ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ

By Vaishnavi Chandrashekar  |  First Published Jan 14, 2025, 2:21 PM IST

ದರ್ಶನ್ ಪರ ಬ್ಯಾಟ್ ಬೀಸಿದ ರಕ್ಷಿತಾ. ತಂದೆ ಕಷ್ಟದಲ್ಲಿ ಇದ್ದಾಗ ಮೊದಲು ಸಹಾಯ ಮಾಡಿದ್ದೆ ದರ್ಶನ್. ಯಾರಿಗೂ ಗೊತ್ತಿರದ ಘಟನೆ ರಿವೀಲ್ ಮಾಡಿದ ನಟಿ ................. 


ನಟಿ ರಕ್ಷಿತಾ ಪ್ರೇಮ್ ಈ ವರ್ಷ ಸಂಕ್ರಾಂತಿ ಹಬ್ಬವನ್ನು ಕೆಡಿ ಚಿತ್ರತಂಡದ ಜೊತೆ ಆಚರಿಸುತ್ತಿದ್ದಾರೆ. ಈ ವೇಳೆ ತಮ್ಮ ಅಪ್ತ ಗೆಳೆಯ ದರ್ಶನ್ ಬಗ್ಗೆ ರಕ್ಷಿತಾ ಮಾತನಾಡಿದ್ದಾರೆ. ಈ ವರ್ಷ ಗೆಳೆಯನ ಜೀವನದಲ್ಲಿ ಸಂಭ್ರಮ ಮನೆ ಮಾಡಲಿ ಎಂದು ಆಶಿಸಿದ್ದಾರೆ.'ಸಡನ್ ಆಗಿ ಹುಷಾರಾಗಲು ಅಗಲ್ಲ. ತುಂಬಾ ಬೆನ್ನು ನೋವಿನಿಂದ ನರಳುತ್ತಿದ್ದಾನೆ. ನಾನು ಹೇಳಿದಂತೆ ಎಲ್ಲವೂ ಸಮಯ ತೆಗೆದುಕೊಳ್ಳುತ್ತದೆ ಹೀಗಾಗಿ ಚೇತರಿಸಿಕೊಳ್ಳಲು ದರ್ಶನ್‌ಗೂ ಸಮಯ ಬೇಕಾಗುತ್ತದೆ. ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಹೊಸ ವರ್ಷ ಸಂಕ್ರಾಂತಿ ಪ್ರಯುಕ್ತ ದರ್ಶನ ಜೀವನದಲ್ಲಿ ಪ್ರತಿಯೊಂದು ಒಳ್ಳೆಯದ್ದೇ ಆಗಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಕ್ಷಿತಾ ಮಾತನಾಡಿದ್ದಾರೆ. 

