ನವಗ್ರಹ ಚಿತ್ರದಲ್ಲಿ 'ಜಗ್ಗು' ಪಾತ್ರವೂ ಒಂದು. ಆ ಪಾತ್ರಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ. ಈ ಪಾತ್ರವನ್ನು ಸಹಜವಾಗಿ ಚಿತ್ರದ ನಿರ್ದೇಶಕರಾಗಿರುವ ದಿನಕರ್ ತಮ್ಮ ಅಣ್ಣ ದರ್ಶನ್ ಅವರಿಗೆ ಕೊಟ್ಟಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಅಸಲಿ ಕಥೆ..
ನಟ ದರ್ಶನ್ (Darshan) ನಟನೆ ಹಾಗು ದಿನಕರ್ ತೂಗುದೀಪ (Dinakar Thoogudeepa) ನಿರ್ದೇಶನದ 'ನವಗ್ರಹ' ಚಿತ್ರವು 2008ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ (Navagraha) ಜಗ್ಗು ಪಾತ್ರದಲ್ಲಿ ನಟಿಸಿದ್ದ ದರ್ಶನ್ ಅವರು ಇಂದು ಸೂಪರ್ ಸ್ಟಾರ್. ಆದರೆ ಬದುಕಿನ ದುರಂತ ಎಂಬಂತೆ, ಇಂದು ಸ್ಟಾರ್ ನಟ ದರ್ಶನ್ ಕೊಲೆ ಕೇಸ್ ಆರೋಪಿಯಾಗಿದ್ದಾರೆ. ಇತ್ತೀಚಗೆ ನವಗ್ರಹ ಚಿತ್ರವು ರೀ-ರಿಲೀಸ್ ಆಗಿದೆ. ಈ ಕಾರಣಕ್ಕೆ ಈ ಚಿತ್ರದ ಎಲ್ಲ ಮ್ಯಾಟರ್‌ಗಳು ಹೊರಬರುತ್ತಿವೆ ಅಷ್ಟೇ. ಅದರಲ್ಲೊಂದು ಆಸಕ್ತಿಕರ ಸಂಗತಿ ಇಲ್ಲಿದೆ ನೋಡಿ..
ನವಗ್ರಹ ಚಿತ್ರದಲ್ಲಿ 'ಜಗ್ಗು' ಪಾತ್ರವೂ ಒಂದು. ಆ ಪಾತ್ರಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ. ಈ ಪಾತ್ರವನ್ನು ಸಹಜವಾಗಿ ಚಿತ್ರದ ನಿರ್ದೇಶಕರಾಗಿರುವ ದಿನಕರ್ ತಮ್ಮ ಅಣ್ಣ ದರ್ಶನ್ ಅವರಿಗೆ ಕೊಟ್ಟಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಅಸಲಿ ಕತೆ ಬೇರೆಯೇ ಇದೆ. ಅದನ್ನು ದಿನಕರ್ ಅವರು ಈ ಮರುಬಿಡುಗಡೆ ವೇಳೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ, ಅದೇನು? ದಿನಕರ್ ಈ ಬಗ್ಗೆ ಏನು ಹೇಳಿದ್ದಾರೆ?
undefined
'ನವಗ್ರಹ'ದ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಕಣ್ಣು ಬಿಟ್ಟಿದ್ಯಾಕೆ, ಸೀಕ್ರೆಟ್ ಗೊತ್ತಾದ್ರೆ ಶಾಕ್ ಗ್ಯಾರಂಟಿ!
ನವಗ್ರಹ ಚಿತ್ರದ ಜಗ್ಗು ಪಾತ್ರಕ್ಕೆ ನಟ ದರ್ಶನ್ ನನ್ನ ಮೊದಲ ಆಯ್ಕೆಯಲ್ಲ. ಆ ಪಾತ್ರವನ್ನು ನಟ ವಿನೋದ್ ಪ್ರಭಾಕರ್ ಮಾಡಬೇಕೆಂದು ನಾನು ಬಯಸಿದ್ದೆ. ಆದರೆ, ನಾನು ವಿನೋದ್‌ಗೆ ಕಥೆಯನ್ನುಹೇಳಿದಾಗ ಅವರು ಅತಿಥಿ ಪಾತ್ರ ಅಥವಾ ಪೊಲೀಸ್ ಅಧಿಕಾರಿಗಿಂತ ನೆಗೆಟಿವ್ ಶೇಡ್ ಪಾತ್ರವನ್ನು ಮಾಡಲು ಬಯಸಿದ್ದರು. ಅವರ ಆ ಉತ್ಸಾಹ ಎಲ್ಲವನ್ನೂ ಬದಲಾಯಿಸಿತು. ಹೀಗಾಗಿ ದರ್ಶನ್ ಜಗ್ಗು ಆದರು ಹಾಗು ನಟ ವಿನೋದ್ ಪ್ರಭಾಕರ್ ಟೋನಿ ಆದರು' ಎಂದಿದ್ದಾರೆ 'ನವಗ್ರಹ' ನಿರ್ದೇಶಕರಾದ ದಿನಕರ್ ತೂಗುದೀಪ!
