ವಿಲ್ಸನ್ ಗಾರ್ಡನ್‌ನಲ್ಲಿ ಭೀಕರ ಹತ್ಯೆ; 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖ್ಯಾತ ನಿರ್ದೇಶಕ ಗಜೇಂದ್ರ ಅರೆಸ್ಟ್‌!

By Vaishnavi Chandrashekar  |  First Published Jul 18, 2024, 9:38 AM IST

ಜಾಮೀನು ಪಡೆದು ಹೊರ ಬಂದಿದ್ದ ಖ್ಯಾತ ನಿರ್ದೇಶಕ...20 ವರ್ಷ ತಲೆಮರೆಸಿಕೊಂಡಿದ್ದವ ಈಗ ಪೊಲೀಸರ ವಶಕ್ಕೆ.....


ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನು ನಡುಗಿಸಿದೆ. ಈ ಕೇಸ್‌ ಮೇಲೆ ಎರಡನೇ ಆರೋಪಿಯಾಗಿ ನಟ ದರ್ಶನ್ ಜೈಲು ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 17 ಆರೋಪಿಗಳು ಈಗ ಜೈಲು ವಾಸ ಅನುಭವಿಸುತ್ತಿದ್ದಾರೆ. ದಿನಕ್ಕೊಂದು ತಿರುವು ಪಡೆದು ಜಾಮೀನು ಸಿಗುವುದೇ ಕಷ್ಟ ಆಗಿದೆ. ಈ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಿರ್ದೇಶಕ ಅರೆಸ್ಟ್‌ ಆಗಿದ್ದಾರೆ. ಅದು 20 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಮೇಲೆ.....

ಹೌದು! 20 ವರ್ಷಗಳ ಕಾಲ ತಲೆಮರೆಸಿಕೊಂಡು ಓಡಾಡುತ್ತಿದ್ದ ಖ್ಯಾತ ನಿರ್ದೇಶಕ ಗಜ ಅಲಿಯಾಸ್ ಗಜೇಂದ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 2004ರಲ್ಲಿ ವಿಲ್ಸನ್ ಗಾರ್ಡನ್‌ನಲ್ಲಿ ರೌಡಿ ಶೀಟರ್ ಕೊತ್ತ ರವಿ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ನಿರ್ದೇಶಕ ಗಜ ಅಲಿಯಾಸ್ ಗಜೇಂದ್ರ 8ನೇ ಆರೋಪಿ ಆಗಿದ್ದರು. ಈ ಕೇಸಿನಲ್ಲಿ ಚಂದ್ರಪ್ಪ, ಅಲುಮೀನಿಯಮ್ ಬಾಬು ಮತ್ತು ಮುಂತಾದವರು ಇದ್ದಾರೆ. 

Tap to resize

Latest Videos

ಪತ್ನಿ ವಿಜಯಲಕ್ಷ್ಮಿ ಮಾತು ಕೇಳಿ ದರ್ಶನ್ ಶಾಕ್; ನಿಜಕ್ಕೂ ಜಾಮೀನು ಸಿಗಲ್ವಾ?

ಕೊಲೆ ಆದ ತಕ್ಷಣವೇ ನಿರ್ದೇಶಕ ಗಜೇಂದ್ರನನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಜೈಲಿನಲ್ಲಿ ಇದ್ದ ಈತ ಜಾಮೀನು ಪಡೆದು ಹೊರ ಬಂದಿದ್ದರು. ಹೊರ ಬಂದ ಮೇಲೆ ಜಾಮೀನಿನ ನಿಮಯಗಳನ್ನು ಪಾಲಿಸದೆ, ಕೋರ್ಟ್‌ಗೆ ಹಾಜರಾಗದೆ ಗಜೇಂದ್ರ ತಲೆಮರೆಸಿಕೊಂಡಿದ್ದರು. 20 ವರ್ಷಗಳ ಕಾಲ ಯಾರ ಕೈಗೂ ಗಜೇಂದ್ರ ಸಿಕ್ಕಿರಲಿಲ್ಲ. ಪೊಲೀಸರು ಎಷ್ಟೇ ಹುಡುಕುತ್ತಿದ್ದರೂ ಚಳ್ಳೆಹಣ್ಣು ತಿನ್ನಿಸಿದ್ದ. ಈಗ ಗಜೇಂದ್ರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತು ಜೈಲಿಗೆ ಕಳುಹಿಸಲಾಗಿದೆ. 

ಸುಮಾರು ಕಾರಣಗಳಿಂದ ನನಗೋಸ್ಕರ ಶೋಯಿಂದ ಹೊರ ಬಂದೆ; ಕಣ್ಣೀರಿಟ್ಟ ಅನುಪಮಾ ಗೌಡ ವಿಡಿಯೋ ವೈರಲ್

ಪುಟಾಣಿ ಪವರ್ ಮತ್ತು ರುದ್ರ ಕನ್ನಡ ಸಿನಿಮಾವನ್ನು ಗಜೇಂದ್ರ ನಿರ್ದೇಶನ ಮಾಡಿದ್ದು. ತಮಿಳಿನಲ್ಲಿ ಒಂದೆರಡು ಸಿನಿಮಾ ನಿರ್ದೇಶಕ ಮಾಡಿದ್ದಾರೆ. 

click me!