
ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪರಭಾಷೆ ಚಿತ್ರಗಳಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ವಿಜಯ್‌ಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಆಫರ್‌ಗಳು ಬರುತ್ತಿದೆ. ನಯನತಾರಾ 'ಮೂಕುತಿ ಅಮ್ಮನ್ 2' ಚಿತ್ರದಲ್ಲಿ ವಿಜಯ್ ಖಡಕ್ ವಿಲನ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಸುಂದರ್ ಸಿ ನಿರ್ದೇಶನ ಮಾಡುತ್ತಿದ್ದಾರೆ. ಯಾಕೆ ತಮಿಳು ಸಿನಿಮಾ ಒಪ್ಪಿಕೊಂಡರು? ಪರಭಾಷೆ ಇಂಡಸ್ಟ್ರಿಯಲ್ಲಿ ಈ ಹಿಂದೆ ಎಷ್ಟು ಕಷ್ಟ ಪಟ್ಟಿದ್ದರು? ಮಕ್ಕಳ ಸಿನಿಮಾ ಎಲ್ಲಿಗೆ ಬಂತು ನಿಂತಿದೆ ಎಂದು ಹಂಚಿಕೊಂಡಿದ್ದಾರೆ.
'ಸುಂದರ್ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ. ನಾನು ರಜನಿಕಾಂತ್ ಅವರ ಅಭಿಮಾನಿ. ರಜನಿಕಾಂತ್ ಅವರಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ನನಗೂ ನಿರ್ದೇಶನ ಮಾಡುತ್ತಿರುವುದು ನಿಜಕ್ಕೂ ಹೆಮ್ಮಯ ವಿಷಯ. ಆ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದು ನಿಜವಾದ ಅಭಿಮಾನ ಅನಿಸುತ್ತದೆ. ಅಲ್ಲಿ ನಾನು ಕ್ಲೀನರ್ ಅಗಿ ಕೆಲಸ ಮಾಡುತ್ತಾ ಅವಕಾಶಕ್ಕಾಗಿ ಓಡಾಡುತ್ತಿದ್ದ ಸಂದರ್ಭಗಳಲ್ಲಿ ಇನ್ನೂ ನೆನಪಿವೆ. ಈಗ ಕಾಲಿವುಡ್ ನಿರ್ದೇಶಕರು ವೇದಿಕೆ ಮೇಲೆ ನನ್ನನ್ನು ನಟ, ಆಕ್ಷನ್ ಹೀರೋ , ನಿರ್ದೇಶಕ ಎಂದು ಕರೆದಾಗ ಭಾವುಕನಾಗುತ್ತೇನೆ. ರಜನಿಕಾಂತ್ ಅವರನ್ನು ಭೇಟಿಯಾಗಲು ಸುಮಾರು 15 ದಿನ ಕಾದಿದ್ದೆ. ಅವರಿಂದಲೂ ಮೆಚ್ಚುಗೆ ಮಾತು ಕೇಳಿದಾಗ ಬಹಳ ಸಂತೋಷವಾಯಿತ್ತು' ಎಂದು ಕನ್ನಡ ವೆಬ್ ಪೋರ್ಟಲ್‌ವೊಂದರಲ್ಲಿ ವಿಜಯ್ ಮಾತನಾಡಿದ್ದಾರೆ.
ಸೀರಿಯಲ್ ಮಾಡೋಕೆ ಅಮ್ಮ ಒಪ್ಪಿಗೆ ಕೊಡ್ಲಿ ಅಂತ ಇ-ಮೇಲ್ ಬರೆದ 'ಲಕ್ಷ್ಮಿನಿವಾಸ' ಚಂದನಾ; ಅಮ್ಮನಿಂದ ಬಿತ್ತು ಒದೆ!
ದುನಿಯಾ ವಿಜಯ್ ಜೇಷ್ಠ ಪುತ್ರಿ ತ್ರಿತನ್ಯಾ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ವಿಜಯ್ ಆನ್‌ಸ್ಕ್ರೀನ್ ತಂದೆ ಪಾತ್ರ ಮಾಡುತ್ತಿದ್ದಾರೆ. ಇದು ಯಾವುದೇ ಹೋರಾಟ ಅಥವಾ ಭೂಮಿಗೆ ಸಂಬಂಧಿಸಿದ ಕಥೆ ಅಲ್ಲ ಭೂಮಿ ಒಡೆಯನಾಗಬೇಕು ಎಂದು ಹೊರಾಟ ಮಾಡುವವನ ಕಥೆ. ಚಿತ್ರದ 70% ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಕಿರಿಯ ಪುತ್ರಿ ಮೋನಿಷಾ ನಟನೆಯ ಸಿಟಿ ಲೈಟ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಮಗಳಿಗೆ ಇಲ್ಲಿ ವಿನಯ್ ರಾಜ್‌ಕುಮಾರ್‌ನ ಜೋಡಿಯಾಗಿ ಕರೆತಂದಿದ್ದಾರೆ. 'ಈ ಚಿತ್ರ ಮಾಡುತ್ತಲೇ ತಮಿಳು ಚಿತ್ರದಲ್ಲಿ ನಟಿಸಲಿದ್ದೇನೆ. ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದಕ್ಕೂ ಕನ್ನಡಿಗರ ಅಶೀರ್ವಾದ ಬೇಕು. ಕನ್ನಡಿಗರ ಹಾರೈಕೆ ಇಂದಲೇ ಈ ಹಂತಕ್ಕೆ ತಲುಪಿದ್ದೇನೆ' ಎಂದು ವಿಜಯ್ ಹೇಳಿದ್ದಾರೆ.
ಲಕ್ಷಲಕ್ಷ ಖರ್ಚು ಮಾಡಿ ಪ್ರಾಣಿಗಳನ್ನು ನೋಡಲು ಕಾಡಿಗೆ ಹೋಗುತ್ತೀನಿ, ಯಾವುದೂ ಫ್ರೀ ಅಲ್ಲ: ಅನುಪಮಾ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.