ಚಂದನವನದ ಭರವಸೆಯ ನಿರ್ದೇಶಕರಾದ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಏಕ್ ಲವ್ ಯಾ ಸಿನಿಮಾದ ಆರು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು,ಎಲ್ಲಾ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ನಮ್ಮೆಲ್ಲರಿಗೂ ತಿಳಿದಿದೆ.
ಸುಕನ್ಯಾ ಎನ್. ಆರ್
ಆಳ್ವಾಸ್ ಕಾಲೇಜು ಮೂಡುಬಿದಿರೆ
ಕನ್ನಡ ಚಿತ್ರರಂಗ ಕಂಡಂತಹ ಅತ್ತುತ್ಯಮ ನಿರ್ದೇಶಕ,'ಜೋಗಿ' ಚಿತ್ರದ ಮೂಲಕ ಜೋಗಿ ಪ್ರೇಮ್ ಎಂದೇ ಪ್ರಸಿದ್ಧರಾಗಿ ಅಭಿಮಾನಿಗಳ ಬಾಯಿಯಲ್ಲಿ ಈ ಹೆಸರಿನಿಂದಲೇ ಕರೆಸಿಕೊಳ್ಳುವ ಇವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಬಹಳ.ಅನೇಕ ಸಿನಿಮಾಗಳಿಂದ ಕನ್ನಡಿಗರ ಮನದ ಕದ ತಟ್ಟಿದ್ದಾರೆ .
ಪ್ರೇಮ್ ಅವರ ಎಲ್ಲಾ ಸಿನಿಮಾದಲ್ಲಿ ಸಹಪಾಠಿಯಾಗಿ ಅವರ ಜೊತೆಗೂಡಿ ಅವರ ಯಶಸ್ಸನ್ನು ಬಯಸುವ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಈ ಚಿತ್ರದ ನಿರ್ಮಾಪಕರಾಗಿ ಚಿತ್ರ ತಂಡದ ಬೆನ್ನೆಲುಬಾಗಿ ಸದಾ ಉತ್ಸವದಿಂದ
ಕಲಾವಿದರನ್ನು ಪ್ರೋತ್ಸಾಹಿಸುತ್ತ, ಎಲ್ಲಾ ತಾಂತ್ರಿಕ ತಂಡವನ್ನು ತಮ್ಮ ಕುಟುಂಬದ ಸದಸ್ಯನಾಗಿ ನಡೆಸಿಕೊಳ್ಳುವ ಬಗೆಗಿನ ಮಾತು ಏಕ್ ಲವ್ ಯಾದ ಸದಸ್ಯರು ಅನೇಕ ವೇದಿಕೆ ಮೂಲಕ ವ್ಯಕ್ತಪಡಿಸಿದ್ದಾರೆ.
ಏಕ್ ಲವ್ ಯಾ ಎಂದಾಕ್ಷಣ ಮನಸ್ಸಿನಲ್ಲಿ ನಾನಾ ರೀತಿಯ ಭಾವನೆಗಳನ್ನು ಹೊರಹೊಮ್ಮುತ್ತದೆ, ಪ್ರೇಕ್ಷಕರನ್ನು ಕುತೂಹಲದ ಗುಂಗಿನಲ್ಲಿ ತೇಲುವಂತೆ ಮಾಡಿರುವುದು ಈ ಟೈಟಲ್ ಗೆ ಇರುವ ಶಕ್ತಿ ಎಂದು ಹೇಳಿದರೆ ತಪ್ಪಾಗಲಾರದು.
ಚಿತ್ರದ ಮುಖ್ಯ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದು, ವಿಭಿನ್ನ ಪಾತ್ರದ ಮೂಲಕ ಮಿಂಚಿದ್ದಾರೆ.ಮೊದಲ ಬಾರಿ ನಾಯಕ ನಟನಾಗಿ ರಾಣಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೊದಲ ಲುಕ್ ನಲ್ಲಿಯೇ ಅಭಿಮಾನಿಗಳ ಬಳಗವನ್ನೆ ಸೃಷ್ಟಿಸಿದ್ದಾರೆ. ಹಾಗೂ ಈ ಚಿತ್ರದಲ್ಲಿ ಇಬ್ಬರು ನಟಿಯರು ಕಾಣಿಸಿಕೊಂಡಿದ್ದು, ರೀಶ್ಮಾ ನಾಣಯ್ಯ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರತಂಡ ಇಪತ್ತು ದಿನ ಭಾರತದ ಕಾಶ್ಮೀರ್,ಲೇಹ್ ಲಡ್ಹಾಕ್ ,ರಾಜಸ್ಥಾನ್,ಗುಜರಾತ್ ಕಚ್ ಹಾಗೂ ಮುಂತಾದ ಮೈಮನ ಸೆಳೆಯುವ ತಾಣಗಳನ್ನು ಪ್ರಯಾಣಿಸಿ ಚಿತ್ರೀಕರಣ ಮಾಡಿರುತ್ತಾರೆ.130 ದಿನಗಳ ಸತತ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರಯುವುದರಲ್ಲಿ ಅನುಮಾನವೇ ಇಲ್ಲ.
