ಕಿರಿಕ್ ಪಾರ್ಟಿ ಆದ್ಮೇಲೆ ಬ್ಯಾಚುಲರ್ ಪಾರ್ಟಿ; ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಲೂಸ್ ಮಾದಾ- ದೂದ್ ಪೇಡಾ!

By Vaishnavi Chandrashekar  |  First Published Dec 13, 2023, 11:36 AM IST

ಕಿರಿಕ್ ಪಾರ್ಟಿಗೆ ಟಗ್ ಕೊಡಲು ಬರುತ್ತಿದೆ ಬ್ಯಾಚುಲರ್ ಪಾರ್ಟಿ. ಫಸ್ಟ್‌ ಲುಕ್ ನೋಡಿ ಥ್ರಿಲ್ ಆದ ನೆಟ್ಟಿಗರು....


ಕಾಲೇಜ್ ದಿನಗಳನ್ನು ನೆನಪು ಮಾಡುವ ಸಾವಿರಾರೂ ಸಿನಿಮಾಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಮತ್ತು ಅವಾರ್ಡ್‌ಗಳನ್ನು ಪಡೆದಿದ್ದು ಕಿರಿಕ್ ಪಾರ್ಟಿ. ಕಿರಿಕ್ ಪಾರ್ಟಿ ನಂತರ ಹತ್ತು ಹಲವಾರು ಸಿನಿಮಾಗಳು ಬಂದರೂ ಅದೇನೋ ಮಿಸ್ಸಿಂಗ್ ಫೀಲ್ ಕೊಡುತ್ತಿತ್ತು. ಇಷ್ಟು ದಿನ ಕಾದಿದಕ್ಕೂ ಸಾರ್ಥಕ ಆಯ್ತು...ಏಕೆಂದರೆ ರಕ್ಷಿತ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅದುವೇ ಬ್ಯಾಚುಲರ್ ಪಾರ್ಟಿ.

ಹೌದು! ನೀವು ಆರ್ಡರ್ ಮಾಡಿರುವ ಫನ್ ಇಲ್ಲಿದೆ. ಬ್ಯಾಚುಲರ್ ಪಾರ್ಟಿ ಚಿತ್ರದ ಮೂಲಕ ಎಲ್ಲಾ ರೀತಿಯ ತರಲೆ ತಮಾಷೆಗಳನ್ನು ಎಂಜಾಯ್ ಮಾಡಲು ರೆಡಿಯಾಗಿರಿ. ಶೀಘ್ರದಲ್ಲಿ ಬರುತ್ತೀವಿ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ಬ್ಯಾಚುಲರ್ ಫಾರ್ಟಿ ಟೈಟಲ್ ಜೊತೆ ಫಸ್ಟ್‌ ಲುಕ್ ರಿವೀಲ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಯುಬಿ ಸಿಟಿ, ವಿಧಾನಸೌಧ ನೋಡಬಹುದು. ಈ ನಡುವೆ ಲೂಸ್ ಮಾದಾ ಯೋಗಿ ಓಡಿ ಬರುತ್ತಿರುವುದು, ದೂಡ್ ಪೇಡ ದಿಗಂತ್ ಕುಂಟುತ್ತಾ ಬರುತ್ತಿರುವುದು ನೋಡಬಹುದು. 

Tap to resize

Latest Videos

ಮನೆಗೆ ಮಹಾಲಕ್ಷ್ಮಿ ಬರಮಾಡಿಕೊಂಡ 'ಕಿರಿಕ್ ಪಾರ್ಟಿ' ಅಶ್ವಿನ್ ರಾವ್- ಕವಿತಾ ದಂಪತಿ!

ಚಿತ್ರದಲ್ಲಿ ಅಭಿ, ದಿಗಂತ್, ಲೂಸ್ ಮಾದಾ ಯೋಗಿ, ಅಚ್ಯುತ್ ಕುಮಾರ್, ಸಿರಿ ರವಿಕುಮಾರ್, ಅರ್ಜುನ್ ಸೇರಿದಂತೆ ದೊಡ್ಡ ಕಲಾವಿದರೇ ಸೇರಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗ 7 ವರ್ಷ ಕಳೆದ ನಂತರ ಬ್ಯಾಚುಲರ್ ಪಾರ್ಟಿ ಬರುತ್ತಿದೆ. ಪರಂವ ಸ್ಟುಡಿಯೋಸ್ ಮೂಲಕ ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತ್ ಮತ್ತು ರಿಷಬ್ ಕಾಂಬಿನೇಷನ್‌ ಇಷ್ಟ ಪಡುವ ಜನರಿಗೆ ಕೊಂಚ ಬೇಸರವಾದರೂ ಚಿತ್ರಕಥೆ ಮೇಲೆ ನಿರೀಕ್ಷೆ ಹೆಚ್ಚಿದೆ. 'ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ ಕಾಯುತ್ತೀವಿ, ಈ ಸಿನಿಮಾ ನೋಡಲೇಬೇಕು, ರಕ್ಷಿತ್ ನೀವು  ಗೆಸ್ಟಾಗಿ ಎಂಟ್ರಿ ಕೊಡಿ'ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

'ಕಿರಿಕ್ ಪಾರ್ಟಿ' ಸಂಭ್ರಮದಲ್ಲಿ ರಶ್ಮಿಕಾ ಹೆಸರು ಕೈ ಬಿಟ್ಟ ರಿಷಬ್; ಮುಂದುವರೆದ ಇಬ್ಬರ ಕೋಲ್ಡ್ ವಾರ್

ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡಿ, ಅರವಿಂದ್ ಅಯ್ಯರ್, ಅಶ್ವಿನ್ ರಾವ್ ಪಲ್ಲಕಿ, ಚಂದನ್ ಆಚಾರ್ ಸೇರಿದಂತೆ ಹಲವು ನಟಿಸಿದ್ದರು. ಪ್ರತಿಯೊಬ್ಬ ಕಲಾವಿದರಿಗೂ ಈ ಸಿನಿಮಾ ಬಿಗ್ ಬ್ರೇಕ್ ಕೊಟ್ಟಿತ್ತು. ಇಲ್ಲಿಂದ ಯಾರೂ ಹಿಂತಿರುಗು ನೋಡಿಲ್ಲ. 2017ರ ಫಿಲ್ಮ್‌ ಫೇರ್‌ನಲ್ಲಿ 5 ಅವಾರ್ಡ್ ಪಡೆದಿದೆ,  2017ರ IIFAನಲ್ಲಿ 5 ಅವಾರ್ಡ್ ಪಡೆದಿದೆ, 2017ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದೆ, ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರದಲ್ಲಿ 7 ಪ್ರಶಸ್ತಿ ಪಡೆದಿದೆ. ಹಿಸ್ಟರಿ ಕ್ರಿಯೇಟ್ ಮಾಡುತ್ತಿರುವ GenZ ಸಿನಿಮಾ ಇದಾಗಿತ್ತು ಬ್ಯಾಚುಲರ್ ಪಾರ್ಟಿಗೂ ಲಿಸ್ಟ್‌ಗೆ ಸೇರಲಿದೆ ಅಂತಾರೆ ಫ್ಯಾನ್ಸ್. 

 

click me!