ಬಾಲನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ರಾಜಹ್‌ಕುಮಾರ್ ಅವರು 'ಅಪ್ಪು' ಚಿತ್ರದ ಮೂಲಕ ನಾಯಕರಾದವರು. 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪುನೀತ್ ಅವರು ತಮ್ಮ 47ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ...
ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರು ತಮ್ಮ ಮಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಬಗ್ಗೆ ಮಾತನಾಡಿದ್ದ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ಸಾಧಕರ ಸೀಟಿನಲ್ಲಿ ಕುಳಿತಿದ್ದ ಪಾರ್ವತಮ್ಮನವರು ತಮ್ಮ ಮುದ್ದಿನ ಮಗ ಅಪ್ಪು ಬಗ್ಗೆ ಹೇಳಿದ್ದ ಮಾತುಗಳು ಇಲ್ಲಿವೆ, ನೋಡಿ.. ಅಮ್ಮನ ಮಾತನ್ನು ಕೇಳಿ ಸ್ವತಃ ಅಲ್ಲಿದ್ದ ಪುನೀತ್ ರಾಜ್‌ಕುಮಾರ್ ನಕ್ಕಿದ್ದನ್ನೂ ನಾವು ಆ ವಿಡಿಯೋದಲ್ಲಿ ನೋಡಬಹುದು.
'ರಾತ್ರಿ ಒಂದು ಗಂಟೆಯಲ್ಲಿ ಹಾಲು ಕೇಳಿದ್ರೂ ಕೊಡ್ಬೇಕು.. ಅವ್ನಿಗೆ ಯಾವಾಗ್ಲೂ ಹಾಲು, ಹಾಲು.. ಹಾಲು.. ಅವ್ನಿಗೆ ಹಾಲು ಒಂದ್ ಇದ್ಬಿಟ್ರೆ ಊಟನೂ ಬೇಡ.. ಅದಕ್ಕೆ ಯಜಮಾನ್ರು (Dr Rajkumar) ಹೇಳ್ತಾ ಇದ್ರು, 'ಕುಡ್ಸು ಕುಡ್ಸು ಕುಡ್ಸು ನನ್ ಮಗ್ನಿಗೆ ಹಾಲು.. ಹಂಗಾದ್ರೂ ಬೆಳ್ಳಗಾಗ್ತಾನೇನೋ ಅಂತ..' ಅಂದಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಅದಕ್ಕೆ ಅಲ್ಲಿದ್ದ ಪುನೀತ್ ಸೇರಿದಂತೆ, ನಿರೂಪಕ ರಮೇಶ್ ಅರವಿಂದ್, ವೀಕ್ಷಕರು ಎಲ್ಲರೂ ಮನತುಂಬಾ ನಕ್ಕಿದ್ದಾರೆ.
ಸುದೀಪ್ ಸುಳ್ಳು ಹೇಳಿಲ್ಲ, ಆದ್ರೆ ಈಗಿನ ಸಮಯಕ್ಕೆ ಆ ವಿಡಿಯೋ ಸುಳ್ಳಾಗಿದೆ ಅಷ್ಟೇ!
ಅದಾದ ಬಳಿಕ, ರಮೇಶ್ ಅರವಿಂದ್ ಅವರು 'ಅನ್ನ ಹಳದಿ ಆಗೋತನಕ ಬಿಡ್ತಾ ಇರ್ಲಿಲ್ವಂತೆ, ಅಷ್ಟು ತುಪ್ಪ ಹಾಕ್ಕೊಂಡು ತಿಂತಾ ಇದ್ರಂತೆ ಅಲ್ವಾ ಸರ್..' ಅಂದಿದ್ದಕ್ಕೆ ಪುನೀತ್ ರಾಜ್‌ಕುಮಾರ್ ಅವರು 'ಹೌದು.. ಚಿಕ್ಕ ವಯಸ್ಸಲ್ಲಿ.. ಈಗ್ಯಾಕೋ ತುಪ್ಪನೇ ತಿನ್ನೋಕೆ ಆಗಲ್ಲ, ಆವಾಗ ತಿಂದು ತಿಂದು ಬೇಸರ ಆಗೋಗಿದೆ..' ಎಂದು ಹೇಳಿದ್ದಾರೆ. ಅದನ್ನು ಕೇಳಿ ರಮೇಶ್ ಅರವಿಂದ್ ಹಾಗೂ ಸ್ವತಃ ನಟ ಪುನೀತ್ ನಕ್ಕಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
undefined
ಎಲ್ಲರಿಗೂ ಗೊತ್ತಿರುವಂತೆ, ಬಾಲನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ರಾಜಹ್‌ಕುಮಾರ್ ಅವರು 'ಅಪ್ಪು' ಚಿತ್ರದ ಮೂಲಕ ನಾಯಕರಾದವರು. 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪುನೀತ್ ಅವರು ತಮ್ಮ 47ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೆ ಇಡೀ ಕರುನಾಡು ಇನ್ನೂ ಮರುಗುತ್ತಿದೆ. ಅಂದು ಮಾತನಾಡಿದ್ದ ಪಾರ್ವತಮ್ಮನವರು, ಪುನೀತ್ ರಾಜ್‌ಕುಮಾರ್ ಯಾರೂ ಇಂದು ನಮ್ಮೊಂದಿಗೆ ಇಲ್ಲ. ಹಾಲು ಕುಡಿದು ಬೆಳ್ಳಗಾಗಲಿ ಎಂದಿದ್ದ ಡಾ ರಾಜ್ ಅವರೂ ಕೂಡ ಇಲ್ಲ.
ಗಾಡ್ ಫಾದರ್ ಆ ಗುಟ್ಟನ್ನೂ ಅನುಶ್ರೀಗೆ ಹೇಳಿದ ಬುದ್ದಿವಂತ ಉಪೇಂದ್ರ!
ಆದರೆ, ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗು ಪುನೀತ್ ಅವರೆಲ್ಲರ ಸಾಧನೆ ಹಾಗು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಅಭಿಮಾನಿಗಳೇ ದೇವರು ಎಂಬ ಭಾವನೆಯಲ್ಲಿ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಕಳೆದಿರುವ ಡಾ ರಾಜ್‌ಕುಮಾರ್ ಹಾಗೂ ದೊಡ್ಮನೆ ಕುಟುಂಬದ ಮಹತ್ವ ಇಡೀ ಕರುನಾಡಿಗೇ ಗೊತ್ತಿದೆ. ದೈಹಿಕವಾಗಿ ಈ ಮೂವರೂ ಇಂದು ನಮ್ಮೊಂದಿಗೆ ಇಲ್ಲ ಎಂಬುದು ನಿಜವಾದರೂ ನಮ್ಮೆಲ್ಲರ ಮನಸ್ಸಿನಿಂದ ಅವರನ್ನು ಎಂದಿಗೂ ಮರೆಯಾಗಿಸಲು ಸಾಧ್ಯವಿಲ್ಲ ಎನ್ನಬಹುದು.