ಬೇಬಿ ಬಗ್ಗೆ ಪೋಸ್ಟ್‌ ಹಾಕಿ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ; ಫ್ಯಾನ್ಸ್‌ ಖುಷಿಗೆ ಲಿಮಿಟ್ಟೇ ಇಲ್ಲ!

By Shriram Bhat  |  First Published Dec 9, 2024, 3:12 PM IST

ಪುಷ್ಪ2 ಸಿನಿಮಾ ಮುನ್ನುಗ್ಗಿ ಸಾಗ್ತಿದೆ. ಪುಷ್ಪ ಪ್ಲವರ್ ಅಲ್ಲ ವೈಲ್ಡ್ ಫೈಯರ್ ಅನ್ನೋದು ಮತ್ತೆ  ಪ್ರೂವ್ ಆಗಿದೆ. ಪುಷ್ಪ ಕಲೆಕ್ಷನ್ ವೇಗದೆದುರು ಇಂಡಿಯನ್ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳೆಲ್ಲಾ ಪೀಸ್ ಪೀಸ್ ಆಗಿವೆ. ಬಾಕ್ಸ್ ಆಫೀಸ್ ನಲ್ಲಿ ಪುಷ್ಪರಾಜ್-ಶ್ರೀವಲ್ಲಿ ಅಕ್ಷರಶಃ ಹಣದ ಹೊಳೆಯನ್ನೇ ಹರಿಸಿದ್ದಾರೆ...


ಕನ್ನಡತಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಜಗತ್ತಿನಲ್ಲೇ ಟ್ರೆಂಡಿಂಗ್‌ನಲ್ಲಿ ಇರೋ ನಟಿಯಾಗಿದ್ದಾರೆ. ಅಲ್ಲು ಅರ್ಜುನ್ ಜೋಡಿಯಾಗಿ 'ಪುಷ್ಪಾ 2' ಚಿತ್ರದಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಟಾಕ್ ಆಫ್ ದ ಯುನಿವರ್ಸ್ ಆಗಿದ್ದಾರೆ. ಇದೀಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸದೊಂದು ಸಂಗತಿಯನ್ನು ತಮ್ಮ ಅಭಿಮಾನಿಗಳಿಗಾಗಿ ಹರಿಯಬಿಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ಅವರು ಕೊಟ್ಟ ಸ್ವೀಟ್ ನ್ಯೂಸ್ ಬಗ್ಗೆ ಅವರ ಫ್ಯಾನ್ಸ್‌ಗೆ ಸಖತ್ ಖುಷಿಯಾಗಿದ್ದು, ಅವರೆಲ್ಲರೂ ಆಕಾಶದಲ್ಲಿ ತೇಲಾಡುತ್ತಿದ್ದಾರೆ. 

ಹಾಗಿದ್ರೆ ರಶ್ಮಿಕಾ ಮಂದಣ್ಣ ಕೊಟ್ಟ ನ್ಯೂಸ್ ಏನು? ಇಲ್ಲಿದೆ ನೋಡಿ ಆ ಬಗ್ಗೆ ಸ್ಟೋರಿ. ಹೌದು, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.. 'ಫೈನಲೀ ಬೇಬಿ ಪ್ರಾಜೆಕ್ಟ್ ಸೆಟ್ಟೇರಲಿದೆ ಗಾಯ್ಸ್.. ನಂಗೊತ್ತು, ನಾವು ತುಂಬಾ ಸಮಯ ನಿಮ್ಮನ್ನು ಕಾಯಿಸಿದ್ದೇವೆ ಎಂದು.. ಆದರೆ, ಸದ್ಯವೇ ಅದು ಬರಲಿದೆ..' ಎಂದು ಪೋಸ್ಟ್ ಮಾಡಿ ತಮ್ಮ ಫ್ಯಾನ್ಸ್‌ ಮನಸ್ಸಿನ ಬೇಗೆಯನ್ನು ತಣ್ಣಗಾಗಿಸುವ ಕೆಲಸ ಮಾಡಿದ್ದಾರೆ. 