'ತುಂಬಾ ವರ್ಷಗಳ ಹಿಂದೆ ನಡೆದ ವಿಚಾರ ಹೇಳುತ್ತಿದ್ದೀನಿ. ನನ್ನ ತಂದೆ ಅವರ ಮನೆಯಲ್ಲಿ ದೊಡ್ಡಮ್ಮ ಇದ್ದರು, ಅವರು ಏನೋ ಒಂದು ಚೂರು ಡಿಪ್ರೆಶನ್‌ಗೆ ಬಂದು ಅವರಿಗೆ ಅವರೇ ಬೆಂಕಿ ಹಚ್ಚಿಕೊಂಡಿದ್ದರು. ಆ ಸಮದಲ್ಲಿ ತಂದೆ ನನಗೆ ಕರೆ ಮಾಡಿಲ್ಲ ಮೊದಲು ಕಾಲ್ ಮಾಡಿದ್ದೇ ದರ್ಶನ್‌ಗೆ. ಆಗ ದರ್ಶನ್ ಬಳಿ ಮಾರುತಿ 800 ಕಾರಿತ್ತು ಅದರಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆ ಸೇರಿಸಿದ್ದು ಅವನೇ. ಇವತ್ತಿನಿಂದ ಅಲ್ಲ ನನ್ನ ತಂದೆಗೆ ಕಷ್ಟ ಬಂದಾಗಿನಿಂದ ದರ್ಶನ್ ನಮ್ಮ ಜೊತೆಗಿದ್ದಾನೆ. ದರ್ಶನ್ ಬೇರೆ ಅಲ್ಲ ನಮ್ಮ ಫ್ಯಾಮಿಲಿನೇ. ನನಗೆ ಏನಾದರೂ ತೊಂದರೆ ಆದರೆ ಖಂಡಿತಾ ದರ್ಶನ್ ಬರುತ್ತಾರೆ ನನ್ನ ಪರವಿರುತ್ತಾನೆ. ಹಾಗೆಯೇ, ದರ್ಶನ್‌ಗೆ ಏನೇ ಆಗಲಿ ಅವನ ಪರ ನಾನಿದ್ದೀನಿ. ಇನ್ನು ಮುಂದೆ ಅವನಿಗೆ ಏನೂ ಆಗಲ್ಲ ಆಗಬಾರದು ಕೂಡ' ಎಂದು ರಕ್ಷಿತಾ ಹೇಳಿದ್ದಾರೆ. 

Tap to resize

Latest Videos

ಹೊಟ್ಟೆಯಲ್ಲಿದ್ದ ಮಗು ಎದೆಬಡಿತ ನಿಂತೋಗಿತ್ತು; ಮಗಳನ್ನು ಕಳೆದುಕೊಂಡು ಮಗನನ್ನು ಪಡೆದ ಘಟನೆ ನೆನೆದು ಅಮೃತಾ ಕಣ್ಣೀರು

'ದರ್ಶನ್ ಜೊತೆ ಹಲವಾರು ಸಲ ನೇರವಾಗಿ ಮಾತನಾಡಲು ಆಗಲ್ಲ ಆದರೆ ವಿಜಿ ಮುಖಾಂತರ ಮಾತನಾಡುತ್ತೀನಿ. ಅವನ ಜೀವನದಲ್ಲಿ ಎಲ್ಲಾ ಸರಿ ಹೋಗುತ್ತಿದೆ ಅನಿಸುತ್ತದೆ. ದರ್ಶನ್ ಮೇಲೆ ಆರೋಪ ಬಂದಾಗ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅಣ್ಣನ ದಾರಿಯಲ್ಲಿ ಸಾಗುತ್ತಿದ್ದೀನಿ ಏಕೆಂದರೆ ಎಲ್ಲದರಲ್ಲೂ ನಾನು ಪಾಸಿಟಿವ್ ಬಗ್ಗೆ ಮಾತ್ರ ಮಾತನಾಡುತ್ತೀನಿ. ದರ್ಶನ್‌ನ ಭೇಟಿ ಮಾಡಿದಾಗ ನಾನು ಏನೂ ಮಾತನಾಡಲಿಲ್ಲ ತಬ್ಬಿಕೊಂಡು ಬಂದೆ. ದರ್ಶನ್‌ ಬಗ್ಗೆ ನಾನು ಪಾಸಿಟಿವ್ ಮಾತ್ರ ಮಾತನಾಡುವುದು. ದರ್ಶನ್ ಬಗ್ಗೆ ಹಲವರು ಮಾತನಾಡುತ್ತಾರೆ ಆದರೆ ಅಕ್ಕಪಕ್ಕದಲ್ಲಿ ಇರುವವರಿಗೆ ಮಾತ್ರ ಅವನ ನೋವು ಗೊತ್ತಾಗುತ್ತದೆ. ವಿಜಯಲಕ್ಷ್ಮಿ ತುಂಬಾ ಸ್ಟ್ರಾಂಗ್ ಮಹಿಳೆ' ಎಂದಿದ್ದಾರೆ ರಕ್ಷಿತಾ. 

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?

click me!