ಪ್ರಶಾಂತ್ ಸಂಬರ್ಗಿಗೆ ಪ್ರೆಸ್‌ಮೀಟ್‌ ವೇಳೆ ಚಂದನ್ ಶೆಟ್ಟಿ ಕಾಲೆಳೆದ್ರಾ? ಹೇಗಿತ್ತು ನಟರಿಬ್ಬರ ಆಟ!

By Shriram Bhat  |  First Published Jul 17, 2024, 10:28 PM IST

ಹೊಸಬರ ಚಿತ್ರವೊಂದು ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿದ್ದು ಇತ್ತೀಚೆಗೆ ಇಲ್ಲವೇ ಇಲ್ಲ ಎನ್ನಬಹುದು. ಈ ಸಿನಿಮಾದ ಪ್ರೀಮಿಯರ್ ಶೋ ನೋಡಿದವರ ಅಭಿಪ್ರಾಯದಂತೆ ಈ ಚಿತ್ರವು ಸಕ್ಸಸ್ ಕಾಣುವುದು ಟೂ ಹಂಡ್ರೆಡ್..


ನಟ, ಸಿಂಗರ್ ಚಂದನ್ ಶೆಟ್ಟಿ ಅವರು ಸದ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿದ್ದು, ಅಂದರೆ 19 ಜಲೈ 2024ರಂದು ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚಿಗೆ ಸಿಕ್ಕ ಮಾಹಿತಿಯಂತೆ ಕರ್ನಾಟಕದಾದ್ಯಂತ 140 ಥಿಯೇಟರ್‌ಗಳಲ್ಲಿ ಅರುಣ್ ಅಮುಕ್ತ ಸಿನಿಮಾ ಬಿಡುಗಡೆ ಕಾಣಲಿದೆ. ಮೊನ್ನೆ, ಅಂದರೆ 14ರಂದು ದುಬೈನಲ್ಲಿ ಚಿತ್ರತಂಡ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಅಲ್ಲಿ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್ ನೋಡಿ ಸ್ವತಃ ಚಿತ್ರತಂಡದ ಕಾನ್ಫಿಡೆನ್ಸ್ ಹೆಚ್ಚಿದೆಯಂತೆ. 

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರಕತೆಯಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿ ಮಾಡುತ್ತಿರುವ ಸೋಷಿಯಲ್ ಮೀಡಿಯಾ ಅವಾಂತರವನ್ನೂ ಟಚ್ ಮಾಡಲಾಗಿದೆ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ನಿರ್ದೇಶಕರಾದ ಅರುಣ್ ಅಮುಕ್ತ. ಚಿತ್ರದಲ್ಲಿ ಚಂದನ್ ಶೆಟ್ಟಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಬಹಳಷ್ಟು ಹಿರಿಕಿರಿಯ ಕಲಾವಿದರ ಬಳಗವೇ ಇದೆ. ಈ ಚಿತ್ರವು ಯಾವ ಜೋನರ್‌ಗೆ ಸೇರುತ್ತದೆ ಎಂಬುದನ್ನು ಚಿತ್ರದ ನೋಡಿ ಬಳಿಕ ಅವರವರೇ ನಿರ್ಧರಿಸಬಹುದು ಎಂದಿದೆ ಚಿತ್ರತಂಡ. 

Tap to resize

Latest Videos

ಹಮ್ಮು ಬಿಮ್ಮಿಲ್ಲದೇ ಜನರೊಂದಿಗೆ ಬೆರೆಯುತ್ತಿದ್ದರು ಡಾ ರಾಜ್, ಈಗಿನವರಿಗೆ ಬೇಕು ಗನ್, ಸೆಕ್ಯುರಿಟಿ!

