ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿದ್ರೆ ಡಾಕ್ಟರ್‌ ಕೂಡ ನಿಮ್ಮನ್ನು ಉಳಿಸೋಕೆ ಆಗಲ್ಲ; ನಟಿ ಪದ್ಮಜಾ ರಾವ್ ಪುತ್ರನ ಹೇಳಿಕೆ ವೈರಲ್

Published : Dec 09, 2024, 12:11 PM ISTUpdated : Dec 09, 2024, 12:13 PM IST
ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿದ್ರೆ ಡಾಕ್ಟರ್‌ ಕೂಡ ನಿಮ್ಮನ್ನು ಉಳಿಸೋಕೆ ಆಗಲ್ಲ; ನಟಿ ಪದ್ಮಜಾ ರಾವ್ ಪುತ್ರನ ಹೇಳಿಕೆ ವೈರಲ್

ಸಾರಾಂಶ

ಹಾವನ್ನು ನೋಡಿದ ತಕ್ಷಣ ಹೆದರಿಕೊಂಡು ಓಡುವ ಜನರಿಗೆ ಸಾಕಷ್ಟು ಸಲಹೆಗಳನ್ನು ಕೊಟ್ಟ ಸಂಜೀವ್ ಪಡ್ನೆಕರ್. 

ಕನ್ನಡ ಚಿತ್ರರಂಗ ಹಿರಿಯ ನಟಿ ಪದ್ಮಜಾ ರಾವ್ ಪುತ್ರ ಸಂಜೀವ್ ಪಡ್ನೆಕರ್ ಸದ್ಯ ಪ್ರಾಣಿ ಪೆಟ್ ಸ್ಯಾಂಚುರಿ ನಡೆಸುತ್ತಿದ್ದಾರೆ. ಇಲ್ಲಿ ರಕ್ಷಣೆ ಮಾಡಿರುವ ಹಾವು, ಪಕ್ಷಿ ಮತ್ತು ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ ಹಾಗೂ ಜನರಿಗೆ ಅವುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈಗ ಹೆಚ್ಚಾಗಿ ಜನರು ಹೆದರಿಕೊಳ್ಳುವುದು ಹಾವುಗಳ ಬಗ್ಗೆ, ಕಚ್ಚಿದರೆ ಏನು ಮಾಡಬೇಕು ಎಂಬುದರ ಬಗ್ಗೆ. ಸಂಜೀವ್ ಕೊಟ್ಟ ಸಲಹೆಗಳನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. 

'ಹಾವಿನಲ್ಲಿ ವಿಷ ಇಲ್ಲದಿದ್ದರೂ ಭಯಕ್ಕೆ ಜನರು ಸತ್ತು ಹೋಗುತ್ತಾರೆ. ಬೆಟ್ಟ ಹತ್ತುವಾಗ ಹಾವು ಕಣ್ಣಿಗೆ ಬಿದ್ದರೆ ಹೆದರಿಕೊಳ್ಳಬೇಡಿ ದೂರ ನಡೆದುಕೊಂಡು ಅದನ್ನು ನೋಡಿ ಎಂಜಾಯ್ ಮಾಡಿ ಏಕೆಂದರೆ 10 ರಿಂದ 15 ಅಡಿ ದೂರ ಆದ್ರೂ ಹಾವುಗಳಿಗೆ ಕಣ್ಣು ಕಾಣಿಸುವುದಿಲ್ಲ. ಮನೆಯಲ್ಲಿ ಹಾವು ನೋಡಿದಾಗ ಬಾಗಿಲು ಮತ್ತು ಕಿಟಕಿಯನ್ನು ಮುಚ್ಚ ಬೇಕು ಆಗ ಹಾವು ಹಿಡಿಯುವವರು ಕೆಲಸವನ್ನು ಸುಲಭವಾಗಿ ಮಾಡುತ್ತಾರೆ. ಕಾಲಿ ಜಾಗದಲ್ಲಿ ಹಾವು ನೋಡಿದರೆ ಅದರ ಮೇಲೆ ದೊಡ್ಡ ಬೆಡ್ ಶೀಟ್‌ ಹಾಕಿದರೆ ಮೂರು ಗಂಟೆ ಆದರೂ ಅಲ್ಲೇ ಇರುತ್ತದೆ. ಸಿಟಿಯಲ್ಲಿ ಇರುವ ಜನರಿಗೆ ಹಾವು ಕಚ್ಚಿದ್ದರೆ ಗೂಗಲ್‌ನಲ್ಲಿ ಹುಡುಕುತ್ತಾರೆ ಆಮೇಲೆ ಹತ್ತಿರ ಇರುವ ಆಸ್ಪತ್ರೆಗೆ ಮೊದಲು ಹೋಗುತ್ತಾರೆ. ಹಳ್ಳಿಯಲ್ಲಿ ಹಾವು ಕಚ್ಚಿದರೆ ನೂರಾರು ರೂಢಿಗಳನ್ನು ಪಾಲಿಸುತ್ತಾರೆ ಆಗ ಉಳಿಸುವುದು ತುಂಬಾನೇ ಕಷ್ಟವಾಗುತ್ತದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಜೀವ್ ಮಾತನಾಡಿದ್ದಾರೆ.

