BhamaKalapam; ಪ್ರಿಯಾಮಣಿ ತೆಲುಗು ಸಿನಿಮಾಗೆ ರಶ್ಮಿಕಾ ಮಂದಣ್ಣ ವಿಶ್!

Suvarna News   | Asianet News
Published : Jan 24, 2022, 12:51 PM ISTUpdated : Jan 24, 2022, 12:52 PM IST
BhamaKalapam; ಪ್ರಿಯಾಮಣಿ ತೆಲುಗು ಸಿನಿಮಾಗೆ ರಶ್ಮಿಕಾ ಮಂದಣ್ಣ ವಿಶ್!

ಸಾರಾಂಶ

ತೆಲುಗು ವೆಬ್ ಸೀರಿಸ್‌ ಟೀಸರ್‌ ರಿಲೀಸ್‌. ಲಿಂಕ್ ಶೇರ್‌ ಮಾಡಿಕೊಂಡು ಶುಭಾ ಹಾರೈಸಿದ ರಶ್ಮಿಕಾ ಮಂದಣ್ಣ   

ದಿ ಫ್ಯಾಮಿಲಿ ಮ್ಯಾನ್ (The Family Man) ವೆಬ್‌ ಸೀರಿಸ್‌ ಮೂಲಕ ಓಟಿಟಿ ಕ್ಷೇತ್ರದಲ್ಲಿ ಸಖತ್ ಹೆಸರು ಮಾಡಿದ ನಟಿ ಪ್ರಿಯಾಮಣಿ (Priyamani), ಇದೇ ಮೊದಲ ಬಾರಿ ತೆಲುಗು ಓಟಿಟಿ (Aha Telugu OTT)ಗೂ ಕಾಲಿಡಲಿದ್ದಾರೆ.  ಅದುವೇ ಭಾಮ ಕಲಾಪಂ (Bhama Kalapam) ಸಿನಿಮಾ ಮೂಲಕ. ಪಕ್ಕಾ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಮಣಿ ಲುಕ್‌ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ.....

ಹೌದು! ಪ್ರಿಯಾಮಣಿ ತೆಲುಗು ವೆಬ್‌ಸರಣಿಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸಾಥ್ ಕೊಟ್ಟಿದ್ದಾರೆ. 'ಕಾಮ್ರೇಡ್‌..ಇದು ನಿಮಗಾಗಿ. ಈ ಟೀಸರ್ ಲಾಂಚ್ ಮಾಡುವುದಕ್ಕೆ ತುಂಬಾನೇ ಸಂತೋಷವಾಗುತ್ತಿದೆ. ಆಹಾದಲ್ಲಿ ಭಾಮ ಕಲಾಪಂ ನೋಡಿ. ಶುಭವಾಗಲಿ ಭರತ್ ಕಮ್ಮ, ಪ್ರಿಯಾಮಣಿ, ಅಭಿಮಾನ್ಯ ಮತ್ತು ತಂಡ. ನನ್ನ ಪ್ರೀತಿ ಮತ್ತು ಹಾರೈಕೆ ನಿಮ್ಮಲ್ಲರಿಗೂ,' ಎಂದು ರಶ್ಮಿಕಾ ಟ್ಟೀಟ್ ಮಾಡಿದ್ದಾರೆ.

ಪ್ರಿಯಾಮಣಿ ಪಾತ್ರ:
ಭಾಮ ಕಲಾಪಂನಲ್ಲಿ ಪ್ರಿಯಾಮಣಿ ಅನುಪಮಾ (Anupama) ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈಕೆ ಪಕ್ಕಾ ಗೃಹಿಣಿ ಆಗಿದ್ದು ಅಕ್ಕ-ಪಕ್ಕದವರು ಮನೆಗೆ ನಾನ್‌ ಸ್ಟಾಪ್ ಗಾಸಿಪ್ ಮಾಡಿ, ಅವರು ಮನೆ ವಿಚಾರಕ್ಕೆ ಮೂಗು ತೂರಿಸುತ್ತಾಳೆ. ಹೀಗಾಗಿ ಇಡೀ ಅಪಾರ್ಟ್‌ಮೆಂಟ್‌ (Apartment) ಮಂದಿಗೆ ಈಕೆ ಕಂಡರೆ ಕೋಪ. ಸಾಮಾನ್ಯ ಜೀವನ ನಡೆಸುವ ಅನುಪಮಾಗೆ ಜೀವನದಲ್ಲಿ extraordinary ಸಮಯ ಎದುರಾಗುತ್ತದೆ ಅದೇ ಒಂದು ಮರ್ಡರ್‌ (Murder). ಈ ಮರ್ಡರ್‌ನಲ್ಲಿ ಅನುಪಮಾ ಪಾತ್ರವೇನು? ಹೇಗೆ ಪತ್ತೆ ಮಾಡಲು ಸಹಾಯ ಮಾಡುತ್ತಾರೆ ಎನ್ನುವುದು ಕಥೆ. ಈ ಚಿತ್ರದಲ್ಲಿ ಕಾಲಿವುಡ್ ನಟ ಜಾನ್ ವಿಜಯ್ (John Vijay) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 11ರಂದು ಬಿಡುಗಡೆ ಆಗುತ್ತಿರುವ ಈ ಸೀರಿಸ್‌ನ ಅಭಿಮಾನ್ಯ ನಿರ್ದೇಶನ ಮಾಡಿದ್ದಾರೆ. ಡಿಯರ್ ಕಾಮ್ರೇಡ್‌ (Dear Comrade) ಚಿತ್ರದ ಫಿಲ್ಮ ಮೇಕರ್‌ ಭರತ್‌ ಇದಕ್ಕೆ ಶೋರನ್ನರ್. ಜಸ್ಟೀನ್ ಪ್ರಭಾಕರನನ್ ಸಂಗೀತ ಇರುವ ಈ ಚಿತ್ರಕ್ಕೆ ಸುಧೀರ್‌ ಮತ್ತು ಎಸ್‌ವಿಸಿಸಿ ಡಿಜಿಟಲ್ ಬ್ಯಾನರ್ ಬಂಡವಾಳ ಹಾಕಿದ್ದಾರೆ. 

