ನಿರ್ದೇಶಕ ಉಪೇಂದ್ರ ಅವರದೊಂದು ಫೇಮಸ್ ಡೈಲಾಗ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುತ್ತುತ್ತ ವೈರಲ್ ಆಗುತ್ತಿದೆ. ಅದು ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಸಹ ಬಳಕೆಯಾಗಿದೆ. ಹಾಗಿದ್ದರೆ ಆ ಸಂಭಾಷಣೆ ತುಣುಕು ಯಾವುದು?..
ನಟ-ನಿರ್ದೇಶಕ ಉಪೇಂದ್ರ (Upendra) ಅವರು ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಎಂಬ ಪಟ್ಟವನ್ನು ಪಡೆದವರು. ಅವರು ಚಿತ್ರರಂಗಕ್ಕೆ ಬಂದ ಶುರುವಿನಲ್ಲಿ ಬಹಳಷ್ಟು ಕ್ರಾಂತಿಕಾರಿ ವ್ಯಕ್ತಿ ಆಗಿದ್ದರು ಎನ್ನಬಹುದು. ಅವರ ನಿರ್ದೇಶನದ 'ಎ' ಹಾಗೂ 'ಉಪೇಂದ್ರ' ಚಿತ್ರಗಳಲ್ಲಿ ಅವರ ಬಹಳಷ್ಟು ಕ್ರಾಂತಿಕಾರಿ ಯೋಚನೆಯ ಸಂಭಾಷಣೆಗಳು ಕಾಣಸಿಗುತ್ತವೆ. ಅದಾದ ಬಳಿಕ ಸೂಪರ್ ಸ್ಟಾರ್ ಹಾಗೂ ಹಾಲಿವುಡ್ ಚಿತ್ರಗಳಲ್ಲಿ ಕೂಡ ಸಾಕಷ್ಟು 'ಲಾಜಿಕ್ಕೇ ಮ್ಯಾಜಿಕ್ಕು' ಎಂಬಂತಹ ಧೋರಣೆ ಇದೆ ಎನ್ನುವುದು ಆ ಚಿತ್ರಗಳನ್ನು ನೋಡಿರುವ ಯಾರಿಗಾದರೂ ಅರ್ಥವಾಗುತ್ತದೆ.
ಉಪೇಂದ್ರ ಅವರು ನಟ-ನಿರ್ದೇಶಕ ಕಾಶೀನಾಥ್ ಗರಡಿಯಿಂದ ಬಂದವರು. ಬಳಿಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳೆದು 'ಗುರುಗಳನ್ನು ಮೀರಿದ ಶಿಷ್ಯ' ಎಂಬಂತೆ ಬೆಳೆದರು. ರಿಯಲ್ ಸ್ಟಾರ್ ಉಪೇಂದ್ರ ಚಿತ್ರಗಳ ಕನ್ನಡದಲ್ಲಿ ಹೊಸ ಟ್ರೆಂಟ್ ಸೃಷ್ಟಿ ಮಾಡಿವೆ. ಅಂದಿನ ಜನರೇಶನ್ ಉಪೇಂದ್ರ ಅವರನ್ನು 'ಬುದ್ದಿವಂತ' ಎಂದು ಕರೆದು ಅಕ್ಷರಶಃ ಆರಾಧಿಸಿದ್ದರು. ಈಗಲೂ ಕೂಡ ಉಪೇಂದ್ರ ಸಿನಿಮಾಗಳಿಗೆ, ನಟ ಉಪೇಂದ್ರ ಆಡುವ ಬುದ್ದಿವಂತಿಕೆ ಬೆರೆತ ಮಾತುಗಳಿಗೆ ಬಹಳಷ್ಟು ಅಭಿಮಾನಿಗಳು ಇದ್ದಾರೆ.
undefined
ನವಗ್ರಹದ 'ಜಗ್ಗು' ಪಾತ್ರಕ್ಕೆ ದರ್ಶನ್ ನನ್ನ ಮೊದಲ ಆಯ್ಕೆಯಲ್ಲ; ದಿನಕರ್ ಹೇಳಿಕೆ ವೈರಲ್!
