ಕನ್ನಡದ ಮೊದಲ ದೀರ್ಘ ವೆಬ್ ಸರಣಿ ‘ಕಾರ್ಪೊರೇಟ್ ಲವ್ ಸ್ಟೋರಿ’.. ಪ್ರಿಯಾಂಕಾ ಉಪೇಂದ್ರ ಎಂಟ್ರಿ

Published : Nov 08, 2026, 09:47 PM IST
Corporate Love Story

ಸಾರಾಂಶ

ಪನ್ನಗ ಭರಣ ನಿರ್ದೇಶನದ ಕನ್ನಡದ ಮೊದಲ ದೀರ್ಘ ಸ್ವರೂಪದ ವೆಬ್ ಸರಣಿ ‘ಕಾರ್ಪೊರೇಟ್ ಲವ್ ಸ್ಟೋರಿ’ ನವೆಂಬರ್ 20ರಿಂದ ZEE5ನಲ್ಲಿ ಪ್ರಸಾರವಾಗಲಿದೆ. ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ…

ಪನ್ನಗ ಭರಣ ನಿರ್ದೇಶನದಲ್ಲಿ ಕನ್ನಡದ ಮೊದಲ ದೀರ್ಘ ವೆಬ್‌ ಸರಣಿ ಮೂಡಿ ಬರುತ್ತಿದೆ. ‘ಕಾರ್ಪೊರೇಟ್‌ ಲವ್‌ ಸ್ಟೋರಿ’ ಎಂಬುದು ವೆಬ್‌ ಸರಣಿಯ ಹೆಸರು. ಕನ್ನಡ ಜೀ5ನಲ್ಲಿ ನವೆಂಬರ್‌ 20ರಿಂದ ಪ್ರಸಾರಗೊಳ್ಳಲಿದ್ದು, ನಟಿ ಪ್ರಿಯಾಂಕ ಉಪೇಂದ್ರ ಅವರು ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ಸ್ಟಾರ್ಟಪ್‌ ಸಂಸ್ಕೃತಿಯ ಹಿನ್ನೆಲೆಯ ಪ್ರೇಮಕಥೆಯನ್ನು ಇಲ್ಲಿ ನೋಡಬಹುದು.

ಇಂದಿನ ಯುವಜನತೆಯ ಪ್ರೀತಿ, ವೃತ್ತಿ ಬದುಕಿನ ಮಹತ್ವಾಕಾಂಕ್ಷೆ, ಆಧುನಿಕ ಸಂಬಂಧಗಳ ಜಟಿಲತೆಗಳನ್ನು ಒಳಗೊಂಡ, ಕಚೇರಿಯ ಕಟ್ಟುಪಾಡುಗಳು, ಮಹತ್ವಾಕಾಂಕ್ಷೆ, ವೈಯಕ್ತಿಕ ನಿರೀಕ್ಷೆಗಳ ನಡುವೆ ಪರೀಕ್ಷೆಗೆ ಒಳಗಾಗುವ ಇಬ್ಬರು ಸಹೋದ್ಯೋಗಿಗಳ ಪ್ರೇಮಕಥೆಯ ಈ ಸರಣಿಯಲ್ಲಿ ಸಿತಾರಾ ದಾದ್‌ ಹಾಗೂ ಪ್ರಣವ್‌ ಶ್ರೀಧರ್‌ ಜೋಡಿ.

