ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?

By Shriram BhatFirst Published Jul 12, 2024, 7:02 PM IST
Highlights

ಡಾ ರಾಜ್‌ ಅವರಿಗಾಗಿಯೇ ಕೆಲವು ಕಥೆಗಳನ್ನು ಮಾಡಿ ಅದನ್ನು ಅವರಿಂದಲೇ ಮಾಡಿಸಿ ತೆರೆಗೆ ತರುತ್ತಿದ್ದರು. ಅದೇ ರೀತಿ, ವಿಷ್ಣುವರ್ಧನ್ ಅವರಿಗಂತಲೇ ಸಿನಿಮಾ ಕಥೆಗಳನ್ನು ಮಾಡುವವರೂ ಇದ್ದರು...

ಡಾ ರಾಜ್‌ಕುಮಾರ್ ( Dr Rajkumar) ಅವರಿಗೆ ಅಂತಲೇ ಮಾಡಿದ್ದ ಕಥೆಯೊಂದಕ್ಕೆ ಡಾ ವಿಷ್ಣುವರ್ಧನ್ (Dr Vishnuvardhan) ಅವರು ನಾಯಕರಾಗಿ ಸಿನಿಮಾ ಮಾಡಿದ ಸ್ಟೋರಿ ಇದು. ಅಂದಿನ ಕಾಲದಲ್ಲಿ ಡಾ ರಾಜ್ ಹಾಗೂ ಡಾ ವಿಷ್ಣು ಕನ್ನಡದ ಎರಡು ಅತ್ಯದ್ಭುತ ತಾರೆಗಳಾಗಿ ಮಿಂಚುತ್ತಿದ್ದರು. ಡಾ ರಾಜ್‌ ಅವರಿಗಾಗಿಯೇ ಕೆಲವು ಕಥೆಗಳನ್ನು ಮಾಡಿ ಅದನ್ನು ಅವರಿಂದಲೇ ಮಾಡಿಸಿ ತೆರೆಗೆ ತರುತ್ತಿದ್ದರು. ಅದೇ ರೀತಿ, ವಿಷ್ಣುವರ್ಧನ್ ಅವರಿಗಂತಲೇ ಸಿನಿಮಾ ಕಥೆಗಳನ್ನು ಮಾಡುವವರೂ ಇದ್ದರು. ಆದರೆ, ಅವರಿಗಾಗಿಯೇ ಮಾಡಿದ ಕಥೆಗೆ ಇವರು, ಇವರಿಗಾಗಿ ಮಾಡಿದ ಕಥೆಗೆ ಇವರತು ಹೀಗೆ ಆಯ್ಕೆಗಳನ್ನು ಮಾಡುತ್ತಿದ್ದುದ್ದು ತುಂಬಾ ವಿರಳವೇ ಆಗಿತ್ತು. 

ಆದರೆ, ಅಂತಹದೊಂದು ಸಂದರ್ಭ ಚಿ ಉದಯಶಂಖರ್ ಅವರಿಗೆ ಬಂದಿತ್ತು. ಡಾ ರಾಜ್‌ಕುಮಾರ್ ಅವರಿಗಾಗಿ ಚಿ ಉದಯಶಂಕರ್ ಅವರು ಕಥೆಯೊಂದನ್ನು ಸಿದ್ಧಮಾಡಿಕೊಂಡಿದ್ದರು. ಅದನ್ನು ಡಾ ರಾಜ್ ಅವರಿಗೆ ಹೇಳಿದರು. ಆದರೆ ಅದ್ಯಾಕೋ ಅಣ್ಣಾವ್ರಿಗೆ ಆ ಕಥೆ ಇಷ್ಟವಾಗಲಿಲ್ಲ. ಅವರು ಅದನ್ನುಮಾಡಲು ಒಪ್ಪಲಿಲ್ಲ. ಬಳಿಕ ಅದನ್ನು ಪಾರ್ವತಮ್ಮನವರಿಗೆ ಕೇಳಿಸಿದಾಗ, ಅವರಿಗೂ ಆ ಕಥೆ ಇಷ್ಟವಾಗಲಿಲ್ಲ. ಡಾ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಇಬ್ಬರೂ ಆ ಕಥೆಯನ್ನು ಒಪ್ಪದಿದ್ದಾಗ ಚಿ ಉದಯಶಂಕರ್ ಅವರಿಗೆ ಆತಂಕ ಎದುರಾಗಿತ್ತು. 

Latest Videos

ನಟ ಯಶ್ ರಾಮಾಯಣಕ್ಕೇ ಮೊದಲು ನಿರ್ಮಾಪಕರು ಅನ್ನೋದು ಶುದ್ಧ ಸುಳ್ಳು, ನೋಡಿ ಹೊಸ ನ್ಯೂಸ್!