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪ್ರೆಸ್‌ಮೀಟ್‌ ಕೂಡ ತುಂಬಾ ತುಂಬಾ ಜೋಶ್‌ಫುಲ್‌ ಆಗಿಯೇ ನಡೆಯಿತು. ಅದರಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ನಟ-ಸಿಂಗರ್ ಚಂದನ್ ಶೆಟ್ಟಿ ಮಾತುಗಳು. 'ಪ್ರಶಾಂತ್ ಸಂಬರ್ಗಿ ಮೊದಲ ಬಾರಿ ನಟಿಸಿದ್ದು, ಚೆನ್ನಾಗಿ ನಟಿಸಿದ್ದಾರೆ. ಭವಿಷ್ಯದಲ್ಲಿ ಅವರು ಒಳ್ಳೆಯ ಖಳನಾಯಕರಾಗಬಹುದು' ಎಂದ ಚಂದನ್ ಶೆಟ್ಟಿ ಮಾತುಗಳು ಅಲ್ಲಿದ್ದವರ ಚಪ್ಪಾಳೆ ಗಿಟ್ಟಿಸಿದವು. ಜೊತೆಗೆ, ಸ್ಟೇಜ್‌ ಮೇಲಿದ್ದವರೂ ಕೂಡ ಒಂದು ಕ್ಷಣ ತಾವು ಕ್ಯಾಮೆರಾ ಮುಂದೆ ಇದ್ದೇವೆ ಎಂಬುದನ್ನೂ ಮರೆತು ನಗುವಿನ ಅಲೆಯಲ್ಲಿ ತೇಲಿಹೋದರು. 

ಹಾಗೇ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಅವರು ಚಂದನ್‌ ಶೆಟ್ಟಿ ಅವರ ಬಗ್ಗೆ ತಾವು ಈ ಮೊದಲು ಮಾಡಿದ್ದ ಆರೋಪಗಳೆಲ್ಲವೂ ಸುಳ್ಳು ಎಂಬಂತೆ ಮಾತನಾಡಿದರು. ಈ ಮೊದಲು ತಾವು ಆಡಿದ್ದ ಮಾತುಗಳಲ್ಲಿ ಎಲ್ಲೆಲ್ಲಿ 'ನೋ' ಇತ್ತೋ ಅಲ್ಲೆಲ್ಲ 'ಯೆಸ್' ಇಟ್ಟು ಚಂದನ್ ಶೆಟ್ಟಿ ನಿಜವಾಗಿಯೂ ಪ್ರೊಫೆಶನಲಿಸ್ಟ್ ಎಂದು ಸರ್ಟಿಫಿಕೆಟ್ ಕೊಟ್ಟರು. ವಿಲನ್ ಎಂದಿದ್ದ ಹೀರೋನನ್ನು ಮತ್ತೆ ಹೀರೋನೇ ಎಂದು ಹೇಳುವಂತಿತ್ತು ಪ್ರಶಾಂತ್ ಸಂಬರ್ಗಿ ಮಾತು. ಹುಸಿ ಕಾಲೆಳೆಯುವ ಮಾತುಕತೆ ಏನೇ ಇರಲಿ, ಅಲ್ಲೊಂದು ಟೀಮ್ ಸ್ಪಿರಿಟ್ ಎದ್ದು ಕಾಣುತ್ತಿತ್ತು.

ಕ್ಯಾನ್ಸರ್ ಬಾಧಿಸುತ್ತಿದ್ದರೂ ಅಂದು ಅಪರ್ಣಾ ಹೇಳಿದ್ದ ಮಾತುಗಳು ಕಣ್ಣೀರು ತರಿಸದೇ ಇರದು..!

ಒಟ್ಟಿನಲ್ಲಿ, ಚಂದನ್‌ ಶೆಟ್ಟಿ ಮುಖ್ಯ ಭೂಮಿಕೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವು ಸದ್ಯಕ್ಕೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಹೊಸಬರ ಚಿತ್ರವೊಂದು ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿದ್ದು ಇತ್ತೀಚೆಗೆ ಇಲ್ಲವೇ ಇಲ್ಲ ಎನ್ನಬಹುದು. ಈ ಸಿನಿಮಾದ ಪ್ರೀಮಿಯರ್ ಶೋ ನೋಡಿದವರ ಅಭಿಪ್ರಾಯದಂತೆ ಈ ಚಿತ್ರವು ಸಕ್ಸಸ್ ಕಾಣುವುದು ಟೂ ಹಂಡ್ರೆಡ್ ಪರ್ಸಂಟ್ ಗ್ಯಾರಂಟಿ! ಇನ್ನೇನು ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ ಇದೆ, ಫಲಿತಾಂಶ ತಿಳಿಯಲು ಹೆಚ್ಚು ಕಾಲ ಕಾಯಬೇಕಿಲ್ಲ. 

click me!