
ಅಂದು, 'ಪುನೀತ್ ನಮನ' ಕಾರ್ಯಕ್ರಮದಲ್ಲಿ ನಿರೂಪಕಿ ಅಪರ್ಣಾ (Aparna) ಎದುರು ನಟ ದರ್ಶನ್ (Darshan) ಮಾತನಾಡಿದ್ದರು. 29 ಅಕ್ಟೋಬರ್ 2021ರಂದು ನಟ ಪುನೀತ್ ರಾಜ್‌ಕುಮಾರ್ ಅವರು ಇಹಲೋಕ ತ್ಯಜಿಸಿದ್ದು ಎಲ್ಲರಗೂ ಗೊತ್ತು. ಬಳಿಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ 'ಪುನೀತ ನಮನ' ಕಾರ್ಯಕ್ರಮಕ್ಕೆ ಅಪರ್ಣಾ ಅವರು ನಿರೂಪಕಿಯಾಗಿ ಕಾರ್ಯಕ್ಮ ನಡೆಸಿಕೊಟ್ಟಿದ್ದರು. ಅಂದು ಮಟ ದರ್ಶನ್ ಅವರು ಅಗಲಿರುವ ನಟ ಪುನೀತ್ (Puneeth Rajkumar) ಬಗ್ಗೆ, ಒಂದು ಹಾಡಿನ ಬಗ್ಗೆ ಹೇಳಿದ್ದರು. ಅದೀಗ ವೈರಲ್ ಆಗುತ್ತಿದೆ.
ನಟ ದರ್ಶನ್ ಹೀಗೆ ಹೇಳಿದ್ದರು.. 'ಇಲ್ಲಿ ತುಂಬಾ ಜನ ಹಿರಿಯರು ಇದ್ದಾರೆ. ಅವರು ಮಾತನಾಡಿದ್ರೆ ಚೆನ್ನಾಗಿರುತ್ತೆ, ನಾನು ಚಿಕ್ಕವ್ನು, ಎರಡೇ ಎರಡು ಮಾತಾಡ್ತೀನಿ.. ನಾಗೇಂದ್ರ ಪ್ರಸಾದ್ ಅವರು ಒಂದು ಸಿನಿಮಾ ಹಾಡನ್ನು ಬರೆದಿದ್ದಾರೆ. ಹನ್ನೊಂದು ದಿನದಿಂದಾನೂ ಅದು ತಲೆಯಲ್ಲಿ ಓಡ್ತಾ ಇದೆ. ಕಾಣದ ಕೈಯಲ್ಲಿ ಗೊಂಬೆಯು ನೀನು, ಕಾಲದ ಎದುರಲ್ಲಿ ಕುರುಡನು ನೀನು.. ಅರ್ಥವೇ ಆಗದ ಜಗದಲ್ಲಿ, ಅರ್ಥವ ಹುಡುಕಿದೆ ನೀನಿಲ್ಲಿ.. ಗೀಚುವ ಬ್ರಹ್ಮ ಗೀಚುವ ಮುಂಚೆ ಯೋಚಿಸಲೇ ಇಲ್ಲ.. ಹಣೆಯ ಮೇಲೆ ಕೆತ್ತಿದ ಮೇಲೆ ತಿದ್ದೋರ್ ಯಾರಿಲ್ಲ..
ಡಾ ರಾಜ್‌ಗೆ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಹೇಳಿದ್ದು ಯಾರು; ಅದು ಆಮೇಲೇನಾಯ್ತು?
ಈ ನಾಲ್ಕು ಲೈನ್ ತುಂಬಾನೇ ಇವತ್ತಿಗೆ ಅರ್ಥ ಕೊಡ್ತಿದೆ. ಯಾಕಂದ್ರೆ, ಪುನೀತ್ ಸರ್‌ದು ಕೆಲವೊಂದು ವಿಡಿಯೋ ನೋಡಿದಾಗ ನಮ್ಗೆನೇ ಬೇಜಾರಾಗುತ್ತೆ.. ಯಾಕಂದ್ರೆ, ಗೇಟಿಂದ ಆಚೆ ಹೋದವ್ರು ಮತ್ತೆ ಗೇಟ್ ಒಳಗೆ ಬರ್ತಾರೋ ಇಲ್ವೋ ಗೊತ್ತಾಗ್ಲಿಲ್ಲ.. ಸೋ, ಎಷ್ಟು ನಿಮಿತ್ತ ಆಗೋದ್ವಿ ನಾವು ಅಂತ.. ಇದನ್ನ ನಾವಿ ಇದೀವೋ ಇಲ್ವೋ ಅಂತಾನೂ ಯೋಚ್ನೆ ಮಾಡೋಕೆ ಆಗಲ್ಲ.. ಆ ಬ್ರಹ್ಮ ಮೋಸ್ಟಲೀ 47 ಅಂತ ಬರೆದು, ಮತ್ತೆ ತಿದ್ದೋಕೆ ಅವ್ನ ಕೈನಲ್ಲೇ ಆಗ್ಲಿಲ್ವಲ್ಲ..