ಏಕ್ ಲವ್ ಯಾ ಚಿತ್ರದ ಸಂಪೂರ್ಣ ಸಂಭಾಷಣೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿ ಮಾತಾಗಿಸಿದ ಪ್ರತಿಭಾನ್ವಿತ ಸಾಹಿತ್ಯಗಾರ ವಿಜಯ್ ಈಶ್ವರ್ ಸಂಭಾಷಣೆ ಜೊತೆಗೆ ಎರಡು ಹಾಡುಗಳನ್ನು ರಚಿಸಿದ್ದಾರೆ.' ಹಾಡು ನಾನು ಬರೆದದ್ದು ಅಲ್ಲ ಪ್ರೇಮ್ ಸರ್ ಬರೆಸಿದ್ದು' ಎಂದು ಹಲವಾರು ವೇದಿಕೆಯಲ್ಲಿ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಏಕ್ ಲವ್ ಯಾ ಸಿನಿಮಾವನ್ನು ಜೇನಿನಂತೆ ಪ್ರೇಕ್ಷಕರು ಸವಿಯಬೇಕಾದರೇ ದುಂಬಿಯ ಅವಶ್ಯಕತೆ ಅತೀ ಮುಖ್ಯಸಿನಿಮಾ ಅದ್ಭುತವಾಗಿ ಮೂಡಿಬರಲು ಹಲವಾರು ಕಲಾವಿದರ ಪಾತ್ರವಿದೆ.
ಮಾತಿಲ್ಲ ಕಥೆ ಇಲ್ಲದ ಪ್ರೇಮರಾಗದಲ್ಲಿ Ek Love Ya ರಾಣಾ!ಟಗರು ಚಿತ್ರದಂತಹ ಹಿಟ್ ಚಿತ್ರಗಳನ್ನು ತೆರೆ ಮೇಲೆ ಸುಂದರವಾಗಿ ಮೂಡಿ ಬರುವಂತೆ ಮಾಡಿದ ಪ್ರತಿಭಾನ್ವಿತ ಛಾಯಾಗ್ರಾಹಕ ಮಹೇಂದ್ರ ಸಿಂಹ ಈ ಚಿತ್ರದ ಛಾಯಗ್ರಾಹಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಆರು ಹಾಡುಗಳು ಹೆಸರಾಂತ ಖ್ಯಾತ ಗಾಯಕಿ ಮಂಗ್ಲಿ, ಅರ್ಮಾನ್ ಮಲಿಕ್, ಶಂಕರ್ ಮಹಾದೇವನ್,ಐಶ್ವರ್ಯ ರಂಗನಾಥ್ ಹಾಗೂ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಹಾಡಿದ 'ಹೇಳು ಯಾಕೆ' ಹಾಡು ಮಿಲಿಯನ್ ಗಟ್ಟಲೆ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿರುವುದರ ಜೊತೆಗೆ, ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುತ್ತಾರೆ.
Ek Love Ya Trailer: ಜೋಗಿ ಪ್ರೇಮ್ ದೃಶ್ಯ ವೈಭವದಲ್ಲಿ ಮಿಂಚಿದ ರಾಣಾ-ರಚಿತಾ-ರೀಷ್ಮಾ!ಏಕ್ ಲವ್ ಯಾ ಅಂದ್ರೆ ಪ್ರೇಮ ಕಥೆ ಎಂಬುವುದು ಸಿನಿ ಪ್ರಿಯರಿಗೆ ತಿಳಿದ ಸಂಗತಿ ವಿಜಯ್ ಈಶ್ವರ್ ಬರೆದ 'ಮತ್ತೆನೋಡಬೇಡ ' ಮತ್ತೊಂದು ಹಾಡು 19 ರಂದು ನಾಳೆ ಸಂಜೆ 5 ಗಂಟೆಗೆ ಬಿಡುಗಡೆಗೆ ತಯಾರಾಗಿದೆ
ಈ ಹಾಡನ್ನು ಬಾಲಿವುಡ್ ನ ಹೆಸರಾಂತ ಗಾಯಕ ಸೋನು ನಿಗಮ್ ಮತ್ತು ಸೈಂಧವಿ ಹಾಡಿದ್ದು, ಆರು ಹಾಡುಗಳ ಹಾಗೆ ಈ ಹಾಡು ಕೂಡ ಪ್ರೇಕ್ಷಕರ ಕಿವಿ ಇಂಪಾಗಿಸಲು ಸಜ್ಜಾಗುತ್ತಿದೆ.
ಇದೇ ಫೆಬ್ರವರಿ 24 ರಂದು ರಾಜ್ಯಾದ್ಯಂತ ಏಕ್ ಲವ್ ಯಾ ಸಿನಿಮಾ ತೆರೆ ಮೇಲೆ ಮಿಂಚಲಿದ್ದು, ಎಲ್ಲಾ ಕಲಾ ಪ್ರೇಮಿಗಳು ನಮ್ಮ ಚಿತ್ರತಂಡಕ್ಕೆ ಪ್ರೀತಿಯಿಂದ ಶುಭ ಹಾರೈಸುವಂತೆ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.