ಪ್ರೀತಿ ಮತ್ತು ಸವಾಲುಗಳ ತಾಣ

ಪನ್ನಗ ಭರಣ, ‘ನಾವು ದಿನದ ಬಹುಪಾಲು ಸಮಯವನ್ನು ಕಳೆಯುವ ಕೆಲಸದ ಸ್ಥಳವೇ ಸ್ನೇಹ, ಪ್ರೀತಿ ಮತ್ತು ಸವಾಲುಗಳ ತಾಣವಾಗಿರುತ್ತದೆ. ವಿಭಿನ್ನ ವ್ಯಕ್ತಿತ್ವ ಹೊಂದಿರುವ ಇಬ್ಬರು ತಮ್ಮತನವನ್ನು ಕಳೆದುಕೊಳ್ಳದೆ ಪ್ರೀತಿಯ ಹಾದಿಯಲ್ಲಿ ಹೇಗೆ ಮುನ್ನಡೆಯುತ್ತಾರೆ ಎಂಬುದನ್ನು ನಿತ್ಯಾ ಹಾಗೂ ಅರ್ಜುನ್‌ ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದೇವೆ’ ಎಂದು ಹೇಳುತ್ತಾರೆ.

ನನಗೆ ತುಂಬಾ ಇಷ್ಟವಾಯಿತು

ನಟಿ ಪ್ರಿಯಾಂಕಾ ಉಪೇಂದ್ರ, ‘ಕೆಲಸದ ಸ್ಥಳದಲ್ಲಿ ವೈಯಕ್ತಿಕ ಹಾಗೂ ವೃತ್ತಿಪರ ನಿರ್ಧಾರಗಳು ಪರಸ್ಪರ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ದೈನಂದಿನ ಜೀವನದ ದೃಷ್ಟಿಕೋನದಿಂದ ತೋರಿಸಿರುವ ರೀತಿ ನನಗೆ ತುಂಬಾ ಇಷ್ಟವಾಯಿತು’ ಎಂದರು. ಜೀ 5ನ ಕನ್ನಡದ ಬಿಸಿನೆಸ್‌ ಮುಖ್ಯಸ್ಥ ದೀಪಕ್‌ ಶ್ರೀರಾಮುಲು, ‘ಕಾರ್ಪೊರೇಟ್ ಲವ್ ಸ್ಟೋರಿ ಕನ್ನಡದ ಮೊದಲ ದೀರ್ಘ ಸ್ವರೂಪದ ಪ್ರೇಮಕತೆಯ ಸರಣಿಯಾಗಿದೆ.

ಇನ್ನು ಆಪ್ತವೆನಿಸುವ ಪಾತ್ರಗಳು ಮತ್ತು ಆಕರ್ಷಕ ನಿರೂಪಣೆಯ ಮೂಲಕ, ಇಂದಿನ ವೇಗದ ಜಗತ್ತಿನಲ್ಲಿ ಪ್ರೀತಿ ಹಾಗೂ ವೃತ್ತಿಪರ ಯಶಸ್ಸನ್ನು ಸರಿದೂಗಿಸುವ ಸಂಕೀರ್ಣತೆಯನ್ನು ಇದು ಪರಿಣಾಮಕಾರಿಯಾಗಿ ಕಟ್ಟಿಕೊಡಲಿದ್ದು, ಪ್ರತಿಯೊಬ್ಬ ಪ್ರೇಕ್ಷಕನಿಗೂ ಸುಲಭವಾಗಿ ತಲುಪಲಿದೆ’ ಎನ್ನುತ್ತಾರೆ. ಫಿಲ್ಮಿ ಫೆಲೋ ಸ್ಟುಡಿಯೋಜ್‌ ಸಂಸ್ಥೆ ಈ ವಬ್‌ ಸರಣಿ ನಿರ್ಮಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನಂತ್‌ ನಾಗ್‌ರ ಈ ಭಯಾನಕ ಚಿತ್ರ ನೋಡಿದ್ದಿರಾ: ಆಗಿನ ಕಾಲಕ್ಕೇ ಇಷ್ಟೊಂದು ಕೋಟಿ ಕಲೆಕ್ಷನ್ ಆಗಿತ್ತಾ?
ಮಗನ ಜೊತೆ ಮುದ್ದಾದ ಫೋಟೋಶೂಟ್​ ಮಾಡಿಸಿಕೊಂಡ ಮಹಾಲಕ್ಷ್ಮಿ- ರವೀಂದರ್​ ದಂಪತಿ: ಟ್ರೋಲಿಗರಿಗೆ ಛಡಿಯೇಟು