ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಟ ಸರಿಗಮ ವಿಜಿ ಅವರನ್ನು ಯಶವಂತಪುರದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿ, ಅವರಿಗೆ ಸೂಕ್ತ ಚಿಕಿತ್ಸೆಗೆ ಏರ್ಪಾಟು ಮಾಡಲಾಗಿದೆ. ಹಣಕಾಸಿನ ಸಂಕಷ್ಟದಲ್ಲಿರುವ..
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಸರಿಗಮ ವಿಜಿ (Sarigama Viji) ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿದೆ. ಅವರನ್ನು ಇದೀಗ ಯಶವಂತಪುರದಲ್ಲಿರುವ ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಯ ಚಕ್ರವರ್ತಿ ಬಿರುದು ಪಡೆದಿದರುವ ಹಾಸ್ಯನಟ ಸರಿಗಮ ವಿಜಿ ಅವರು ಆರ್ಥಿಕ ಸಂಕಷ್ಟದಲ್ಲಿ ಕೂಡ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಗತಿಯನ್ನು ಅವರ ಮಗ ರೋಹಿತ್ ಅವರು ಮಾಧ್ಯಮಗ ಜೊತೆ ಹಂಚಿಕೊಂಡಿದ್ದಾರೆ.
ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಟ ಸರಿಗಮ ವಿಜಿ ಅವರನ್ನು ಯಶವಂತಪುರದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿ, ಅವರಿಗೆ ಸೂಕ್ತ ಚಿಕಿತ್ಸೆಗೆ ಏರ್ಪಾಟು ಮಾಡಲಾಗಿದೆ. ಹಣಕಾಸಿನ ಸಂಕಷ್ಟದಲ್ಲಿರುವ ಅವರಿಗೆ ಸರ್ಕಾರ ಹಣದ ಸಹಾಯ ನೀಡುವಂತೆ ಕೋರಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮಾತನ್ನಾಡಿರುವ ರೋಹಿತ್ ಅವರು 'ಕಳೆದ ಕೆವು ದಿನಗಳಿಂದ ನಮ್ಮ ತಂದೆಗೆ ಅನಾರೋಗ್ಯ ಕಾಡುತ್ತಿದೆ. ಕಳೆದ ಎರಡು ದಿನಗಳ ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಆದರೆ ಚಿಕಿತ್ಸೆ ಇನ್ನೂ ಮುಂದುವರೆದಿದೆ' ಎಂದಿದ್ದಾರೆ.
ಐದು ವರ್ಷಕ್ಕೇ ಇವ್ಳ ಮೇಲೆ ಕಣ್ಣು ಹಾಕಿದೀಯಲ್ಲ ನೀನು; ಅಂಬಿ ಡೈಲಾಗ್‌ಗೆ ಅಪ್ಪು ಬೆಪ್ಪು!
ಸಿಕ್ಕ ಮಾಹಿತಿ ಪ್ರಕಾರ, ನಟ ಸರಿಗಮ ವಿಜಿ ಅವರಿಗೆ ಬಹು ಅಂಗಾಂಗ ವೈಫಲ್ಯದ ಕಾಯಿಲೆ ಕಂಡುಬಂದಿದೆ ಎನ್ನಲಾಗಿದೆ. ಈಗಾಗಲೇ ಚಿಕಿತ್ಸೆ ಪ್ರಾರಂಭಿಸಲಾಗಿದ್ದು, ಸ್ವಲ್ಪ ಚೇತರಿಕೆ ಕಂಡುಬಂದಿದೆಯಂತೆ. ಕಳೆದ ಕೆಲವು ದಿನಗಳಿಂದ ಹಿರಿಯ ನಟ ಸರಿಗಮ ವಿಜಿ ಕುಟುಂಬಸ್ಥರು ಆಸ್ಪತ್ರೆಗೆ ಬಂದು ಅವರ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ ಎನ್ನಲಾಗಿದೆ. 'ಸಂಸಾರದಲ್ಲಿ ಸರಿಗಮ' ಎಂಬ ನಾಟಕದಿಂದ ಅವರು ಪ್ರಸಿದ್ಧಿ ಪಡೆದರು. ಆ ಕಾರಣಕ್ಕೆ ಅವರಿಗೆ 'ಸರಿಗಮ ವಿಜಿ' ಹೆಸರು ಖಾಯಂ ಆಗಿದೆ.
ಕಳೆದ ಆರೇಳು ದಿನಗಳಿಂದ ಹಿರಿಯ ನಟ ಸರಿಗಮ ವಿಜಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕತ್ಸೆ ಪಡೆಯುತ್ತಿದ್ದಾರಂತೆ. ಆದರೆ, ನಿನ್ನೆಯಿಂದ ಸ್ವಲ್ಪ ಚೇತರಿಸಿಕೊಂಡಿದ್ದು, ಜನರನ್ನು ಗುರುತಿಸುವ ಮಟ್ಟಿಗೆ ಪ್ರಜ್ಞೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಸ್ವತಃ ಅವರ ಮಗ ರೋಹಿತ್ 'ತಂದೆಯ ಸ್ಥಿತಿ ಈಗಲೂ ಕ್ರಿಟಿಕಲ್ ಆಗಿಯೇ ಇದೆ. ಆದರೆ. ಇದಕ್ಕೂ ಮೊದಲು ತುಂಬಾ ಸೀರಿಯಸ್ ಆಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿಕೊಂಡಿದೆ. ಇನ್ನೂ ಚಿಕಿತ್ಸೆ ಮುಂದುವರಿಯುತ್ತಿದೆ' ಎಂದಿದ್ದಾರೆ.
ಪುನೀತ್ ಜೊತೆ ದಿನಕರ್ ಮಾಡಬೇಕಿದ್ದ ಸಿನಿಮಾ ಅಪ್ಡೇಟ್; 'ಅಪ್ಪು' ಜಾಗದಲ್ಲಿ ಯಾರು?