ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಶಿವರಾಜ್‌ ಕುಮಾರ್! ಚಿಕಿತ್ಸೆಗೂ ಮುನ್ನ ಹಾಟ್‌ ಸೀಟ್‌ನಲ್ಲಿ ಶಿವಣ್ಣ...

By Suchethana D  |  First Published Dec 11, 2024, 2:47 PM IST

ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುತ್ತಿರುವ  ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ನಟ ಶಿವರಾಜ್‌ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಡಿಟೇಲ್ಸ್‌ ಇಲ್ಲಿದೆ...
 


ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ತುಂಬಾ ಓಡಾಡುತ್ತಿರುವ ಹಾಗೆಯೇ ಅಭಿಮಾನಿಗಳು ಆತಂಕ ಪಡುತ್ತಿರುವ ವಿಷಯ ಏನೆಂದರೆ, ನಟ ಶಿವರಾಜ್‌ ಕುಮಾರ್ ಅವರ ಅನಾರೋಗ್ಯ. ಶಿವರಾಜ್‌ ಕುಮಾರ್ ಅವರು ಚಿಕಿತ್ಸೆಗೆಂದು ಇದೇ 18ರಂದು ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನುವ ವರದಿಯಿದೆ. ಇದಕ್ಕೂ ಮುನ್ನ ಶಿವರಾಜ್‌ ಕುಮಾರ್‍‌, ಮುಂಬೈಗೆ ಹಾರಿದ್ದಾರೆ. ಇದಕ್ಕೆ ಕಾರಣ, ನಟ ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಭಾಗಿಯಾಗಲು. ಎಲ್ಲರಿಗೂ ತಿಳಿದಿರುವಂತೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಅಪ್ಪು ಅವರು ನಡೆಸಿಕೊಡುತ್ತಿದ್ದರು. ಹಿಂದಿಯಲ್ಲಿ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮವನ್ನು ಅಮಿತಾಭ್‌ ಅವರು ನಡೆಸಿಕೊಡುತ್ತಿದ್ದು, ಇದೀಗ ಶಿವರಾಜ್‌ ಕುಮಾರ್ ಹಾಟ್‌ ಸೀಟ್‌ನಲ್ಲಿ ಕುಳಿತುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 

ನಿನ್ನೆ ಅಂದ್ರೆ ಡಿಸೆಂಬರ್‍‌ ಹತ್ತರಂದು ಈ ಕಾರ್ಯಕ್ರಮ ಫಿಕ್ಸ್ ಆಗಿತ್ತು. 'ಕೌನ್ ಬನೇಗಾ ಕರೋಡ್‌ಪತಿ' ಶೂಟಿಂಗ್‌ನಲ್ಲಿ ಶಿವರಾಜ್‌ ಕುಮಾರ್ ಅವರು ಭಾಗಿಯಾಗಬೇಕಿತ್ತು. ಆದರೆ ಅಮಿತಾಭ್‌ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಇಂದಿಗೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಇದರ ಶೂಟಿಂಗ್‌ ಇಂದು ನಡೆದರೆ, ಶೀಘ್ರದಲ್ಲಿಯೇ ಈ ಎಪಿಸೋಡ್‌ ಪ್ರಸಾರ ಆಗಲಿದೆ.

Tap to resize

Latest Videos

 

ಈ ವರ್ಷ ಗೂಗಲ್‌ನಲ್ಲಿ ಏನೆಲ್ಲಾ ಹುಡುಕಿದ್ರು ನೋಡಿ! ಭಾರತೀಯರಿಗೆ ಈ ವಿಷ್ಯದ ಮೇಲೆ ಇಷ್ಟು ಆಸಕ್ತಿನಾ?

