
ಕೊಡಗಿ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಶ್ಮಿಕಾರನ್ನು ಟ್ರೋಲ್ ಮಾಡಬಾರದು, ಕನ್ನಡ ಕಾರ್ಯಕ್ರಮಕ್ಕೆ ಬರುವುದಿಲ್ಲ, ಕನ್ನಡ ಸಿನಿಮಾ ಮಾಡುವುದಿಲ್ಲ ಅನ್ನೋ ದೊಡ್ಡ ಚರ್ಚೆ ಇಲ್ಲಿ ನಡೆಯಲುತ್ತಿದೆ. ಆದರೆ ರಾಶ್ ಮಾತ್ರ ಕೂಲ್ ಆಗಿ ಸಮ್ಮರ್ ಎಂಜಾಯ್ ಮಾಡ್ಕೊಂಡು ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈಗ ಬಿ-ಟೌನ್‌ನಲ್ಲೂ ಸುದ್ದಿ ಮಾಡುತ್ತಿರುವುದು ಆಕೆ ಡಿಮ್ಯಾಂಟ್ ಇಟ್ಟಿರುವ ಸಂಭಾವನೆಯ ವಿಚಾರ.
ಹೌದು! ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿರುವ ಸಿಕಂದರ್ ಸಿನಿಮಾ ದೊಡ್ಡ ಚರ್ಚೆ ಸೃಷ್ಟಿ ಮಾಡುತ್ತಿದೆ. ಈ ಹಿಂದೆ ರಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾ ಹಾಗೂ ವಿಕ್ಕಿ ಕೌಶಾಲ್ ಜೊತೆ ಛಾವಾ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಈಗ ಸಲ್ಮಾನ್ ಖಾನ್ ಜೊತೆಗೂ ಮಿಂಚುತ್ತಿರುವುದು ಮೊದಲ ಶಾಕಿಂಗ್ ವಿಚಾರ, ಎರಡನೇ ಶಾಕ್ ಏನೆಂದರೆ ಈ ಚಿತ್ರಕ್ಕೆ 5 ಕೋಟಿ ರೂಪಾಯಿ ಸಂಭಾವನೆ ಆಗಿ ಪಡೆಯುತ್ತಿರುವುದು.
ತಮಿಳು ಚಿತ್ರಕ್ಕೆ ಸೈನ್ ಮಾಡಿದ ಮೇಘಾ ಶೆಟ್ಟಿ; ಒಬ್ಬೊಬ್ಬರೇ ಹೋಗಿ ಎಂದ ನೆಟ್ಟಿಗರು
ಸಲ್ಮಾನ್ ಖಾನ್ ಸಿನಿಮಾಗಳು ಯಾವತ್ತಿದ್ದರೂ ಬಿಗ್ ಬಜೆಟ್‌ನಲ್ಲಿ ನಡೆಯುತ್ತದೆ. ಹಾಗೆಯೇ ಸಿಕಂದರ್ ಕೂಡ. 180ರಿಂದ 200 ಕೋಟಿ ರೂಪಾಯಿವರೆಗೂ ಈ ಚಿತ್ರದ ಬಜೆಟ್ ಇದೆ. ಅದರಲ್ಲಿ ಸಲ್ಮಾನ್ ಖಾನ್ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ರಶ್ಮಿಕಾ ಮಂದಣ್ಣ 5 ಕೋಟಿ ರೂ., ಕಾಜಲ್ ಅಗರ್ವಾಲ್ 3 ಕೋಟಿ ರೂ., ಶರ್ಮನ್ ಜೋಶಿ 75 ಲಕ್ಷ ರೂ., ಪ್ರತೀಕ್ ಬಬ್ಬರ್ 60 ಲಕ್ಷ ರೂ. ಹಾಗೂ ಸತ್ಯರಾಜ್ 50 ಲಕ್ಷ ರೂ. ಪಡೆಯುತ್ತಿದ್ದಾರೆ. ಇನ್ನು ಉಳಿದ ಅರ್ಟಿಸ್ಟ್‌ಗಳದು ನಾರ್ಮಲ್ ಸಂಭಾವನೆ. ಕನ್ನಡದಲ್ಲಿ ಸದ್ಯಕ್ಕೆ 1 ಕೋಟಿ ಸಂಭಾವನೆ ಪಡೆಯುವುದೇ ದೊಡ್ಡ ವಿಚಾರ.ಅಷ್ಟು ಗಳಿಸುತ್ತಿರುವುದು ರಚಿತಾ ರಾಮ್ ಮಾತ್ರವೇ. ಆದರೆ ರಶ್ಮಿಕಾ ಮಂದಣ್ಣ ಒಂದು ಭಾಷೆಯಿಂದ ಮತ್ತೊಬ್ಬೆ ಭಾಷೆಗೆ ಹಾರಿ 5 ಕೋಟಿವರೆಗೂ ದುಡಿಯುತ್ತಿದ್ದಾರೆ ಅಂದ್ರೆ ಮೆಚ್ಚಲೇ ಬೇಕು.
ಕ್ಲೀನರ್ ಅಗಿದ್ದ ವ್ಯಕ್ತಿ ಈಗ ಇಂಡಸ್ಟ್ರಿಯಲ್ಲಿ ಖಡಕ್ ವಿಲನ್; 'ಮೂಕುತಿ ಅಮ್ಮನ್- 2' ಚಿತ್ರದಲ್ಲಿ ದುನಿಯಾ ವಿಜಯ್
ಸಿಕಂದರ್ ಸಿನಿಮಾವನ್ನು ತಮಿಳು ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿರುವುದು. ತಮಿಳಿನ ಸರ್ಕಾರ್ ಸಿನಿಮಾವನ್ನು ರಿಮೇಕ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೆ. 'ಇದೊಂದು ಸಂಪೂರ್ಣ ಓರಿಜಿನಲ್ ಕಥೆ ಇರುವ ಸಿನಿಮಾ. ಪ್ರೇಕ್ಷಕರಿಗೆ ಹೊಸ ಅನುಭವ ಸಿಗಲಿ ಎಂಬ ಕಾರಣಕ್ಕೆ ಪ್ರತಿ ಸೀನ್ ಪ್ರತಿ ಫ್ರೇಮ್ ಕೂಡ ನೈಜತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಹೊಸ ನಿರೂಪಣೆ ಇರಲಿದೆ' ಎಂದು ರಿಮೇಕ್ ಗಾಸಿಪ್‌ಗೆ ನಿರ್ದೇಶಕರು ಬ್ರೇಕ್ ಹಾಕಿಬಿಟ್ಟರು.
ಸೀರಿಯಲ್ ಮಾಡೋಕೆ ಅಮ್ಮ ಒಪ್ಪಿಗೆ ಕೊಡ್ಲಿ ಅಂತ ಇ-ಮೇಲ್ ಬರೆದ 'ಲಕ್ಷ್ಮಿನಿವಾಸ' ಚಂದನಾ; ಅಮ್ಮನಿಂದ ಬಿತ್ತು ಒದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.