ಎರಡು ದಿನಗಳ ಹಿಂದಷ್ಟೇ ನಟ ಶಿವಣ್ಣ ದಂಪತಿಗಳು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಇಬ್ಬರೂ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಸದ್ಯದಲ್ಲೆ ಶಿವಣ್ಣ ಅವರು ಅಮೆರಿಕಾಕ್ಕೆ ಚಿಕಿತ್ಸೆಗೆ ಹೊರಟು ನಿಂತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದ್ದು..
ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್ (Shivarajkumar) ಅವರಿಗೆ ಅನಾರೋಗ್ಯ ಕಾಡುತ್ತಿದೆ ಎಂಬುದು ಈಗ ಬಹಳಷ್ಟು ಜನರಿಗೆ ಗೊತ್ತು. ಶಿವಣ್ಣ ಅವರು ಬಳಲುತ್ತಿರುವುದು ಕ್ಯಾನ್ಸರ್ ಖಾಯಿಲೆಯಿಂದ ಎಂಬ ಸುದ್ದಿ ಬಹಳಷ್ಟು ಕಡೆಯಿಂದ ಹಬ್ಬಿದೆ. ಆದರೆ ಆ ಸುದ್ದಿ ನಿಜವಲ್ಲ ಎಂದೂ ಮತ್ತೊಂದು ಮೂಲ ಹೇಳುತ್ತಿದೆ. ನಟ ಶಿವಣ್ಣ ಅವರಾಗಲಿ ಅಥವಾ ಅವರ ಕುಟುಂಬವಾಗಲೀ ಎಲ್ಲೂ ಕೂಡ 'ಕ್ಯಾನ್ಸರ್' ಎಂದು ಹೇಳಿಲ್ಲ. ಹಾಗೂ ಹಬ್ಬಿರುವ ಸುದ್ದಿ ಕುರಿತು 'ಕ್ಯಾನ್ಸರ್ ಎಂದು ಹಬ್ಬಿರುವ ಸುದ್ದಿ ಸುಳ್ಳು' ಅಂತಾನೂ ಅಲ್ಲಗಳೆದಿಲ್ಲ.
ಕಾರಣ, ನಟ ಶಿವರಾಜ್‌ಕುಮಾರ್ ಅವರಿಗೆ ಅನಾರೋಗ್ಯ ಎಂಬುವುದು ಸತ್ಯ. ಆದರೆ ಕಾಡುತ್ತಿರುವ ಕಾಯಿಲೆ ಯಾವುದೆಂಬುದು ಇನ್ನೂ ಕನ್ಫರ್ಮ್ ಆಗಿಲ್ಲ. ಅದು ಕ್ಯಾನ್ಸರ್ ಹೌದು ಅಥವಾ ಅಲ್ಲ ಎಂಬ ಬಗ್ಗೆ ಸ್ವತಃ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಲೋಕಕ್ಕೇ ಸವಾಲಾಗಿದೆ ಎಂದು ಹೇಳಲಾಗುತ್ತಿದೆ. ಅದೊಂದು ಆಟೋ ಇಮ್ಯೂನ್ ಡಿಸೀಸ್ ಎಂದೂ ಹೇಳುತ್ತಿದ್ದಾರೆ. ಹೌದು, ಆದರೆ ಅದು ಕ್ಯಾನ್ಸರ್ ಹೌದೆನ್ನಲು ಅಥವಾ ಅಲ್ಲ ಎನ್ನಲು ಇನ್ನೂ ಸಾಧ್ಯವಾಗುತ್ತಿಲ್ಲ,' ಎನ್ನುತ್ತಿದೆ ವೈದ್ಯಲೋಕ.
ಯುಐ ಚಿತ್ರದ ಗುಟ್ಟು ರಟ್ಟಾಗೋಯ್ತಾ? ಬಿಡುಗಡೆಗೂ ಮೊದಲೇ ಯಾಕೆ ಹೀಗಾಯ್ತು!