Priyamani: ನೀವು ತುಂಬಾ ಸ್ಲಿಮ್ ಹಾಗೂ ಹಾಟ್ ಎಂದ ಅಲ್ಲು ಅರ್ಜುನ್

ಟೀಸರ್ ಅದ್ಭುತವಾಗಿ, ವೀಕ್ಷಕರಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸುತ್ತದೆ. ಅದರಲ್ಲೂ ಪ್ರಿಯಾಮಣಿ ಸಿಂಪಲ್ ಮೇಕಪ್‌ ಮತ್ತು ಲುಕ್‌ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದೆ. 

ನೆಟ್ಟಿಗರ ಅಭಿಪ್ರಾಯ:
ಮೇಕಪ್ ಇಲ್ಲದೆ ಪ್ರಿಯಾಮಣಿ ನೋಡಿದರೆ ಪಕ್ಕಾ ಗೃಹಿಣಿ (Homemaker) ರೀತಿ ಕಾಣಿಸುತ್ತಾ. ಮೇಕಪ್ ಅಗತ್ಯವಿರಲಿಲ್ಲ, ಎಂದು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ರಶ್ಮಿಕಾ ಕಾಲೆಳೆದಿದ್ದಾರೆ. ಇಲ್ಲಿ ಎರಡು ಅಭಿಪ್ರಾಯ ಹೊರ ಬಂದಿದೆ. 

ತೆಲುಗು ಸಿನಿಮಾದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ಇದೇ ಮೊದಲು ಪ್ರಿಯಾಮಣಿ ನಟಿಸಿರುವುದು. ಇಡೀ ಕಥೆ ಅನುಪಮಾ ಸುತ್ತ ಇರುವ ಕಾರಣ ರಶ್ಮಿಕಾ ಮಂದಣ್ಣ ಈ ಟೀಸರ್ ರಿಲೀಸ್ ಮಾಡಿದ್ದಾರೆ, ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಪ್ರಿಯಾಮಣಿ ಕನ್ನಡ ಚಿತ್ರರಂಗದಲ್ಲಿ ಅದ್ಭುತವಾಗಿ ಮಿಂಚಿದ ನಂತರ ಬೇರೆ ಭಾಷೆಗಳಲ್ಲಿ ಫುಲ್ ಮಿಂಚಿಂಗ್ ಆಗುತ್ತಿರುವುದು. ಹೀಗಾಗಿ ಇಬ್ಬರೂ ಒಂದೇ ಹಾದಿಯಲ್ಲಿದ್ದಾರೆ ಅದಿಕ್ಕಾ ಸಾಥ್ ಕೊಟ್ಟಿದ್ದಾರೆ ಎನ್ನನ್ನುತ್ತಿದ್ದಾರೆ. ಸತ್ಯ ಹೇಳಬೇಕೆಂದರೆ ಬೇರೆ ಅವರ ಚಿತ್ರಕ್ಕೆ ರಶ್ಮಿಕಾ ಸಾಥ್ ಕೊಡುವುದು ತುಂಬಾನೇ ಕಮ್ಮಿ. 

ಮತ್ತೊಂದು ರೀತಿಯ ಚರ್ಚೆ ಏನೆಂದರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ (Vijay Deverakonda) ನಟಿಸಿರುವ ಕಾಮ್ರೇಡ್‌ ಸಿನಿಮಾದಲ್ಲಿ ಭರತ್ ನಟಿಸಿದ್ದಾರೆ. ಟೀಟರ್‌ ರಿಲೀಸ್ ಮಾಡುವಾಗಲೂ ಇದು ನಿಮಗಾಗಿ ಕಾಮ್ರೇಡ್‌ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಶ್ಮಿಕಾ ಮತ್ತೊಬ್ಬ ನಟಿಗೆ ಸಾಥ್ ಕೊಟ್ಟಿಲ್ಲ ಎಂಬ ಕಮೆಂಟ್ ಸಹ ಬರುತ್ತಿವೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!