ಏನ್ ಕಥೆ ಪ್ರದೀಪ್ ದೊಡ್ಡಯ್ಯ ಅವ್ರದ್ದು? ಔಟ್ ಆಫ್ ಸಿಲಬಸ್ ಹೋಗಿರೋದ್ಯಾಕೆ?

By Shriram Bhat  |  First Published Dec 11, 2024, 4:15 PM IST

ಮೋಟಿವೇಶನಲ್ ಸ್ಪೀಕರ್ ಆಗಿ ಹೆಸರು ಮಾಡಿರುವ ಪ್ರದೀಪ್, ಸದ್ಯ ಸಿನಿಮಾ ನಟನೆ ಹಾಗೂ ನಿರ್ದೇಶಕರಾಗಿ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಹಲವರಿಗೆ ಹಲವು ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಲು ಪ್ರೇರಣೆ ನೀಡುತ್ತಿದ್ದ ಪ್ರದೀಪ್, ಈಗ ಸ್ವತಃ ತಾವೇ ಹೊಸದೊಂದು ಕನಸು ಹೊತ್ತು ಫೀಲ್ಡಿಗೆ..


ಮೋಟಿವೇಶನ ಸ್ಪೀಕರ್ ಆಗಿ,ಹಲವಾರು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನ  ಹೇಳಿ,ಅದರ ಜೊತೆಗೆ ಜಾಹೀರಾತು ಸಂಸ್ಥೆ ಮೂಲಕ ಕನ್ನಡ ಚಿತ್ರೋದ್ಯಮದ ಜೊತೆ ನಿರಂತರವಾದ ಸಂಪರ್ಕ ಹೊಂದಿರುವ,ಪ್ರದೀಪ್ ದೊಡ್ಡಯ್ಯ (Pradeep Doddaiah),ಕನ್ನಡದ ಬಹಳಷ್ಟು ಖ್ಯಾತ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿದ ಅನುಭವ ಇರುವವರು. ಅಂಥ ಪ್ರದೀಪ್, ಇದೀಗ ಔಟ್ ಆಫ್ ಸಿಲಬಸ್ ಹೋಗಿದ್ದಾರೆ!

ಹೌದು, ಮೋಟಿವೇಶನಲ್ ಸ್ಪೀಕರ್ ಆಗಿ ಹೆಸರು ಮಾಡಿರುವ ಪ್ರದೀಪ್, ಸದ್ಯ ಸಿನಿಮಾ ನಟನೆ ಹಾಗೂ ನಿರ್ದೇಶಕರಾಗಿ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಹಲವರಿಗೆ ಹಲವು ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಲು ಪ್ರೇರಣೆ ನೀಡುತ್ತಿದ್ದ ಪ್ರದೀಪ್, ಈಗ ಸ್ವತಃ ತಾವೇ ಹೊಸದೊಂದು ಕನಸು ಹೊತ್ತು ಫೀಲ್ಡಿಗೆ ಜಂಪ್ ಮಾಡಿದ್ದಾರೆ. 'ಔಟ್ ಆಫ್ ಸಿಲಬಸ್' ಚಿತ್ರವನ್ನು ನಿರ್ದೇಶಿಸಿ ತಾವೇ ನಾಯಕರಾಗಿಯೂ ನಟಿಸಿದ್ದಾರೆ. 

Tap to resize

Latest Videos

ಗುರುವಿಗೆ ಆಸಿಡ್ ಹಾಕ್ತೀನಿ ಅಂದಿದ್ನಂತೆ ಅವ್ನು, ಅದಕ್ಕೆ ಉಪೇಂದ್ರ ಮಾಡಿದ್ದೇನು?

ಶ್ರೀಮತಿ ವಿಜಯಕಲಾ ಸುಧಾಕರ್,ತನುಷ್ ಎಸ್ ವಿ, ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಪ್ರದೀಪ್ ದೊಡ್ಡಯ್ಯ ನಟಿಸಿ,ನಿರ್ದೇಶನ ಮಾಡಿರುವ 'ಔಟ್ ಆಫ್ ಸಿಲಬಸ್' ಚಿತ್ರದ ಟ್ರೈಲರ್ ಬಿಡುಗಡೆ ಜೊತೆಗೆ ಚಿತ್ರ ಬಿಡುಗಡೆಯ ದಿನಾಂಕವನ್ನು ಸಹ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಔಟ್ ಆಫ್ ಸಿಲಬಸ್ ಟ್ರೈಲರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು,ಯುವ ಜನತೆಯನ್ನು ಕೇಂದ್ರವಾಗಿಟ್ಟು,ಭರ್ಜರಿ ಮನೋರಂಜನೆ ಕೊಡುವ ಎಲ್ಲ ಅಂಶಗಳನ್ನು ಒಳಗೊಂಡಿದೆ, ಔಟ್ ಆಫ್ ಸಿಲಬಸ್ ಚಿತ್ರವು ರಾಜ್ಯಾದ್ಯಂತ ಇದೇ ಡಿಸೆಂಬರ್ 27ಕ್ಕೆ ಬಿಡುಗಡೆ ಆಗುತ್ತಿದೆ..

ನಾಯಕ ಪ್ರದೀಪ್ ದೊಡ್ಡಯ್ಯ ಜೊತೆಗೆ,ನಾಯಕಿಯಾಗಿ ಹೃತಿಕಾ ಶ್ರೀನಿವಾಸ್,ಇನ್ನುಳಿದ ಕಲಾವಿದರ ಪಟ್ಟಿಯಲ್ಲಿ ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ,ಚಿತ್ಕಲ ಬಿರಾದಾರ, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಇದ್ದಾರೆ.. ಇನ್ನು ಚಿತ್ರದ ತಾಂತ್ರಿಕ ವಿಭಾಗದಲ್ಲಿ,ದೇವ ವಡ್ಡೆ ಛಾಯಾಗ್ರಹಣ,ಉಮೇಶ್ ಆರ್ ಬೀ ಸಂಕಲನವಿದೆ. ಕನ್ನಡದ ಹಲವು ಖ್ಯಾತನಾಮ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನುಭವವೇ ಸ್ವತಃ ಪ್ರದೀಪ್ ಗೆ ದೊಡ್ಡ ಶಕ್ತಿ ತುಂಬಿದೆ. ಅವರೆಲ್ಲರ ಸಹಾಯ-ಸಹಕಾರ ಪ್ರದೀಪ್ ಅವರಿಗಿದೆ. 

ಡಾ. ರಾಜ್​ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ & ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !

click me!