ಅದನ್ನು ಅರಿತ ಡಾ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರಿಬ್ಬರೂ ಚಿ ಉದಯಶಂಕರ್ ಅವರಿಗೆ 'ನೀವು ಈ ಕಥೆಯನ್ನುಬೇರೆಯವರಿಂದ ಮಾಡಿಸಬಹುದು. ನಮ್ಮದೇನೂ ಅಭ್ಯಂತರವಿಲ್ಲ' ಎಂದಿದ್ದರಂತೆ. ಅದನ್ನು ಕೇಳಿ ನಿರಾಳ ಭಾವದಿಂದ ಚಿ ಉದಯಶಂಕರ್ ಅವರು ಅದೇ ಕಥೆಯನ್ನು ನಿರ್ದೇಶಕ ಭಾರ್ಗವ ಅವರಿಗೆ ಹೇಳಿದ್ದಾರೆ. ಆ ಕಥೆಯನ್ನು ಇಷ್ಟಪಟ್ಟ ಭಾರ್ಗವ ಅವರು ಅದನ್ನು ನಟ ವಿಷ್ಣುವರ್ಧನ್ ಅವರಿಗೆ ಹೇಳಿದ್ದಾರೆ. 

ಅಂತೂ ಇಂತೂ ಹೇರ್ ಕಟ್ ಮಾಡಿಸಿಕೊಂಡ ಯಶ್, ಹೊಸ ಲುಕ್ಕಲ್ಲಿ ರಾಕಿಂಗ್ ಸ್ಟಾರ್! ಮಕ್ಕಳಿಗೆ ಅಪ್ಪನ ಗುರುತು ಸಿಗುತ್ತಾ?

ಸಾಹಸಸಿಂಹ ನಟ ವಿಷ್ಣುವರ್ಧನ್ ಅವರಿಗೆ ಭಾರ್ಗವ ಅವರು ಹೇಳಿರುವ ಆ ಕಥೆ ಇಷ್ಟವಾಗಿದೆ. ಆದರೆ, ಯಾವಾಗ ಈ ಕಥೆ ರಾಜ್‌ಕುಮಾರ್ ಅವರಿಗೆ ಮಾಡಿದ್ದು ಅಂತ ಗೊತ್ತಾಯಿತೋ, ಆಗ ವಿಷ್ಣುವರ್ಧನ್ ಅವರು ಅದನ್ನು ಮಾಡಲು ಹಿಂದೇಟು ಹಾಕಿದ್ದಾರೆ. 'ಯಾಕೆ ಸುಮ್ಮನೇ ತಾಪಾತ್ರಯ? ಡಾ ರಾಜ್‌ ಅವರಿಗೆ ಅಂತ ಮಾಡಿದ ಕಥೆಯನ್ನು ನಾನು ಮಾಡುವುದು, ಅದು ಇನ್ನೇನೋ ಸುದ್ದಿಯಾಗಿ ಆಗಬಾರದ್ದು ಆಗುವುದು, ಬೇಕಾ ಇವೆಲ್ಲಾ' ಎಂದಿದ್ದಾರೆ ನಟ ವಿಷ್ಣುವರ್ಧನ್. ಭಾರ್ಗವ ಅವರಿಗೂ ಹಾಗೇ ಅನ್ನಿಸಿದೆ. 

ಅಪರ್ಣಾ ಸಾವಿಗೆ ಯಾಕಿಷ್ಟು ಕಂಬನಿ, ಸಾವಿನ ಬಳಿಕವೂ ಜೀವಿಸೋದು ಅಂದ್ರೇನು ಅಂತ ಹೇಳಿಕೊಟ್ರಾ..?

ಅದನ್ನು ತಿಳಿದ ಚಿ ಉದಯಶಂಕರ್ ಅವರು 'ನೀವು ಯೋಚಿಸಿದ್ದು, ಹೇಳಿದ್ದು ಎಲ್ಲವೂ ಸರಿಯಾಗಿಯೇ ಇದೆ. ಆದರೆ, ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಇಬ್ಬರೂ ಇದನ್ನು ಬೇರೆ ಯಾರಿಂದ ಮಾಡಿಸಿದರೂ ತಮ್ಮದೇನು ಅಭ್ಯಂತವಿಲ್ಲ ಎಂದಿದ್ದಾರೆ' ಎಂದಿದ್ದಾರೆ. ಆ ಮಾತು ಕೇಳಿ ಭಾರ್ಗವ-ವಿಷ್ಣುವರ್ಧನ್ ಇಬ್ಬರೂ ನಿರಾಳರಾಗಿದ್ದಾರೆ. ಬಳಿಕ ಅದೇ ಕಥೆಯನ್ನು ನಟ ವಿಷ್ಣುವರ್ಧನ್ ನಾಯಕತ್ವದಲ್ಲಿ ಭಾರ್ಗವ ಅವರು ತೆರೆಗೆ ತಂದಿದ್ದಾರೆ. ಅದೇ 'ಕೃಷ್ಟಾ ನೀ ಬೇಗನೆ ಬಾರೋ'. ವಿಷ್ಣುವರ್ಧನ್ ನಟನೆಯಲ್ಲಿ ಆ ಸಿನಿಮಾ ಸೂಪರ್ ಹಿಟ್ ಆಗಿದೆ.

ಬೆಂಗಳೂರಲ್ಲೆ ಬೇಕಾದಷ್ಟು ಜಾಗ ಸಿಗ್ತವೆ, ಮಾರಿದ್ರೆ ತುಂಬಾ ರೇಟೂ ಬರುತ್ತೆ; ರಾಕಿಂಗ್ ಸ್ಟಾರ್ ಯಶ್! 

click me!