂಥ ಟೈಮಲ್ಲೂ ಸಹನೆ ಕಳ್ಕೊಳ್ಳೋದೇ ಗೊತ್ತಿರ್ಲಿಲ್ಲ ಅವ್ರಿಗೆ.. 'ಅವ್ನು ಹೋದ ಬಳಿಕ, ಯಾವತ್ತಿನಂತೆ, 'ಬಾ, ಕೆಲಸ ಮಾಡೋಣ..' ಅಂತ ಅಂದು ನಾರ್ಮಲ್ ಆಗೇ ಇದ್ರು..' ಅಂದಿದ್ದಾರೆ ನಟ ಉಪೇಂದ್ರ. 

ತಮ್ಮ ಗುರುಗಳು ಕಾಶೀನಾಥ್ ಬಗ್ಗೆ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಎದುರು ಕುಳಿತು ಹೇಳುತ್ತಿದ್ದರೆ ಪಟ್‌ ಪಟಾಕಿ ಆಂಕರ್ ಅನುಶ್ರೀ ಅವರು 'ಮೂಕ ವಿಸ್ಮಿತೆ' ಎಂಬಂತೆ ಅಚ್ಚರಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಮಧ್ಯೆ ಮಧ್ಯೆ 'ಹೌದಾ, ಹಾಗಾ, ಚೂರೂ ಭಯ ಆಗಿಲ್ವ ಅವ್ರಿಗೆ' ಹೀಗೆ ಆಶ್ಚರ್ಯ ವ್ಯಕ್ತಪಡಿಸುತ್ತ ಅನುಶ್ರೀ ಕೇಳುತ್ತಿದ್ದರೆ ಆ ವಿಡಿಯೋ ನೋಡುತ್ತಿರುವವರು 'ಘೋರ ಚಳಿಯಲ್ಲೂ ಬೆವರುವುದು ಪಕ್ಕಾ' ಎಂಬಂತೆ ನೈಜ ಸಂಗತಿ ಹೇಳುತ್ತಿದ್ದರು ಉಪೇಂದ್ರ! ನೀವೂ ಒಮ್ಮೆ ನೋಡಿ ವಿಡಿಯೋ!

ಡಾ ರಾಜ್‌ಕುಮಾರ್ ಅಪಹರಣ: ಆ 108 ದಿನಗಳು, ಹೇಗಿತ್ತು ಸಿ.ಎಂ ಕೃಷ್ಣ ಹೋರಾಟ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