
ಕರ್ನಾಟಕದಲ್ಲಿ 'ರಾಮಾಯಣ'ಗೆ ಭರ್ಜರಿ 50 ಕೋಟಿ ಗಳಿಕೆ; ಕನ್ನಡ ಡಬ್ಬಿಂಗ್ ಸಿನಿಮಾಗಳ ಇತಿಹಾಸದಲ್ಲೇ ಹೊಸ ದಾಖಲೆ! ಕೇವಲ ಕನ್ನಡ ಭಾಷೆಯಿಂದಲೇ ಎಷ್ಟು ಕಲೆಕ್ಷನ್ ಆಯ್ತು ಗೊತ್ತಾ?
ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ' (Ramayana) ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಅದ್ದೂರಿ ಸಿನಿಮಾ ಬಿಡುಗಡೆಯಾದ ಮೂರೇ ದಿನಗಳಲ್ಲಿ ಕರ್ನಾಟಕದಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ವಿಶೇಷವೆಂದರೆ, ಕನ್ನಡಿಗರಿಂದ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳು ಮುಂದುವರಿದಿದ್ದು, ಯಶ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
'ರಾಮಾಯಣ' ಚಿತ್ರದ ಕರ್ನಾಟಕದ ಗಳಿಕೆಯಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿ ಪ್ರಮುಖ ಪಾತ್ರ ವಹಿಸಿದೆ. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಕನ್ನಡ ಅವತರಣಿಕೆಯೊಂದರಿಂದಲೇ ಬರೋಬ್ಬರಿ 25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಪರಭಾಷೆಯ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿ ಇಷ್ಟು ಕಡಿಮೆ ಅವಧಿಯಲ್ಲಿ 25 ಕೋಟಿ ಗಳಿಸಿರುವುದು ವಿಶೇಷ ದಾಖಲೆಯಾಗಿದೆ. ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ಈ ಯಶಸ್ಸಿಗೆ ದೊಡ್ಡ ಶಕ್ತಿಯಾಗಿದೆ. ಕರುನಾಡಿನಲ್ಲಿ ಯಶ್‌ಗಿರುವ ಅಭಿಮಾನಿ ಬಳಗ ಚಿತ್ರಕ್ಕೆ ಭರ್ಜರಿ ಬೆಂಬಲ ನೀಡುತ್ತಿದೆ.
ಮೂರು ದಿನಗಳಲ್ಲಿ ಭಾರತದ ಗಳಿಕೆ 218 ಕೋಟಿ!
ದೇಶಾದ್ಯಂತವೂ 'ರಾಮಾಯಣ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮೊದಲ ದಿನ ಭಾರತದಲ್ಲಿ 64.85 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ಎರಡನೇ ದಿನ 48.05 ಕೋಟಿ ಕಲೆಕ್ಷನ್ ಮಾಡಿತ್ತು. ಮೂರನೇ ದಿನ ಶನಿವಾರ ಮತ್ತೆ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 69.80 ಕೋಟಿ ರೂಪಾಯಿ ನಿವ್ವಳ ಗಳಿಕೆ ದಾಖಲಿಸಿದೆ. ಈ ಮೂಲಕ ಮೂರು ದಿನಗಳ ಭಾರತದ ಒಟ್ಟು ನಿವ್ವಳ ಕಲೆಕ್ಷನ್ 218.25 ಕೋಟಿ ರೂಪಾಯಿಗೆ ತಲುಪಿದೆ.
ಮೂರನೇ ದಿನ ಹಿಂದಿ ಆವೃತ್ತಿ 19,927 ಶೋಗಳಿಂದ 53 ಕೋಟಿ ಗಳಿಸಿದ್ದರೆ, ಕನ್ನಡ ಆವೃತ್ತಿ 907 ಶೋಗಳಿಂದ 6.30 ಕೋಟಿ ಬಾಚಿಕೊಂಡಿದೆ. ತೆಲುಗು ಆವೃತ್ತಿ 6 ಕೋಟಿ ಹಾಗೂ ಮಲಯಾಳಂ ಆವೃತ್ತಿ 2 ಕೋಟಿ ಗಳಿಸಿವೆ. ವಿದೇಶಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಮೂರನೇ ದಿನವೇ 60 ಕೋಟಿ ಗಳಿಸಿದೆ. ವಿದೇಶಿ ಮಾರುಕಟ್ಟೆಯ ಒಟ್ಟು ಗಳಿಕೆ 157.25 ಕೋಟಿಗೆ ತಲುಪಿದೆ. ಇದರೊಂದಿಗೆ ವಿಶ್ವಾದ್ಯಂತ ಚಿತ್ರದ ಗ್ರಾಸ್ ಕಲೆಕ್ಷನ್ 375.50 ಕೋಟಿ ರೂಪಾಯಿ ದಾಟಿದೆ. ಇದೇ ವೇಗ ಮುಂದುವರಿದರೆ ಸಿನಿಮಾ ಶೀಘ್ರದಲ್ಲೇ 500 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.