ಬಾಯಿ ರುಚಿ ಅಂತ ಬ್ರೆಡ್‌ ಮತ್ತು ಬಿಸ್ಕೆಟ್‌ ತಿನ್ನುತ್ತೀರಾ? ಸ್ಲೋ ಪಾಯ್ಸನ್ ಸತ್ಯ ಬಿಚ್ಚಿಟ್ಟ ವೈದ್ಯರು

'ಹಾವು ಕಚ್ಚಿದ ತಕ್ಷಣ ಅಕ್ಕ ಪಕ್ಕದಲ್ಲಿ ಇರುವವರು ಬ್ಲೇಡ್‌ ತೆಗೆದುಕೊಂಡು ಪಕ್ಕದಲ್ಲಿ ಕಟ್ ಮಾಡುತ್ತಾರೆ ಆಗ ರಕ್ತದಲ್ಲಿ ವಿಷ ಹರಿಯುವುದು ತಪ್ಪುತ್ತದೆ ಎಂದು ಆದರೆ ಇದು ಸಾಧ್ಯವೇ ಇಲ್ಲ. ಒಂದು ಲೋಟದಲ್ಲಿ ಒಂದು ಡ್ರಾಪ್ ಇಂಕ್ ಬಿದ್ದರೆ ಕೆಲವು ನಿಮಿಷಗಳಲ್ಲಿ ಡೈಲ್ಯೂಟ್ ಆಗುತ್ತದೆ ಆದರೆ ಅದೇ ಇಂಕ್‌ನ ಒಂದು ದೊಡ್ಡ ಬಕೆಟ್‌ನಲ್ಲಿ ಬಿಟ್ಟರೆ ತುಂಬಾ ಸಮಯ ಹಿಡಿಯುತ್ತದೆ. ಹಾಗೆಯೇ ವಿಷ ದೇಹ ಸೇರಿದ ಮೇಲೆ ಡೈಲ್ಯೂಟ್ ಆಗಲು ಸಮಯ ಹಿಡಿಯುತ್ತದೆ..ಅಂದಾಜು 1-2 ಗಂಟೆ ಸಮಯ ಸಿಗುತ್ತದೆ ಅಷ್ಟರಲ್ಲಿ ಚಿಕಿತ್ಸೆ ಪಡೆಯಬೇಕು. ಬಟ್ಟೆ ಕಟ್ಟುವುದು ಅಥವಾ ಬ್ಲೇಡ್‌ನಿಂದ ಕಟ್ ಮಾಡಿದರೆ ಆ ಜಾಗದಲ್ಲಿ ತುಂಬಾ ತೊಂದರೆ ಆಗುತ್ತದೆ. ಹಾವುನಿಂದ ಕಚ್ಚಿಸಿಕೊಂಡಿರುವ ವ್ಯಕ್ತಿಯ ಕೈ ಕಾಲುಗಳಲ್ಲಿ ಯಾವುದೇ ರೀತಿ ಮೆಟಲ್, ಉಂಗುರ ಅಥವಾ ಕಡಾ ಇದ್ದರೆ ಮೊದಲು ತೆಗೆಯಬೇಕು. ಕೆಲವೊಮ್ಮೆ ಆ ಜಾಗ ಊದಿಕೊಂಡು ಮೆಟಲ್ ಕಟ್ ಮಾಡಲು ಆಗದೇ ಇಡೀ ಬೆರಳು ಕಟ್ ಮಾಡುವ ಪರಿಸ್ಥಿತಿ ಎದುರಾಗಿದೆ' ಎಂದು ಸಂಜೀವ್ ಹೇಳಿದ್ದಾರೆ.

ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಇರ್ಲೇಬೇಕು, ಗಂಡ ಸರಿಯಾಗಿಲ್ಲ ಅಂದ್ರೆ ಬಿಟ್ಟು ಬಾ: ನಟಿ ಜ್ಯೋತಿಕಾ ತಾಯಿ ಖಡಕ್ ಮಾತು

'ಹಾವಿನ ಫೋಟೋ ತೆಗೆದುಕೊಂಡರೆ ಒಳ್ಳೆಯದು ಆದರೆ ಹಾವನ್ನು ಹುಡುಕಿಕೊಂಡು ನಿರ್ಲಕ್ಷ್ಯ ಮಾಡಬೇಡಿ. ಮೊದಲು ಆಂಬ್ಯುಲೆನ್ಸ್‌ನ ಕರೆಸಿ ಕಳುಹಿಸಿ. ಹಳ್ಳಿ ಕಡೆ ಚಿಕಿತ್ಸೆ ಕೊಡಿಸುವ ಬದಲು ನಾಟಿ ವೈದ್ಯರು ಅಥವಾ ಮಾಠಾ ಮಂತ್ರ ಹಾಕಿಸುತ್ತಾರೆ ಯಾವಾಗ ಕಡಿಮೆ ಆಗಲ್ಲ ಹೆದರಿಕೊಂಡು ಡಾಕ್ಟರ್ ಬಳಿ ಬರುತ್ತಾರೆ. ಆಗ ಡಾಕ್ಟರ್ ಹಾವು ಕಚ್ಚಿರುವುದಕ್ಕೆ ಚಿಕಿತ್ಸೆ ನೀಡಬೇಕಾ? ನೀವು ಕಟ್ ಮಾಡಿಕೊಂಡಿರುವುದಕ್ಕೆ ಚಿಕಿತ್ಸೆ ನೀಡಬೇಕಾ ಅಥವಾ ಯಾವುದೋ ಆಯುರ್ವೇದಿ ಮಾತ್ರ ರಿಯಾಕ್ಟ್ ಮಾಡಿದ್ದರೆ ಅದಕ್ಕೆ ಚಿಕಿತ್ಸೆ ಕೊಡಬೇಕಾ? ಹಾವು ಕಚ್ಚಿಸಿಕೊಂಡಿರುವ ವ್ಯಕ್ತಿಯನ್ನು ನಡೆಯುವುದಕ್ಕೆ ಬಿಡಬೇಡಿ. ಕೆಲವೊಮ್ಮೆ ವಿಷ ಇರುವ ಹಾವು 80% ವಿಷ ಬಿಡುವುದಿಲ್ಲ ಇದನ್ನು ಡ್ರೈ ಬೈಟ್ ಎಂದು ಕರೆಯುತ್ತಾರೆ ಹೀಗಾಗಿ ಹಿಂಸೆ ಕೊಟ್ಟರೆ ಖಂಡಿತಾ ಕಚ್ಚುತ್ತೆ. ಬೇಕಿದ್ದರೆ ಸ್ವಲ್ಪ ನೀರು ಕುಡಿಯಬಹುದು ಆದರೆ ಏನೂ ತಿನ್ನೋದು ಕುಡಿಯೋದು ಬೇಡ' ಎಂದಿದ್ದಾರೆ ಸಂಜೀವ್.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