
ಸ್ಯಾಂಡಲ್ ವುಡ್ ಮಟ್ಟಿಗೆ ಗುರುವಾರ ಹಬ್ಬದ ವಾತಾವಣ. ಬಹು ದಿನಗಳಿಂದ ಕಾಯುತ್ತಿದ್ದ 'ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಗುರುವಾರ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಮುಂದೆ ನುಗ್ಗುತ್ತಿದೆ.
ಸ್ಯಾಂಡಲ್ ವುಡ್ ನಟಿಯ ಮದುವೆಗೆ ಯಾರೆಲ್ಲ ಬಂದಿದ್ರು?
80ರ ದಶಕದ ರೆಟ್ರೋ ಲುಕ್ಲ್ಲಿ ರಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ಇಂದು ಐದೂ ಭಾಷೆಗಳಲ್ಲೂ ಎಎಸ್ಎನ್ ಟ್ರೈಲರ್ ಬಿಡುಗಡೆಯಾಗಿದೆ. 'ಅವನೇ ಶ್ರೀಮನ್ನಾರಾಯಣ’ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಹೊರಬರಲಿದ್ದು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.
ರಕ್ಷಿತ್ ಶೆಟ್ಟಿ ಜತೆ ಶಾನ್ವಿ ಶ್ರೀವಾಸ್ತವ್, ಪ್ರಮೋದ್ ಶೆಟ್ಟಿ, ಅಚ್ಚ್ಯುತ್ ಕುಮಾರ್, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ. ಈ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ತೆರೆಗಪ್ಪಳಿಸಲಿದೆ. ಕೆಜಿಎಫ್ ಮತ್ತು ಪೈಲ್ವಾನ್ ನಂತರ ಮತ್ತೆ ಅಷ್ಟೆ ಕುತೂಹಲ ಕೆರಳಿಸಿರುವ ಚಿತ್ರ ಇದಾಗಿದೆ.
ಖಡಕ್ ಡೈಲಾಗ್ ಗಳ ಮೂಲಕ ರಕ್ಷಿತ್ ಶೆಟ್ಟಿ ಎಂಟ್ರಿ ಕೊಡುತ್ತಾರೆ. ಹಾಗಾದರೆ ಟ್ರೇಲರ್ ಹೇಗಿದೆ ನೀವು ಒಮ್ಮೆ ನೋಡಿಕೊಂಡು ಬನ್ನಿ. ಅದು ಕನ್ನಡದಲ್ಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.