'ರಾವಣಾಯಣ' ಆಯ್ತಾ ರಾಮಾಯಣ? ರಾವಣರಾಜ್ಯದಲ್ಲೀಗ ದುರ್ಯೋಧನನ ಫ್ಯಾನ್ಸ್ ತುಂಟಾಟ; ಕಹಾನಿ ಮೆ ಟ್ವಿಸ್ಟ್!

Published : Aug 02, 2026, 04:32 PM IST
Darshan Yash

ಸಾರಾಂಶ

ನಟ ದರ್ಶನ್ ಐತಿಹಾಸಿಕ ಸಿನಿಮಾ ಸಂಗೊಳ್ಳಿ ರಾಯಣ್ಣ ರೋಲ್ ಮಾಡಿದ್ರು. ಅಂದು ಸಂಗೊಳ್ಳಿ ರಾಯಣ್ಣ ಲುಕ್ ನಲ್ಲಿ ದರ್ಶನ್​ಅವರನ್ನು ನೋಡಿ ಬಹಳಷ್ಟು ಜನರು ಮೆಚ್ಚಿಕೊಂಡಿದ್ರು. ಈಗ ಅದೇ ಸಿನಿರಸಿಕರು ನಟ ಯಶ್ ಅವರನ್ನು ರಾವಣಾಸುರನ ಪಾತ್ರದಲ್ಲಿ ನೋಡಿ ಶಹಬ್ಬಾಸ್ ಎಂದಿದ್ದಾರೆ. ಆದರೆ ಏನಾಗ್ತಿದೆ ಈಗ?

Ramayana Trailer- Yash in Ravana Role- Darshan in Duryodhana Role-Comparison Social Media War:

ಪೌರಾಣಿಕ ಪಾತ್ರದಲ್ಲಿ ಯಶ್ ​VS ದರ್ಶನ್.. ಯಾರು ಬೆಸ್ಟ್? ಕರುನಾಡಲ್ಲಿ ರಾವಣ vs ಧುರ್ಯೋಧನ ಹೊಸ ಯುದ್ಧ ಶುರುವಾಯ್ತಾ?! ರಾಮಾಯಣ ಟ್ರೈಲರ್ ರಿಲೀಸ್ ಆಗಿದೆ.. ಈ ಟ್ರೈಲರ್​ ಬಂದಿದ್ದೇ ಬಂದಿದ್ದು ರಾವಣನ ಅಭಿಮಾನಿಗಳು ಹಾಗು ಧುರ್ಯೋಧನನ ಡೈ ಹಾರ್ಡ್​ ಫ್ಯಾನ್ಸ್​ ದಾಂದಲೆ ಮಾಡುತ್ತಿದ್ದಾರೆ. ಯಾರು ಹೆಚ್ಚು ಯಾರು ಕಡಿಮೆ ಅಂತ ಕಿತ್ತಾಟಕ್ಕೆ ಕಾಲ್ಕೆರೆದಿದ್ದಾರೆ. ಅಷ್ಟಕ್ಕೂ ಈ ರಾಮಾಯಣದ ರಾವಣನ ಮೇಲೆ ಧುರ್ಯೋಧನ ದರ್ಶನ್​ಫ್ಯಾನ್ಸ್​ ಮುಗಿ ಬಿದ್ದಿದ್ದು ಯಾಕೆ.. ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಕಹಾನಿ...

ರಾಮಾಯಣದಲ್ಲಿ ರಾವಣಾಸುರ ಯಶ್ ಅಟ್ಟಹಾಸ..!

ರಾಮರಾಜ್ಯದಲ್ಲಿ ಗಹಗಹಿಸಿದ ಧುರ್ಯೋಧನ ಫ್ಯಾನ್ಸ್!

ಪೌರಾಣಿಕ ಪಾತ್ರದಲ್ಲಿ ಯಶ್ ​VS ದರ್ಶನ್.. ಯಾರು ಬೆಸ್ಟ್​..? ಯಶ್-ದರ್ಶನ್ ಅಭಿಮಾನಿಗಳ ಸೋಷಿಯಲ್ ಮೀಡಿಯಾ ತುಂಟಾಟ!

ಈಗ ವಿಶ್ವ ಸಿನಿ ಜಗತ್ತಲ್ಲಿ ರಾಮಾಯಣ ಸಿನಿಮಾದ್ದೇ ಪಾರುಪತ್ಯ.. ರಾಮಾಯಣ ಕತೆ ನಮ್ಮ ಭಾರತೀಯರಿಗೆ ಚೆನ್ನಾಗಿಯೇ ಗೊತ್ತಿದೆ. ಆದ್ರೆ ವಿದೇಶಿಗರಿಗೆ ಈ ನಮ್ಮ ಪೌರಾಣಿಕ ಕಥೆಯನ್ನ ತಿಳಿಸಬೇಕಿದೆ. ಹೀಗಾಗಿ ನಮ್ಮ ರಾಕಿಂಗ್ ಸ್ಟಾರ್ ಯಶ್​ರಾವಣನಾಗಿ ಅಟ್ಟಹಾಸ ಮೆರೆದಿದ್ದು, ಈ ರಾವಣನಿಗೆ ಎಲ್ಲಡೆಯಿಂದ ಭರ್ಜರಿ ಸ್ವಾಗತ ಸಿಕ್ಕಿದೆ...