Tap to resize

Latest Videos

ಶಿವಣ್ಣರಿಗೆ ಕ್ಯಾನ್ಸರ್ ಹೌದೋ, ಅಲ್ಲವೋ ಚರ್ಚೆ ಅನಗತ್ಯ; ಆದಷ್ಟು ಬೇಗ ಗುಣಮುಖರಾಗಲಿ

ಸದ್ಯ ರಶ್ಮಿಕಾ ಅಭಿನಯದ 'ಪುಷ್ಪ-2' ಚಿತ್ರದ ಹವಾ ಭಾರೀ ಜೋರಾಗಿದೆ. ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರೀಯನ್ನೇ  ಸದ್ಯ ಪುಷ್ಪ 2 ರೂಲ್ ಮಾಡ್ತಿದೆ. ಹಳೆ ದಾಖಲೆಗಳು ಬ್ರೇಕ್ ಆಗ್ತಿವೆ. ಹೊಸ ರೆಕಾರ್ಡ್ಗಳು ಕ್ರಿಯೇಟ್ ಆಗ್ತಿವೆ. ಐಕಾನ್ ಸ್ಟಾರ್ ಇಷ್ಟು ದೊಡ್ಡ ಗೆಲುವನ್ನ ಕಾಣೋದಕ್ಕೆ ಮೆಗಾ ಫ್ಯಾಮಿಲಿಯ ಪವರ್ ಕೊಡುಗೆ ಇದೆ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಅದಕ್ಕೆ ಸಾಕ್ಷಿಯನ್ನುವಂತೆ ಇತ್ತು ಪುಷ್ಪ ಸಕ್ಸಸ್ ಇವೆಂಟ್ನಲ್ಲಿ ಅಲ್ಲು ಅರ್ಜುನ್ ಹೇಳಿದ ಆ ಥ್ಯಾಂಕ್ಸ್.

ಹೌದು, ಪುಷ್ಪ2 ಸಿನಿಮಾ ಮುನ್ನುಗ್ಗಿ ಸಾಗ್ತಿದೆ. ಪುಷ್ಪ ಪ್ಲವರ್ ಅಲ್ಲ ವೈಲ್ಡ್ ಫೈಯರ್ ಅನ್ನೋದು ಮತ್ತೆ  ಪ್ರೂವ್ ಆಗಿದೆ. ಪುಷ್ಪ ಕಲೆಕ್ಷನ್ ವೇಗದೆದುರು ಇಂಡಿಯನ್ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳೆಲ್ಲಾ ಪೀಸ್ ಪೀಸ್ ಆಗಿವೆ. ಬಾಕ್ಸ್ ಆಫೀಸ್ ನಲ್ಲಿ ಪುಷ್ಪರಾಜ್-ಶ್ರೀವಲ್ಲಿ ಅಕ್ಷರಶಃ ಹಣದ ಹೊಳೆಯನ್ನೇ ಹರಿಸಿದ್ದಾರೆ.

4 ದಿನದ ಅಂತ್ಯಕ್ಕೆ ಪುಷ್ಪ-2 ಚಿತ್ರವು ಬರೋಬ್ಬರಿ 700 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದ್ದು, ಇದು ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲೇ ಅತಿದೊಡ್ಡ ದಾಖಲೆ. ಎಲ್ಲಾ ಸ್ಟಾರ್ಗಳನ್ನೂ ಮೀರಿಸಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಂ.1 ಪಟ್ಟಕ್ಕೇರಿದ್ದಾರೆ. ಜೊತೆಗೆ, ಈಗಾಗಲೇ ನಂಬರ್ ಒನ್ ಪಟ್ಟದಲ್ಲಿ ಮೆರೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಇನ್ನೂ ಎತ್ತರಕ್ಕೆ ಹೋಗಿ, 'ಯಾರಾದ್ರೂ ನನ್ ಟಚ್ ಮಾಡಿ ನೋಡೋಣ' ಎನ್ನುತ್ತಿದ್ದಾರೆ ಎನ್ನಬಹುದು!

ಯುಐ ಚಿತ್ರದ ಗುಟ್ಟು ರಟ್ಟಾಗೋಯ್ತಾ? ಬಿಡುಗಡೆಗೂ ಮೊದಲೇ ಯಾಕೆ ಹೀಗಾಯ್ತು!

ಪುಷ್ಪ-2 ಸಿನಿಮಾದ ಈ ಅಮೋಘ ಗೆಲುವಿನ ಹಿಂದೆ ಅನೇಕ ಕಾರಣ ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸಿಕ್ಕ ಅವಕಾಶ ಕೂಡ ಪುಷ್ಪನ ಗಳಿಕೆ ಹೆಚ್ಚಲಿಕ್ಕೆ ಒಂದು ರೀಸನ್ ಅಂದ್ರೆ ತಪ್ಪಾಗಲ್ಲ. ಆದ್ರೆ ಆಂಧ್ರ, ಮತ್ತು ತೆಲಂಗಾಣದಲ್ಲಿ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸರ್ಕಾರವೇ ಅನುಮತಿ ಕೊಡಬೇಕು. ಈ ನಿಟ್ಟಿನಲ್ಲಿ ಅಂಥಾ ಅನುಮತಿ ಕೊಟ್ಟು ಸಹಕರಿಸಿದ ಸರ್ಕಾರಕ್ಕೆ ಅಲ್ಲು ಅರ್ಜುನ್ ಸಕ್ಸಸ್ ಮೀಟ್‌ನಲ್ಲಿ ಧನ್ಯವಾದ ಹೇಳಿದ್ದಾರೆ.