ಯಾಕೆ ಅಂದ್ರೆ ಇನ್ನೂ ಜೀವನ ಇತ್ತು.. ಚಿತ್ರರಂಗದಲ್ಲಾಗ್ಲೀ, ಪ್ರತಿಯೊಂದರಲ್ಲೂ ಇತ್ತು.. ಮಕ್ಕಳ ನೋಡಿದಾಗ್ಲೂ ಅನ್ಸುತ್ತೆ.. ಚಿತ್ರರಂಗದಲ್ಲಿ ಆಗ್ಲಿ, ಎಲ್ಲಾ ಕಡೆ ಬಹಳ ಕೆಲಸ ಮಾಡೋದಿತ್ತು. ಇವತ್ತು ಅಪ್ಪು ಅವ್ರು ನಮ್ಮೊಂದಿಗೆ ಇದಾರೆ. ನಾವ್ ಯಾವತ್ತೂ ಅವ್ರನ್ನ ನೆನಸ್ಕೊಂಡು, ಅವ್ರ ಕಾರ್ಯ ವೈಖರಿ, ಕಲೆ ಹಾಗು ಸೇವೆನಾ ಯಾವತ್ತೂ ಮುಂದುವರೆಸಿಕೊಂಡು ಹೋಗೋಣ ಅಂತ ಹೇಳ್ತೀನಿ, ಧನ್ಯವಾದಗಳು' ಎಂದಿದ್ರು ಅಂದು ಅಪರ್ಣಾ ನಿರೂಪಣೆಯ ವೇದಿಕೆಯಲ್ಲಿ ನಟ ದರ್ಶನ್.
ನಟ ಯಶ್ ರಾಮಾಯಣಕ್ಕೇ ಮೊದಲು ನಿರ್ಮಾಪಕರು ಅನ್ನೋದು ಶುದ್ಧ ಸುಳ್ಳು, ನೋಡಿ ಹೊಸ ನ್ಯೂಸ್!
ಈ ವಿಡಿಯೋ ನೋಡಿದಾಗ, ಕನ್ನಡನಾಡಿನ ಜನರಿಗೆ ಮೂರು ರತ್ನಗಳ ಬಗ್ಗೆ ಯೋಚಿಸುವಂತಾಗಿರಬಹುದು. ಅದೇ ಈ ವಿಡಿಯೋ ಈಗ ವೈರಲ್ ಆಗಲು ಕಾರಣ ಆಗಿರಬಹುದು. ನಟ ಪುನೀತ್ ಅವರು ಅಗಲಿದ ಕ್ಷಣದಲ್ಲಿ ನಿರೂಪಕಿ ಅಪರ್ಣಾ ದುಃಖದಲ್ಲೇ ಹೇಳಿಕೊಂಡೇ ಆ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ನಟ ದರ್ಶನ್ ಅವರನ್ನು ನಿರೂಪಕಿ ಅಪರ್ಣಾ ಮಾತನಾಡಲು ವೇದಿಕೆಗೆ ಕರೆದಿದ್ದರು. ಪುನೀತ್ ಕಳೆದುಕೊಂಡ ನೋವಿನಲ್ಲೇ ನಟ ದರ್ಶನ್ ಅಂದು ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಸಾಲಗಳನ್ನು ಹೆಸರಿಸಿ ಮಾತನ್ನಾಡಿದ್ದರು.
ಅಪರ್ಣಾ ಸಾವಿಗೆ ಯಾಕಿಷ್ಟು ಕಂಬನಿ, ಸಾವಿನ ಬಳಿಕವೂ ಜೀವಿಸೋದು ಅಂದ್ರೇನು ಅಂತ ಹೇಳಿಕೊಟ್ರಾ..?
ಆದರೆ ಅಂದೇ ನಟ ಪುನೀತ್ ನಮ್ಮೊಂದಿಗೆ ಇರಲಿಲ್ಲ. ಈಗ ನಿರೂಪಕಿ ಅಪರ್ಣಾ ಕೂಡ ನೆನಪು ಮಾತ್ರ. ಆದರೆ ನಟ ದರ್ಶನ್ ಅವರು ಇದ್ದೂ ಇಲ್ಲದಂತೆ ಆಗಿದ್ದಾರೆ. ಅಂದರೆ, ನಟ ದರ್ಶನ್ ಇರಬಾರದ ಸ್ಥಿತಯಲ್ಲಿ, ಪರಿಸ್ಥಿತಿಯಲ್ಲಿ ಇದ್ದಾರೆ. ಆ ಹಾಡಿನ ಸಾಲಿನಂತೆ, ಬ್ರಹ್ಮನು ಯಾರಯಾರ ಹಣೆಯಲ್ಲಿ ಅದೇನೇನು ಬರೆದಿದ್ದಾನೋ ಏನೋ ಎನ್ನಿಸಿಬಿಡುತ್ತದೆ. ನಟ ಪುನೀತ್ ಆ ರೀತಿಯಲ್ಲಿ ದುರಂತ ಅಂತ್ಯ ಕಂಡಿದ್ದರೆ ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್‌ಗೆ ಬಲಿಯಾದರು. ಆದರೆ, ನಟ ದರ್ಶನ್ ಕೊಲೆ ಕೇಸ್ ಆರೋಪಿಯಾಗಿ ಜೈಲು ಸೇರಿಬಿಟ್ಟರು. ಎಲ್ಲವೂ ವಿಧಿಯಾಟ ಎನ್ನುವುದು ಇದಕ್ಕೇ ಇರಬಹುದು!
ಅಂತೂ ಇಂತೂ ಹೇರ್ ಕಟ್ ಮಾಡಿಸಿಕೊಂಡ ಯಶ್, ಹೊಸ ಲುಕ್ಕಲ್ಲಿ ರಾಕಿಂಗ್ ಸ್ಟಾರ್! ಮಕ್ಕಳಿಗೆ ಅಪ್ಪನ ಗುರುತು ಸಿಗುತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.