ಚಂದನ್ ಶೆಟ್ಟಿಗೆ ಚಿರಂಜೀವಿ ಸರ್ಜಾ ಏನ್ ಮಾಡಿದ್ರು? ಗುಟ್ಟು ರಟ್ಟು ಮಾಡಿದಾರೆ ರ್‍ಯಾಪಿಡ್ ರಶ್ಮಿ!

By Shriram Bhat  |  First Published Jul 13, 2024, 12:05 PM IST

ಏನೋ, ಇಷ್ಟು ದಿನ ಆದ್ಮೇಲೆ ಬಂದ್ಬಿಟ್ಟಿದೀಯ..ಅಂದ. ಏನಿಲ್ಲ ಬೆಂಗಳೂರಿಗೆ ಕೆಲಸ ಹುಡುಕೋಕೆ ಬಂದಿದೀನಿ ಅಂದೆ. ಏನ್ ಫ್ರೀ ಇದೀಯ? ಅಂತ ಕೇಳಿದ, ಹೂಂ ಅಂದೆ, ಹತ್ತು ಗಾಡಿ ಅಂದ..


ನಟ ಹಾಗು ಸಿಂಗರ್ ಚಂದನ್ ಶೆಟ್ಟಿ (Chandan Shetty) ಅವರು ರ್‍ಯಾಪಿಡ್ ರಶ್ಮಿ (Rapid Rashmi) ಅವರ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಚಂದಣ್ ಶೆಟ್ಟಿಯವರು ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಹೇಳಿಕೊಂಡಿದ್ದಾರೆ. ಚಂದನ್ ಶೆಟ್ಟಿ ಮಾತು ಕೇಳುತ್ತಿದ್ದರೆ ಯಾರಿಗಾದರೂ ಅಚ್ಚರಿ ಎನಿಸುತ್ತದೆ. ಈ ಜೀವನ ಯಾರೊಂದಿಗೆ ಯಾರಿಗೆ ಯಾವ ರೀತಿಯಲ್ಲಿ ಸಂಬಂಧ ಬೆಸೆಯುತ್ತದೆ ಎಂಬುದನ್ನು ಊಹಿಸಲೂ ಕೂಡ ಅಸಾಧ್ಯ ಎನ್ನಬಹುದು. ಹಾಗಿದ್ದರೆ ಚಂದನ್ ಶೆಟ್ಟಿ ಅವರು ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಅದೇನು ಹೇಳಿದ್ದಾರೆ? ಇಲ್ಲಿದೆ ಆ ಕುತೂಹಲಕ್ಕೆ ಉತ್ತರ..

ಫಸ್ಟ್ ಟೈಮ್ ನಂಗೆ ಸಿನಿಮಾ ಇಂಡಸ್ಟ್ರಿ ಕನೆಕ್ಷನ್ ಸಿಕ್ಕಿದ್ದೇ ಚಿರಂಜೀವಿ ಸರ್ಜಾ ಅವರಿಂದ. ಸಿಟಿ ಕಾಲೇಜ್‌ ಎದುರು ನನ್ ಫ್ರೆಂಡ್ ರೂಮಿತ್ತು. ಅವ್ನು ಗಾಡಿ ಕೀನ ನಂಗೆ ಕೊಟ್ಟಿದ್ದ. ಜೊತೆಗೆ, ಏನೂ ಮಾಡ್ಬೇಡ, ಪೆಟ್ರೋಲ್ ಹಾಕಿಸ್ಕೊಂಡು ಇಡೀ ಬೆಂಗಳೂರು ಸುತ್ತು.. ಲೈಸನ್ಸ್ ಇದ್ಯಾ ಅಂತ ಕೇಳಿದ, ಹೌದು ಅಂದೆ.. ಹಂಗಿದ್ರೆ ಸುಮ್ನೆ ಊರು ಸುತ್ತು ಅಂದ. ಸರಿ ಅಂತ ಗಾಡಿ ತಗೊಂಡೆ ಹೊರಟೆ.. ಹಂಗೆ ಸುತ್ತು ಹಾಕುತ್ತಾ ಇರೋವಾಗ, ಒಂದು ರೋಡ್ ನೋಡಿದ್ರೆ, ಈ ರೋಡ್‌ನ ಮೊದ್ಲೇ ಎಲ್ಲೋ ನೋಡಿದ್ನಲ್ಲಾ ಅಂತ ಅನ್ನಿಸ್ತು.. ಓ, ಇದು ಚಿರು ಅವ್ರ ಮನೆ ರೋಡಲ್ವಾ ಅಂತ ನೆನಪಾಯ್ತು, ಅಲ್ಲಿಗೆ ಹೋದೆ..

Tap to resize

Latest Videos

ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!