ಹೀಗಾಗಿಯೇ ಶಿವಣ್ಣ ಹಾಗೂ ಅವರ ಕುಟುಂಬ ಅನಾರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನ್ನಾಡಿದ್ದರೂ, ಎಲ್ಲೂ ಅದು ಕ್ಯಾನ್ಸರ್ ಎಂದಾಗಲೀ, ಅಥವಾ ಬೇರೆ ಇದೇ ಸ್ಪೆಸಿಪಿಕ್ ರೋಗವೆಂದಾಗಲಿ ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಸ್ವತಃ ಶಿವಣ್ಣ ಅವರೂ 'ನನಗೆ ಹುಶಾರಿಲ್ಲ, ಒಂದು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ಧೇನೆ ಎಂಬುದು ನಿಜ. ಈಗಾಗಲೇ ಅಮೆರಿಕದಲ್ಲಿ ಇದಕ್ಕೆ ಚಿಕಿತ್ಸೆ ಆರಂಭವಾಗಿ ಎರಡು ಸೆಶನ್ ಮುಗಿದಿದೆ. ಇನ್ನೂ ನಾಲ್ಕು ಸೆಶನ್ ಬಾಕಿ ಇದೆ. ಬಳಿಕ ಸರ್ಜರಿಯೂ ಕೂಡ ಅಮೆರಿಕಾದಲ್ಲೇ ಆಗಲಿದೆ,' ಎಂದಿದ್ದಾರೆ.
ದಯವಿಟ್ಟು ನನ್ನ ಅಭಿಮಾನಿಗಳು ಹಾಗೂ ಕರುನಾಡಿದ ಜನತೆ ಆತಂಕಕ್ಕೆ ಒಳಗಾಗಬೇಡಿ. ನಾವೆಲ್ಲರೂ ಟ್ರೀಟ್‌ಮೆಂಟ್ ನೀಡುತ್ತಿರುವ ವೈದ್ಯರ ಮೇಲೆ ಭರವಸೆ ಇಡೋಣ. ಜೊತೆಗೆ, ದೇವರಿದ್ದಾನೆ ಎಲ್ಲರ ಹರಕೆ, ಹಾರೈಕೆ ಇದೆ. ನೀವು ಅಮೆರಿಕದಿಂದ ಟ್ರೀಟ್‌ಮೆಂಟ್ ಮುಗಿಸಿಕೊಂಡು ಆರಾಮ್ ಆಗಿ ಹೋಗುತ್ತೀರಿ ಎಂದು ವೈದ್ಯರು ಭರವಸೆ ಕೊಟ್ಟಿದ್ದಾರೆ,' ಎಂದಿದ್ದಾರೆ ಶಿವಣ್ಣ. ಆದ್ದರಿಂದ, ನಟ ಶಿವಣ್ಣ ಅವರಿಗೆ ಬಂದಿರುವ ಖಾಯಿಲೆ ಅದೇನೆ ಅಗಿದ್ದರೂ, ಆದಷ್ಟೂ ಬೇಗ ಅದು ವಾಸಿಯಾಗಲಿ ಎಂಬುದು ಎಲ್ಲ ಕನ್ನಡಿಗರ ಆಶಯವಾಗಿದೆ, ಹರಕೆ-ಹಾರೈಕೆಯಾಗಿದೆ.
ಬರಬೇಡಿ ಅಂತ ಯಾರಿಗೆ ಯಾರೂ ಹೇಳೋಕಾಗಲ್ಲ, ಬರಲಿ ಬಿಡಿ; ನೀವು ಎರಡೂ ನೋಡಿ!
ಎರಡು ದಿನಗಳ ಹಿಂದಷ್ಟೇ ನಟ ಶಿವಣ್ಣ ದಂಪತಿಗಳು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಇಬ್ಬರೂ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಸದ್ಯದಲ್ಲೆ ಶಿವಣ್ಣ ಅವರು ಅಮೆರಿಕಾಕ್ಕೆ ಚಿಕಿತ್ಸೆಗೆ ಹೊರಟು ನಿಂತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದ್ದು, ಚಿಕಿತ್ಸೆಗೆ ಶಿವಣ್ಣ ಎಲ್ಲ ರೀತಿಯಿಂದಲೂ ಸಜ್ಜಾಗಿದ್ದಾರೆ. ಅಭಿಮಾನಿಗಳ ಹರಕೆ-ಹಾರೈಕೆಗಳಿಗೆ ನಟ ಶಿವಣ್ಣ ಹಾಗೂ ಅವರ ಕುಟುಂಬ ಕೃತಜ್ಞತೆ ಹೇಳಿದೆ.