ಗೋವಾದಲ್ಲಿ ಹೊಸ ಮನೆ ಖರೀದಿಸಿದ ನಟಿ ರಶ್ಮಿಕಾ ಮಂದಣ್ಣ; ಎಷ್ಟು ಮನೆ ಬೇಕಮ್ಮ ಎಂದ ನೆಟ್ಟಿಗರು!

Suvarna News   | Asianet News
Published : Oct 03, 2021, 12:23 PM ISTUpdated : Oct 03, 2021, 12:48 PM IST
ಗೋವಾದಲ್ಲಿ ಹೊಸ ಮನೆ ಖರೀದಿಸಿದ ನಟಿ ರಶ್ಮಿಕಾ ಮಂದಣ್ಣ; ಎಷ್ಟು ಮನೆ ಬೇಕಮ್ಮ ಎಂದ ನೆಟ್ಟಿಗರು!

ಸಾರಾಂಶ

ಒಂದೊಂದೇ ಐಷಾರಾಮಿ ಮನೆಗಳನ್ನು ಖರೀದಿಸುತ್ತಿರುವ ರಶ್ಮಿಕಾ ಮಂದಣ್ಣ. ಇಷ್ಟೊಂದು ಮನೆ ಇದೆ ಎಲ್ಲಿ ಇದ್ರೂ ನೆಮ್ಮದಿ ಬೇಕಲ್ವಾ ಎಂದು ಕಾಲೆಳೆದ ನೆಟ್ಟಿಗರು....

'ಕಿರಿಕ್ ಪಾರ್ಟಿ' (Kirik party) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಇದೀಗ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಯಶಸ್ಸು ಹೆಚ್ಚಾಗುತ್ತಿದ್ದಂತೆ ಸಂಭಾವನೆ (Remuneration) ಗಗನ ಮುಟ್ಟುತ್ತಿದೆ. ಕೈ ತುಂಬಾ ಸ್ಟಾರ್ ನಟರ ಸಿನಿಮಾಗಳಿದೆ. ಇಡೀ ವರ್ಷ ಬ್ಯುಸಿಯಾಗಿರುವ ಕಾರಣ ಸದಾ ಹೋಟೆಲ್‌ನಲ್ಲಿ (Hotel) ಉಳಿದುಕೊಳ್ಳಲು ಆಗುವುದಿಲ್ಲ ಎಂದು ಹೋದಲೆಲ್ಲಾ ಹೊಸ ಮನೆ ಖರೀದಿಸುತ್ತಿದ್ದಾರೆ.

ಕಳೆದ ವರ್ಷ ಹೈದರಾಬಾದ್‌ನಲ್ಲಿ(Hyderabad) ಹೊಸ ಮನೆ ಖರೀದಿಸಿದ್ದ ರಶ್ಮಿಕಾ ಮಂದಣ್ಣ ಕೆಲವು ತಿಂಗಳ ಹಿಂದೆ ಮುಂಬೈನಲ್ಲಿ(Mumbai) ಸಮುದ್ರದ ಕಡೆ ಮುಖ ಮಾಡಿರುವ ಅಪಾರ್ಟ್‌ಮೆಂಟ್‌ (Apartment) ಖರೀದಿಸಿದ್ದರು. ಇದೀಗ ಗೋವಾದಲ್ಲಿ(Goa) ಸ್ವಿಮಿಂಗ್ ಪೂಲ್‌ ಇರುವ ದೊಡ್ಡ ಮನೆ ಖರೀದಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ವಿಮಿಂಗ್ ಪೂಲ್(Swimming Pool) ಹಾಗೂ ಅದರ ಪಕ್ಕ ಇರುವ ಬುದ್ಧನ ಪ್ರತಿಮೆಯ ಫೋಟೋ ಹಂಚಿಕೊಂಡು 'ಗೋವಾದಲ್ಲಿ ಹೊಸ ಮನೆ ಇದ್ದಾಗ. ಹೊಟ್ಟೆ ಉರಿ(Jelouse) ನಾ?' ಎಂದು ಬರೆದುಕೊಂಡಿದ್ದಾರೆ. ಪರಿಸರದ ನಡುವೆ ಮನೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ ಆದರೆ ನೆಟ್ಟಿಗರು ಪಾರ್ಟಿ ಮಾಡೋಕೆ ಗೋವಾದಲ್ಲಿ ಮನೆ ಬೇಕಾ ಎಂದಿದ್ದಾರೆ. 