ನವಗ್ರಹ ಸಿನಿಮಾದ ಕ್ಲೈಮ್ಯಾಕ್ಸ್ ನೆನಪಿಸಿಕೊಳ್ಳಿ. ಅದ್ರಲ್ಲಿ ಜಗ್ಗು ಪಾತ್ರಧಾರಿ ನಟ ದರ್ಶನ್ (Darshna) ಅವರು ಕಣ್ಣು ಬಿಡ್ತಾರೆ. ಆ ಶಾಟ್ ತೆಗೆದಿದ್ದಕ್ಕೇ ಬೇರೆಯದೇ ಕಾರಣ ಇದ್ಯಾ? ಈ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆ ಏನೆಂದರೆ, 'ನವಗ್ರಹ' ಚಿತ್ರದ (Navagraha) ಕೊನೆಯಲ್ಲಿ, ಅಂದರೆ ಕ್ಲೈಮ್ಯಾಕ್ಸ್‌ನಲ್ಲಿ ಜಗ್ಗು ಅಂದರೆ ದರ್ಶನ್ ಕಣ್ಣು ಬಿಟ್ಟಿದ್ದಾರೆ. ಅಂದರೆ, ಮುಂದೇನೋ ಇದೆ. ಅದನ್ನು 'ಪಾರ್ಟ್-2' ದಲ್ಲಿ ಮಾಡುವ ಸಲುವಾಗಿಯೇ ಹಾಗೆ ಕ್ಲೈಮ್ಯಾಕ್ಸ್ ನೀಡಲಾಗಿದೆ ಎಂಬ ಸುದ್ದಿ ಹರಡುತ್ತಿದೆ.
ಪಾರ್ವತಮ್ಮನ ಆಶ್ರಯದಲ್ಲಿ ಕನ್ನಡ ಚಿತ್ರರಂಗ ಒಂದಾಗಿದ್ದ ಕಾಲ; ಇದು ಹೀಗ್ಯಾಕೆ ವೈರಲ್ ಆಗ್ತಿದೆ?!
ಆದರೆ, ಆ ಬಗ್ಗೆ ನವಗ್ರಹ ನಿರ್ದೇಶಕರಾಗಿರುವ ದಿನಕರ್ ತೂಗುದೀಪ (Dinakar Thoogudeepa) ಅವ್ರು ಹೇಳೋದೇ ಬೇರೆ. ನವಗ್ರಹ ಚಿತ್ರದ ಕಥೆಯ ಪ್ರಕಾರ, 'ಎಲ್ಲಿಯವರೆಗೆ ಪ್ರಪಂಚದಲ್ಲಿ ಒಳ್ಳೆಯದು ಇರುತ್ತೋ, ಅಲ್ಲಿಯವರೆಗೂ ಕೆಟ್ಟದ್ದು ಇದ್ದೇ ಇರುತ್ತೆ.. ನವಗ್ರಹದಲ್ಲಿ ಕೆಟ್ಟ ಕ್ಯಾರೆಕ್ಟರ್‌ಗಳು ಎಲ್ಲವೂ ಸತ್ತರೂ ಜಗ್ಗು ಎಂಬ ಒಂದು ಕೆಟ್ಟ ಹುಳ ಮಾತ್ರ ಇನ್ನೂ ಸತ್ತಿಲ್ಲ, ಜೀವಂತವಾಗಿದೆ ಎಂಬುದನ್ನು ನಿರೂಪಿಸಲು ದಿನಕರ್ ಅವರು ಚಿತ್ರದ ಕೊನೆಯಲ್ಲಿ ಜಗ್ಗು ಪಾತ್ರಧಾರಿಯು ಕಣ್ಣು ಬಿಡುವಂತೆ ಮಾಡಿದ್ದಾರಂತೆ.
ನವಗ್ರಹ ಸಿನಿಮಾ ಕಾನ್ಸೆಪ್ಟ್ ಮೂಲಕ ಕೆಟ್ಟದ್ದು ಹಾಗೂ ಒಳ್ಳೆಯದರ ಮಧ್ಯೆ ಜಗತ್ತಿನಲ್ಲಿ ಹೇಗೆಲ್ಲಾ ಯುದ್ಧಗಳು, ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಹೊತ್ತಿಗೆ ಒಳ್ಳೆಯ ಮನುಷ್ಯರ ಮೂಲಕ ಕೆಟ್ಟ ಮನುಷ್ಯರ ನಿರ್ನಾಮ ಆಗುತ್ತದೆ. ಆದರೆ, ಜಗ್ಗು ಎಂಬ ಒಂದು ಪಾತ್ರ ಸತ್ತವರ ನಡುವೆ ಕಣ್ಣು ಬಿಡುತ್ತದೆ. ಇದು, ಕೆಟ್ಟದ್ದೂ ಸತ್ತಿಲ್ಲ ಎಂಬುದನ್ನು ನೆನಪಿಸಲು ಅಷ್ಟೇ ನಾನು ಹಾಗೆ ಮಾಡಿದ್ದು ಎಂದು ನವಗ್ರಹ ನಿರ್ದೇಶಕ ದಿನಕರ್ ತೂಗುದೀಪ ಅವರು ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
ಮನೆಯಲ್ಲಿ ಎರಡು ನಾಯಿಗಳಿವೆ ಅಷ್ಟೇ; 'ತಬ್ಬಲಿ' ವಿನೋದ್ ರಾಜ್ ಕಣ್ಣೀರು ಹಾಕಿದ್ದೇಕೆ?