ಪುಷ್ಪ-2 ಸಿನಿಮಾ ನೋಡಿದವರೆಲ್ಲಾ ರಶ್ಮಿಕಾ ಪರ್ಫಾರ್ಮೆನ್ಸ್​ನ ಕೊಂಡಾಡ್ತಾ ಇದ್ದಾರೆ. ಗ್ಲಾಮರ್ ಗಮ್ಮತ್ತಿನ ಜೊತೆಗೆ ಅಭಿನಯದಲ್ಲೂ ಮೋಡಿ ಮಾಡಿರೋ ಶ್ರೀವಲ್ಲಿಗೆ ಶಹಬ್ಬಾಷ್ ಅಂತಿದ್ದಾರೆ. ಈ ನಡುವೆ ರಶ್ಮಿಕಾ ದೇವರಕೊಂಡ ಫ್ಯಾಮಿಲಿಯನ್ನ ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದಾರೆ. ಪುಷ್ಪನ ಜೊತೆ ರಶ್ಮಿಕಾ ಹಸಿ ಬಿಸಿ ಸೀನ್ಸ್ ನೋಡಿ ದೇವರಕೊಂಡ ಫ್ಯಾಮಿಲಿ ಏನಂದ್ರು..? ಆ ಕುರಿತ ಮಸ್ತ್ ಮಸಾಲ ಸ್ಟೋರಿ ಇಲ್ಲಿದೆ ನೋಡಿ.

ಹೌದು, ಈಗ ಎಲ್ಲಿ ನೋಡಿದ್ರೂ ಪುಷ್ಪನದ್ದೇ ಜಪ. ಗುರುವಾರ ತೆರೆಗೆ ಬಂದ ಪುಷ್ಪ-2 ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಅಕ್ಷರಶಃ ವೈಲ್ಡ್ ಫೈರ್​ನಂತೆ ಧಗಧಗಿಸಿದೆ. ಎರಡೇ ದಿನಕ್ಕೆ 400 ಕೋಟಿ ಕ್ಕಬ್ ಸೇರಿ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ಇದೀಗ ನಾಲ್ಕನೇ ದಿನಕ್ಕೆ ಬರೋಬ್ಬರಿ 700 ಕೋಟಿಗೂ ಮೀರಿ ಗಳಿಕೆ ದಾಖಲಿಸಿ ಎಲ್ಲರ ನಿರೀಕ್ಷೆ ಮೀರಿ ಮುನ್ನುಗ್ಗುತ್ತಿದೆ. 

ಬರಬೇಡಿ ಅಂತ ಯಾರಿಗೆ ಯಾರೂ ಹೇಳೋಕಾಗಲ್ಲ, ಬರಲಿ ಬಿಡಿ; ನೀವು ಎರಡೂ ನೋಡಿ!

ಪುಷ್ಪ-2ನಲ್ಲಿ ಪುಷ್ಪರಾಜ್ ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್ ಬಗ್ಗೆ ಎಷ್ಟು ಮೆಚ್ಚುಗೆ ಕೇಳಿ ಬರ್ತಾ ಇದೆಯೋ ಶ್ರೀವಲ್ಲಿ ರಶ್ಮಿಕಾ ನಟನೆಗೂ ಅಷ್ಟೇ ಮೆಚ್ಚುಗೆ ಸಿಕ್ತಾ ಇದೆ. ಪುಷ್ಪನ ಮುದ್ದು ಮಡದಿಯಾಗಿ  ಮಿಂಚಿರೋ ರಶ್ಮಿಕಾ ಒಂದು ದೃಶ್ಯದಲ್ಲಿ ಎಲ್ಲರನ್ನೂ ಸೈಡ್​ಗೆ ಸರಿಸುವಂತೆ ಪರ್ಫಾರ್ಮ್ ಮಾಡಿದ್ದಾರೆ.

ತನ್ನ ಪಾತ್ರಕ್ಕೆ ಸಿಕ್ತಾ ಇರೋ ಪ್ರಶಂಸೆಯಿಂದ ರಶ್ಮಿಕಾ ಫುಲ್ ಖುಷ್ ಆಗಿದ್ದಾರೆ. ತನ್ನ ಅಕೌಂಟ್​ಗೆ ಮತ್ತೊಂದು ಹಿಟ್ ಸೇರಿಸಿಕೊಂಡಿರೋ ಈ ಬ್ಯೂಟಿ ಮತ್ತಷ್ಟು ಸಂಭಾವನೆ ಹೆಚ್ಚಿಸೋ ಲೆಕ್ಕಾಚಾರಲ್ಲಿದ್ದಾರೆ. 

ಕಿಚ್ಚ ಸುದೀಪ್ ಹೇಳಿರುವುದೇನು ಆಗಿರುವುದೇನು? ಉಲ್ಟಾ ಪ್ರೊಜೆಕ್ಷನ್ ಅಂದ್ರೆ ಇದೇನಾ?

ಹೌದು ಫ್ಯಾನ್ ಶೋನಲ್ಲಿ ಭಾಗಿಯಾದ ಮೇಲೆ ಸಂಜೆ ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆಗೆ ರಶ್ಮಿಕಾ ಮತ್ತೊಮ್ಮೆ ಸಿನಿಮಾ  ನೋಡಿದ್ದಾರೆ. ಹೈದರಾಬಾದ್​ನ ಎಎಂಬಿ ಸಿನಿಮಾಸ್​ನಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್  ಜೊತೆ ಕಾಣಿಸಿಕೊಂಡಿದ್ದಾರೆ.

 

 

click me!