
ಅರುಣ್ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಜು 19ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರವನ್ನು ದುಬೈನಲ್ಲಿ ಬಿಡುಗಡೆ ಮಾಡಿದ್ದು, ಮೂರು ದಿನಗಳಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಉತ್ಸಾಹದಲ್ಲಿ ಅಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳಲ್ಲೂ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು.
ಚಂದನ್ ಶೆಟ್ಟಿ, ‘ಪ್ರೇಕ್ಷಕರ ಮುಂದೆ ಸಿನಿಮಾ ಹೋಗುವ ತನಕ ಭಯ ಇತ್ತು. ಈಗ ದುಬೈ ಪ್ರೇಕ್ಷಕರ ಅಭಿಪ್ರಾಯಗಳನ್ನು ನೋಡುತ್ತಿದ್ದರೆ ಕರ್ನಾಟಕದಲ್ಲೂ ನಮ್ಮ ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಮೂಡಿದೆ. ಚಿತ್ರದಲ್ಲಿ ಬೇರೆ ರೀತಿಯ ಕತೆಯನ್ನು ಹೇಳಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿರುವ ಪ್ರಶಾಂತ್ ಸಂಬರ್ಗಿ ಒಳ್ಳೆಯ ಖಳನಟರಾಗುವ ಲಕ್ಷಣಗಳು ಇವೆ’ ಎಂದರು.
ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದ್ದ ಪ್ರಶಾಂತ್ ಸಂಬರ್ಗಿ: ಇಲ್ಲಿದೆ ಕಾರಣ!
ಅರುಣ್ ಅಮುಕ್ತ, ‘ಈ ಚಿತ್ರದ ನಿಜವಾದ ಹೀರೋಗಳು ಚಿತ್ರದ ನಿರ್ಮಾಪಕರಾದ ಸುಬ್ರಮಣ್ಯ ಕುಕ್ಕೆ, ಎಸಿ ಶಿವಲಿಂಗೇ ಗೌಡ. ಯಾವುದೇ ರೀತಿಯ ಷರತ್ತುಗಳನ್ನು ಹಾಕದೆ ಸಿನಿಮಾ ನಿರ್ಮಿಸಿದ್ದಾರೆ’ ಎಂದರು. ಮನೋಜ್ ವಿಹಾನ್, ಮನಸ್ವಿ ಮನು, ಭಾವನಾ ಅಪ್ಪು, ಭವ್ಯಾ ಚಿತ್ರದ ಮುಖ್ಯ ಪಾತ್ರಧಾರಿಗಳು. ಕಾಕ್ರೋಚ್ ಸುಧೀರ್, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ರಘು ರಾಮನಕೊಪ್ಪ ತಾರಾ ಬಳಗದಲ್ಲಿದ್ದಾರೆ.
ಚಿತ್ರದ ಪಾರ್ಟಿ ಹಾಡು ಬಿಡುಗಡೆ: ಚಂದನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟೂಡೆಂಟ್ ಪಾರ್ಟಿ ಹಾಡು ಬಿಡುಗಡೆ ಆಗಿದೆ. ಬಹದ್ದೂರ್ ಚೇತನ್ ಬರೆದಿರುವ ಹಾಡು ಇದಾಗಿದೆ. ಹಾಡಿಗೆ ಚಂದನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಗಂಧದ ಮರ ಕಡಿದ್ರೆ ಕನಿಷ್ಠ 50 ಸಾವಿರ ದಂಡ: ಹೈಕೋರ್ಟ್ ಆದೇಶ
ನಿರ್ದೇಶಕ ಅರುಣ್ ಅಮುಕ್ತ, ‘ಚಂದನ್ ಶೆಟ್ಟಿ ಅವರ ಎಲ್ಲಾ ಹಾಡುಗಳಂತೆಯೇ ಈ ಹಾಡು ಕೂಡ ಹಿಟ್ ಆಗಲಿದೆ. ವಿದ್ಯಾರ್ಥಿಗಳು ಯಾವ ಯಾವ ಕಾರಣಗಳಿಗೆ ಪಾರ್ಟಿ ಮಾಡುತ್ತಾರೆ ಎಂಬುದರ ಮೇಲೆ ಮೂಡಿ ಬಂದಿರುವ ಹಾಡು ಇದು’ ಎಂದರು. 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಜು. 19ರಂದು ತೆರೆಕಾಣುತ್ತಿದೆ. ಇದು ಕಾಲೇಜು ಕತೆಯ ಜೊತೆಗೆ ಸಸ್ಪೆನ್ಸ್ ಕೈಂ ಅಂಶಗಳನ್ನೂ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.