ಕರುನಾಡಲ್ಲಿ ರಾವಣ vs ಧುರ್ಯೋಧನ ಹೊಸ ಯುದ್ಧ..!

ಲಂಕಾದಿಪತಿ ರಾವಣನಿಗೇನೋ ಎಲ್ಲಾ ಕಡೆಯಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಆದ್ರೆ ಈಗ ವಿಷಯ ಅದಲ್ಲ.. ನಮ್ಮ ಕರುನಾಡಲ್ಲಿ ರಾವಣಾ ವರ್ಸಸ್​ ಧುರ್ಯೋಧನ ಯಾರು ಬೆಸ್ಟ್​ ಅನ್ನೋ ಹೊಸ ಯುದ್ಧವೊಂದು ಏರ್ಪಟ್ಟಿದೆ. ಈ ಯುದ್ಧದಲ್ಲಿ ಭಾಗೀದಾರರಾಗಿರೋದು ರಾವಣಾಸುರ ಯಶ್​ರ ಅಪ್ಪಟ ಅಭಿಮಾನಿಗಳು ಹಾಗು ಧುರ್ಯೋಧನ ದರ್ಶನ್​ರ ಡೈ ಹಾರ್ಡ್ಕೋರ್ ಫ್ಯಾನ್ಸ್‌ಗಳು..

ಯಶ್ ರಾವಣನಾಗಿ ರಾಜ್ಯಭಾರ ಮಾಡುತ್ತಾರೆ ಅಂದಾಗ ಈ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋ ದೊಡ್ಡ ಕುತೂಹಲ ಇತ್ತು. ಆ ನಿರೀಕ್ಷೆಯನ್ನ ಸಾವಿರ ಪಟ್ಟು ಫುಲ್​ಫಿಲ್ ಮಾಡಿದ್ದಾರೆ ಯಶ್.. ನೋಡೋಕೆ ಇವರೇ 'ರಾವಣ' ಇರಬಹುದೇನೋ ಎನ್ನುವಂತೆ ಕಾಣೋ ರಾಕಿಭಾಯ್ ಸಖತ್ ಥ್ರಿಲ್ ಹುಟ್ಟಿಸುತ್ತಾರೆ. ಸಿಂಹದ ಎದುರು ರಾಕಿ ಗಹಗಹಿಸಿದ್ದನ್ನು ನೋಡಿದ್ರೆ ಮೈ ಝಲ್ ಎನ್ನುತ್ತೆ.. ಅಬ್ಬಬ್ಬಾ.. ಯಶ್​ ಥೇಟ್​ರಾವಣನೇ ಅನ್ನುತ್ತಿದ್ದೆ ಸಿನಿ ಜಗತ್ತು...

ಲಂಕಾಧಿಪತಿ ಮೇಲೆ ಮುಗಿ ಬಿದ್ದ ಧುರ್ಯೋಧನ ಭಕ್ತರು..!

ಹೌದು, ಲಂಕಾಸುರ ರಾವಣ ಈಗ ಕರುನಾಡಲ್ಲಿ ಹೊಸದೊಂದು ವಾರ್ ಗೆ ಕಾರಣ ಆಗಿದ್ದಾರೆ. ಅದು ಫ್ಯಾನ್​ವಾರ್.. ಯಶ್-ದರ್ಶನ್​ ಜೋಡೆತ್ತುಗಳಂತೆ ಸ್ನೇಹಿತರಾಗಿದ್ರೂ ಕೂಡ ಈ ಫ್ಯಾನ್ಸ್‌ಗಳು ನಮ್ಮ ಬಾಸ್ ಹೆಚ್ಚು, ನಮ್ಮ ಬಾಸ್ ಹೆಚ್ಚು ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಕಿತ್ತಾಡೋದು ಹೊಸ ವಿಷಯವೇನಲ್ಲ. ಅದು ಮೊದಲಿನಿಂದಲೂ ಇದೆ, ಹೊಸದೇನೂ ಅಲ್ಲ. ಈಗಲೂ ಅದೇ ಆಗಿದೆ! ಇಷ್ಟು ದಿನ ದರ್ಶನ್​ಬಿಟ್ರೆ ಪೌರಾಣಿಕ ಪಾತ್ರಕ್ಕೆ ಮತ್ಯಾರೂ ಸರಿಸಾಟಿ ಇಲ್ಲ ಎನ್ನುತ್ತಿದ್ದವರಿಗೆ ಯಶ್ ರಾವಣನಾಗಿ ಅರ್ಭಟಿಸಿದ್ದು ಸ್ವಲ್ಪ ಕಷ್ಟವಾಗಿದೆಯೇ? ದರ್ಶನ್ ಮಾಡಿದ್ದ ಧುರ್ಯೋಧನ ರೋಲ್​ಹಾಗು ಯಶ್ ರಾವಣನ ಪಾತ್ರವನ್ನ ಕಂಪೇರ್ ಮಾಡಿಕೊಂಡು ಯಾರು ಬೆಸ್ಟ್ ಅಂತ ಚರ್ಚೆಗೆ ಇಂಟರ್‌ನೆಟ್‌ಗೆ ಬಂದಿದ್ದಾರೆ.