ಇಂಥ ನಟ, ನಿರ್ದೇಶಕ ಉಪೇಂದ್ರ ಅವರದೊಂದು ಫೇಮಸ್ ಡೈಲಾಗ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುತ್ತುತ್ತ ವೈರಲ್ ಆಗುತ್ತಿದೆ. ಅದು ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಸಹ ಬಳಕೆಯಾಗಿದೆ. ಹಾಗಿದ್ದರೆ ಆ ಸಂಭಾಷಣೆ ತುಣುಕು ಯಾವುದು? 'ಪೂಜೆ ಮಾಡುವಾಗ ದೇವರು ನೋಡುತ್ತಾನೆ ಎಂದು ಯೋಚಿಸುವ ಮನುಜ, ಇನ್ನೊಬ್ಬರಿಗೆ ಮೋಸ ಮಾಡುವಾಗ ದೇವರು ನೋಡುತ್ತಾನೆ ಎಂದು ಯಾಕೆ ಯೋಚಿಸುವುದಿಲ್ಲ' ಎಂಬ ಪ್ರಶ್ನೆಯನ್ನು ಬಹಳ ವರ್ಷಗಳ ಹಿಂದೆಯೇ ಕೇಳಿದ್ದಾರೆ ನಟ ಉಪೇಂದ್ರ.
ಸದ್ಯದಲ್ಲೇ ಉಪೆಂದ್ರ ನಟನೆ ಹಾಗೂ ನಿರ್ದೇಶನದ 'ಯು/ಐ' ಚಿತ್ರವು ತೆರೆಗೆ ಬರಲಿದೆ. ಬಹಳಷ್ಟು ವರ್ಷಗಳ ಬಳಿಕ ರಿಯಲ್ ಸ್ಟಾರ್ ಡೈರೆಕ್ಷನ್ ಮಾಡಿದ್ದು, ಈ ಕಾರಣಕ್ಕೆ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಜೊತೆಗೆ, ಈ ಚಿತ್ರವು ಭಾರೀ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆ ಆಗಲಿದೆ. ಹೀಗಾಗಿ, ಯುಐ ಚಿತ್ರದ ಮೂಲಕ ಉಪೇಂದ್ರ ಅವರು ಭಾರತವನ್ನೂ ಮೀರಿ ಖ್ಯಾತಿ ಗಳಿಸಿಲಿದ್ದಾರೆ ಎನ್ನಬಹುದು.
'ನವಗ್ರಹ'ದ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಕಣ್ಣು ಬಿಟ್ಟಿದ್ಯಾಕೆ, ಸೀಕ್ರೆಟ್ ಗೊತ್ತಾದ್ರೆ ಶಾಕ್ ಗ್ಯಾರಂಟಿ!
ಉಪೇಂದ್ರ ಅಭಿನಯ ಹಾಗೂ ನಿರ್ದೇಶನದ ಚಿತ್ರಗಳ ಬಹಳಷ್ಟು ಡೈಲಾಗ್‌ಗಳನ್ನು ಅವರ ಅಭಿಮಾನಿಗಳು ಸೇರಿದಂತೆ ಇಂದಿಗೂ ಕೂಡ ತಮ್ಮ ಮಾತುಕತೆಗಳಲ್ಲಿ ಬಳಸುತ್ತಾರೆ. ಏಕೆಂದರೆ, ಅವೆಲ್ಲಾ ಒಂಥರಾ ಬುದ್ದಿವಂತರ ಮಾತುಗಳು ಎನ್ನಬಹುದು. ಉಪೇಂದ್ರ ಸಂದರ್ಶನಗಳನ್ನು ನೋಡಿದರೆ ಕೂಡ ಅವರೊಬ್ಬರು ಮಹಾ ಬುದ್ಧಿವಂತರು ಎಂಬುದು ಅರ್ಥವಾಗುತ್ತದೆ. ಒಟ್ಟಿನಲ್ಲಿ 'ಬುದ್ಧಿವಂತ'ನ ಮುಂಬರುವ 'ಯು/ಐ' ಚಿತ್ರಕ್ಕಾಗಿ (U/I) ಎಲ್ಲರೂ ಕಾಯುತ್ತಿದ್ದಾರೆ.