ಏನೋ, ಇಷ್ಟು ದಿನ ಆದ್ಮೇಲೆ ಬಂದ್ಬಿಟ್ಟಿದೀಯ..ಅಂದ. ಏನಿಲ್ಲ ಬೆಂಗಳೂರಿಗೆ ಕೆಲಸ ಹುಡುಕೋಕೆ ಬಂದಿದೀನಿ ಅಂದೆ. ಏನ್ ಫ್ರೀ ಇದೀಯ? ಅಂತ ಕೇಳಿದ, ಹೂಂ ಅಂದೆ, ಹತ್ತು ಗಾಡಿ ಅಂದ.. ಏನೂ ಕೇಳಿಲ್ಲ, ಗಾಡಿ ಹತ್ತಿ ಹೋದೆ.. ಸೀದಾ ವರದನಾಯಕ ಶೂಟಿಂಗ್ ಸೆಟ್‌ಗೆ ಕರೆದುಕೊಂಡು ಹೋದ.. ಅದೇ ಮೊದಲು ನಾನು ಸಿನಿಮಾ ಶೂಟಿಂಗ್‌ಗೆ ಹತ್ತಿರದಿಂದ ಜೊತೆಯಲ್ಲೇ ಇದ್ದು ನೋಡಿದ್ದು. ಅಲ್ಲಿಂದಲೇ ನನ್ನ ಸಿನಿಮಾ ಜರ್ನಿ ಶುರುವಾಯ್ತು' ಎಂದಿದ್ದಾರೆ ಚಂದನ್ ಶೆಟ್ಟಿ. 

ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?

ಚಂದನ್ ಶೆಟ್ಟಿ ಅವರು ಸದ್ಯ ತಮ್ಮ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಬಿಡುಗಡೆ ಪ್ರಯುಕ್ತ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು, ಅಂದರೆ 13 ಜುಲೈ 2024ರಂದು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಪ್ರಮೋಶನ್‌ಗೆ ಎಂದು ದುಬೈಗೆ ನಟ ಚಂದನ್‌ ಶೆಟ್ಟಿ ಹೊರಟಿದ್ದಾರೆ. ನಾಳೆ ಅಲ್ಲಿ ಸಿಲೆಕ್ಟೆಡ್ ಜನರಿಗೆ ಪ್ರೀಮಿಯರ್ ಶೋ ತೋರಿಸುವ ಮೂಲಕ ಈ ಸಿನಿಮಾದ ಪ್ರಮೋಶನ್ ಮಾಡಲಿದ್ದಾರೆ. ಈ ಚಿತ್ರವನ್ನು ಅರುಣ್ ಅಮುಕ್ತ ನಿರ್ದೇಶಿಸಿದ್ದಾರೆ. 

ಕೆಜಿಎಫ್ ಸ್ಟಾರ್ ಯಶ್ ನ್ಯೂ ಹೇರ್ ಸ್ಟೈಲ್ ನೋಡಿ ನೀವಿನ್ನೂ ಫಿದಾ ಆಗಿಲ್ವಾ, ನೋಡಿ ಬೇಗ..!

ಅಂದಹಾಗೆ, ನಟ ಚಂದನ್ ಶೆಟ್ಟಿ ಅವರು ಈಗ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಎತ್ತರಕ್ಕೆ ಏರತೊಡಗಿದ್ದಾರೆ. ಸಾಂಗ್ಸ್, ಸಿನಿಮಾ ಹಾಗೂ ಸ್ಟೇಜ್ ಶೋ ಮೂಲಕ ಚಂದನ್ ಮಿಂಚುತ್ತಲೇ ಇದ್ದಾರೆ. ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಮುಂದಕ್ಕೆ ಸಾಗುತ್ತಿದ್ದು, ಎಲ್ಲರೂ ಈಗ 'ಇದ್ದರೆ ಚಂದನ್ ಶೆಟ್ಟಿಯಂತೆ ಇರಬೇಕು' ಎಂದು ಹೇಳತೊಡಗಿದ್ದಾರೆ. ಅಷ್ಟರಮಟ್ಟಿಗೆ ಚಂದನ್ ಶೆಟ್ಟಿ ಅವರು ತಮ್ಮ ಪರ್ಸನಲ್ ಲೈಫ್‌ನಲ್ಲಿ ಆದ ಸಮಸ್ಯೆಯನ್ನು ಪ್ರಬುದ್ಧತೆಯಿಂದ ಪರಿಹರಿಸಿಕೊಂಡು ಮುನ್ನಡೆಯುತ್ತಿದ್ದಾರೆ. 

ಸುಳ್ಳು ಸುತ್ತಾಡ್ತಿತ್ತಾ ಇಷ್ಟೊಂದು ಕಾಲ, ರಾಮಾಯಣ ಅಲ್ಲ ಕೆಜಿಎಫ್‌ಗೇ ಯಶ್‌ಗೆ ಆ ಪಟ್ಟ ಸಿಕ್ಕಿತ್ತು..!

click me!