ನಟ ದರ್ಶನ್ ಐತಿಹಾಸಿಕ ಸಿನಿಮಾ ಸಂಗೊಳ್ಳಿ ರಾಯಣ್ಣ ರೋಲ್ ಮಾಡಿದ್ರು. ಅಂದು ಸಂಗೊಳ್ಳಿ ರಾಯಣ್ಣ ಲುಕ್ ನಲ್ಲಿ ದರ್ಶನ್​ಅವರನ್ನು ನೋಡಿ ಬಹಳಷ್ಟು ಜನರು ಮೆಚ್ಚಿಕೊಂಡಿದ್ರು. ಈಗ ಅದೇ ಸಿನಿರಸಿಕರು ನಟ ಯಶ್ ಅವರನ್ನು ರಾವಣಾಸುರನ ಪಾತ್ರದಲ್ಲಿ ನೋಡಿ ಶಹಬ್ಬಾಸ್ ಎಂದಿದ್ದಾರೆ. ಅದರಲ್ಲೇನೂ ಸಮಸ್ಯೆ ಇಲ್ಲ. ಆದರೆ, ಈ ಬಗ್ಗೆ ಅವರಿಬ್ಬರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಣ್ಣ ಯುದ್ಧ ಶುರುಮಾಡಿಕೊಂಡು ತುಂಟಾಟ ಆಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಪ್ರಿಯರಿಗೆ ಊಟ ಕೊಡುತ್ತಿದ್ದಾರೆ. ಆದರೆ, ಇದು ದೊಡ್ಡಮಟ್ಟದ ಕಿತ್ತಾಟಕ್ಕೇನೂ ಕಾರಣವಾಗಿಲ್ಲ.

ಇನ್ನು, ಸಿನಿಮಾದಲ್ಲಿನ ಪೌರಾಣಿಕ ಪಾತ್ರದ ಬಗ್ಗೆ ಹೇಳುವುದಾದರೆ- ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳಲ್ಲಿ ಇಡೀ ವಿಶ್ವವೇ ಮೆಚ್ಚುವಂತೆ ನಟಿಸಿದವರು ಡಾ ರಾಜ್‌ಕುಮಾರ್. ಕನ್ನಡದ ಅಣ್ಣಾವ್ರ ಮಾಡಿದ ಐತಿಹಾಸಿಕ ಪೌರಾಣಿಕ ಪಾತ್ರಗಳೂ ಇಂದಿಗೂ ಅಜರಾಮರ. ಹಾಗಂತ, ಅವರಿಗೆ ಬೇರೆ ಯಾರನ್ನೋ ಹೋಲಿಕೆ ಮಾಡಿ ಮಾತಾಡಬೇಕಿಲ್ಲ, ಚರ್ಚೆ ಮಾಡಬೇಕಿಲ್ಲ. ಅವರವರ ಸಾಧನೆ ಅವರವರದೇ.. ಭೂತ ಬದಲಾಗಲ್ಲ, ಆದರೆ ವರ್ತಮಾನದಲ್ಲಿ ಸಂಗತಿಗಳು ಜರುಗುತ್ತಿವೆ, ಭವಿಷ್ಯ ಬದಲಾಗುತ್ತದೆ.. ಸೋ, ಕಿತ್ತಾಟವಾದರೆ ಅದು ಇಷ್ಟೇ ಸಣ್ಣದಾಗಿರಲಿ, ಹೀಗೆ ಬಂದು ಹಾಗೆ ಹೋಗಲಿ ಎನ್ನುತ್ತಿದ್ದಾರೆ ಸಿನಿಪ್ರಿಯರು!

‘ಸಿನಿಮಾ ಹಂಗಾಮ' ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಸುದೀಪ್ ಮೇಲಿನ ಕೋಪವನ್ನು ಸಾನ್ವಿ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ': ಚಕ್ರವರ್ತಿ ಚಂದ್ರಚೂಡ್‌ ಕಿಡಿ
'ಉಪೇಂದ್ರ' ಚಿತ್ರದ ಶೂಟಿಂಗ್ ನೆನಪು ಬಿಚ್ಚಿಟ್ಟ ನಟಿ ಪ್ರೇಮಾ: ರಿಯಲ್ ಸ್ಟಾರ್ ಬಗ್ಗೆ ಹೀಗಾ ಹೇಳೋದು?