ಕೂರ್ಗ್‌(Coorg) ರಶ್ಮಿಕಾ ಮಂದಣ್ಣ ತವರು ಮನೆ ಅಲ್ಲಿಯೂ ದೊಡ್ಡ ಬಂಗಲೆ, ಮದುವೆ ಮಂಟಪ (Marriage Hall) ಹಾಗೂ  ಕೋಟಿಗೆ ಬೆಲೆ ಬಾಳುವ ಎಸ್ಟೇಟ್ (Estate) ಹೊಂದಿದ್ದಾರೆ. ಸಿಲ್ವರ್ ಸ್ಪೂನ್‌ನೊಂದಿಗೆ ಬೆಳೆದಿರುವ ರಶ್ಮಿಕಾ ಮಂದಣ್ಣಗೆ ಇದೆಲ್ಲಾ ಸಣ್ಣ ಲೆಕ್ಕ ಎಂದೂ ಕೆಲವರು ಕಾಲೆಳೆದಿದ್ದಾರೆ.  ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣಗೆ ಟ್ರೋಲ್(Troll) ಹೊಸದೇನಲ್ಲ ಆರಂಭದಲ್ಲಿ ಬೇಸರ ಮಾಡಿಕೊಳ್ಳುತ್ತಿದ್ದ ರಶ್ಮಿಕಾ ದಿನ ಕಳೆಯುತ್ತಿದ್ದಂತೆ ನೆಟ್ಟಿಗರ ಮಾತುಗಳನ್ನು ಸ್ಫೂರ್ತಿಯಾಗಿ ಸ್ವೀಕರಿಸಿದ್ದಾರೆ.

ಶ್ರೀವಲ್ಲಿ ಪಾತ್ರಕ್ಕೆ ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ!

12 ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಒಂದು ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.  7 ಬೆಸ್ಟ್ ನಟಿ ಅವಾರ್ಡ್‌ ಗಿಟ್ಟಿಸಿಕೊಂಡಿದ್ದಾರೆ.  ಅಲ್ಲು ಅರ್ಜುನ್‌(Allu Arjun) ಜೊತೆ 'ಪುಷ್ಪ' ಚಿತ್ರದಲ್ಲಿ,  ಹಿಂದಿಯಲ್ಲಿ ಮಿಷನ್ ಮಜಲು(Mission Majlu) ಹಾಗೂ  ಗುಡ್‌ ಬೈ(Good Bye) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ಗೆ(Amitabh Bachchan) ಪುತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಸೈಮಾ ಅವಾರ್ಡ್(SIIMA awards) ಕಾರ್ಯಕ್ರಮದಲ್ಲಿ ಯಜಮಾನ(Yajamana) ಚಿತ್ರಕ್ಕೆ ಬೆಸ್ಟ್ ನಟಿ ಪ್ರಶಸ್ತಿ ಹಾಗೂ ತೆಲುಗು ಭಾಷೆಯ ಡಿಯರ್ ಕಾಮ್ರೇಡ್(Dear Comrade) ಚಿತ್ರಕ್ಕೆ ಬೆಸ್ಟ್‌ ನಟಿ ಪ್ರಶಸ್ತಿ ಗೆದ್ದಿದ್ದಾರೆ. ಅವಾರ್ಡ್ ಕಾರ್ಯಕ್ರಮಕ್ಕೆ ನಟಿ ದೀಪಿಕಾ ಪಡುಕೋಣೆ(Deepika Padukone) ರೀತಿ ವಸ್ತ್ರ ವಿನ್ಯಾಸ ಮಾಡಿಸಿಕೊಂಡಿದ್ದಾರೆ ಎಂದು ಹಲವೆಡೆ ಮತ್ತೆ ಟ್ರೋಲ್‌ಗೆ ಗುರಿಯಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!