undefined


ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು(ಡಿಸೆಂಬರ್ 10) ಶಿವಣ್ಣ 'ಕೌನ್ ಬನೇಗಾ ಕರೋಡ್‌ಪತಿ' ಶೋ ಚಿತ್ರೀಕರಣದಲ್ಲಿ ಭಾಗಿ ಆಗಬೇಕಿತ್ತು. ಅಮಿತಾಬ್ ಬಚ್ಚನ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿರುವುದರಿಂದ ಚಿತ್ರೀಕರಣ ಮುಂದೂಡಲಾಗಿದೆ. ಡಿಸೆಂಬರ್ 18ಕ್ಕೆ ಶಿವರಾಜ್‌ಕುಮಾರ್ ಅಮೆರಿಕಾ ಫ್ಲೈಟ್ ಏರಲಿದ್ದಾರೆ. ಅದಕ್ಕೂ ಮುನ್ನ ಬಿಗ್‌ಬಿ ಎದುರು ಹಾಟ್ ಸೀಟ್‌ನಲ್ಲಿ ಕೂತು ಕೋಟಿ ಗೆಲ್ಲುವ ಆಟ ಆಡಲಿದ್ದಾರೆ. ಇದಾಗಲೇ ಹಲವು ಕ್ಷೇತ್ರಗಳ ದಿಗ್ಗಜರು, ಖ್ಯಾತನಾಮರು, ಸೆಲೆಬ್ರಿಟಿಗಳು ಈ ಶೋನಲ್ಲಿ ಪಾಲ್ಗೊಂಡಿದ್ದಾರೆ. ನಟ ಅಭಿಷೇಕ್ ಬಚ್ಚನ್,  ಆಮೀರ್ ಖಾನ್, ವರುಣ್ ಧವನ್,  ನಟಿ ವಿದ್ಯಾಬಾಲನ್, ನಿರ್ದೇಶಕಿ ಫರಾ ಖಾನ್, ಗಾಯಕಿ ಶ್ರೇಯಾ ಘೋಷಾಲ್ ಸೇರಿದಂತೆ ಹಲವರು ಆಟವಾಡಿದ್ದಾರೆ. ಆದರೆ ಇದೀಗ ಮೊದಲ ಬಾರಿಗೆ ಕನ್ನಡದ ನಟನೊಬ್ಬರಿಗೆ ಈ ಶ್ರೇಯಸ್ಸು ಸಿಕ್ಕಿದ್ದು, ಇದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. 
 
ಈಚೆಗಷ್ಟೇ ಶಿವರಾಜ್‌ ಕುಮಾರ್, ಅವರ ಪತ್ನಿ ಗೀತಾ ಸೇರಿದಂತೆ ಕುಟುಂಬಸ್ಥರು ತಿರುಪತಿಗೆ ಭೇಟಿ ನೀಡಿ ಮುಡಿ ಕೊಟ್ಟು ಪೂಜೆ ನೆರವೇರಿಸಿದ್ದಾರೆ. ಅಮೆರಿಕಕ್ಕೆ ತೆರಳುವ ಮುನ್ನ ಈ ಕಾರ್ಯವನ್ನು ಮಾಡಿರುವ ಅವರು, ಇದೀಗ ಹಾಟ್‌ ಸೀಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅದನ್ನು ನೋಡುವ ತವಕದಲ್ಲಿದ್ದಾರೆ ಅಭಿಮಾನಿಗಳು. ಅಂದಹಾಗೆ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 16 ಇದಾಗಿದೆ.  ಇನ್ನು ಶಿವರಾಜ್‌ ಕುಮಾರ್‍‌ ಅವರ ಸಿನಿಮಾದ ಕುರಿತು ಹೇಳುವುದಾದರೆ, ಇವರ  ನಟನೆಯ 'ಭೈರತಿ ರಣಗಲ್' ಸಿನಿಮಾ ಸಾಕಷ್ಟು ಗಳಿಕೆ ಮಾಡಿದೆ. ಈ ಚಿತ್ರವನ್ನು ಶಿವರಾಜ್‌ ಅವರೇ  ನಿರ್ಮಿಸಿದ್ದಾರೆ.    ಈ ಚಿತ್ರದ ಸಂದರ್ಭದಲ್ಲಿ ಅನಾರೋಗ್ಯದ ವಿಷಯವನ್ನು ನಟ ಹೇಳಿದ್ದರು.  ‘ಎಲ್ಲರಂತೆ ನಾನೂ ಮನುಷ್ಯ. ನನಗೂ ತೊಂದರೆ ಆಗಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ.  ಚಿಕಿತ್ಸೆ ಪಡೆಯುತ್ತಿದ್ದೇನೆ. ಆರಂಭದಲ್ಲಿ ಭಯ ಆಯ್ತು. ಈಗ ಧೈರ್ಯ ತೆಗೆದುಕೊಂಡಿದ್ದೇನೆ. ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಬೇಕು’ ಎಂದಿದ್ದರು. ಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಶಿವರಾಜ್​ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಡಿಸೆಂಬರ್ 18ಕ್ಕೆ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದೆ ಎಂದು ತಿಳಿದು ಬಂದಿದೆ. 

ಕನ್ನಡದಲ್ಲಿ ಕೊನೆಯ ಶೋ ಎಂದ ಸುದೀಪ್ ತೆಲಗು ಬಿಗ್‌ಬಾಸ್‌ನಲ್ಲಿ! ವೈರಲ್‌ ವಿಡಿಯೋಗೆ ಫ್ಯಾನ್ಸ್‌ ಶಾಕ್

click me!