ಯಶ್ ನಂತರ ಇವರೇ ಜೂನಿಯರ್ ರಾಮಚಾರಿ; ಸಿನಿಮಾಗಳ ಪಟ್ಟಿ ಒಂದೆರಡಲ್ಲ!

By Web DeskFirst Published Nov 28, 2019, 2:06 PM IST
Highlights

'ಮಿಸ್ಟರ್ ಆ್ಯಂಡ್  ಮಿಸೆಸ್ ರಾಮಾಚಾರಿ' ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ! ಯಶ್ ರಾಧಿಕಾ ಜೋಡಿಯಂತೂ ಅದ್ಭುತವಾಗಿ ಮಿಂಚಿದ್ದರು. ಪಾಸ್ ಮಾರ್ಕ್‌ನಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿಕೊಂಡ ಪುಟಾಣಿ ರಾಮಚಾರಿ ಡೈಲಾಗ್ ಕೂಡಾ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಲಕ ರಾಮಚಾರಿಯಾಗಿ ನಟಿಸಿದ್ದು ಬೆಂಗಳೂರು ಹುಡುಗ ಹೇಮಂತ್ ಶ್ರೀನಿವಾಸ್.

ನಟನಾರಂಗಕ್ಕೆ ಅಚಾನಕ್ ಎಂಟ್ರಿಕೊಟ್ಟ ಅವರಿಗೆ ಈಗ ಇದೇ ಕ್ಷೇತ್ರಲ್ಲಿ ಮುಂದುವರೆಯಬೇಕೆಂಬುವುದು ಹೆಬ್ಬಯಕೆ! ಹೇಮಂತ್ ತಂದೆ ಶ್ರೀನಿವಾಸ್ ಎಂ. ಸರಕಾರಿ ನೌಕರ, ಮಗ ನಟನಾಗಿ ಗುರುತಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ಅವರದ್ದೇ. ತಾಯಿ ಮಮತಾರಿಂದಲೂ ಮಗನ ಆಸಕ್ತಿಗಳ ಕಡೆಗೆ ಸಂಪೂರ್ಣ ಪ್ರೋತ್ಸಾಹ. ಆರಂಭದಲ್ಲಿ ಸಿನಿಮಾ ಕುರಿತಾಗ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ, ಇಂದು ಅದದೇ ರಂಗದಲ್ಲಿ ಉತ್ತಮ ನಟನಾಗಿ, ನಿರ್ದೇಶಕನಾಗಿ ಗುರುತಿಕೊಳ್ಳಬೇಕೆಂಬುವುದು ಹೇಮಂತ್ ಕನಸು.

ಟಿವಿ ಒಡೆದು ಬಿಗ್‌ ರಿಸ್ಕ್‌ಗೆ ಕೈ ಹಾಕಿದ 'ಸೀತಾವಲ್ಲಭ' ಅಧಿತಿ?

 ಕನ್ನಡದಲ್ಲಿ ಮೂಡಿ ಬರುತ್ತಿದ್ದ ಮಹಾಭಾರತ ಧಾರವಾಹಿಯ ಅರ್ಜುನನ ಮಗನಾಗಿ ಮೊದಲ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಾಗ ಹೇಮಂತ್ ಇನ್ನೂ ಹೈಸ್ಕೂಲ್ ವಿದ್ಯಾರ್ಥಿ. ಆ ನಂತರದಲ್ಲಿ ತಮಿಳು ಭಾಷೆಯಲ್ಲಿ ಪ್ರಸಾರವಾದ ಮಹಾಭಾರತ ಧಾರವಾಹಿಯಲ್ಲಿ ಹುಡುಗ ಭೀಮನಾಗಿ ಅಭಿನುಸಿದ್ದರು. ರವಿಗರಣಿ ಅವರ ಪ್ರಿಯದರ್ಶಿನಿಯಲ್ಲಿ ನಾಯಕಿಯ ತಮ್ಮನ ಪಾತ್ರ ಮಾಡಿದ್ದರು. 'ಪ್ರೀತಿ ಗೀತಿ ಇತ್ಯಾದಿ', 'ಮಿಸ್ಟರ್ ಆ್ಯಂಡ್  ಮಿಸೆಸ್ ರಾಮಾಚಾರಿ', 'ಗೋಲಿ ಸೋಡ' ಮೊದಲಾದ ಚಿತ್ರಗಳಲ್ಲಿ ಅಭಿನುಸಿದ್ದಾರೆ. ಪ್ರೀತಂ ಗುಬ್ಬಿ ಅವರ ನಿರ್ದೇಶನದ '99' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರ್ವಹಿಸಿದ 'ರಾಮಚಂದ್ರ' ಪಾತ್ರದ ಆರಂಭ ಭಾಗವನ್ನು (ಯುವಕ ರಾಮಚಂದ್ರ) ಹೇಮಂತ್ ಅಭಿನುಸಿದ್ದಾರೆ.

ಪುರಾಣಾಧಾರಿತ ಹಾಗೂ ಹಾರರ್ ಥ್ರಿಲ್ಲರ್ ಸಿನಿಮಾ ಮಾಡಲು ಇಷ್ಟ ಎನ್ನುವ ಹೇಮಂತ್ ಅವರಿಗೆ ವಿಷ್ಣುವರ್ಧನ್, ಅಂಬರೀಶ್, ದರ್ಶನ್ ಮತ್ತು ಯಶ್ ಮಾದರಿಯಂತೆ. ಪುಸ್ತಕಗಳ್ನು ಓದುವುದು, ಪ್ರೇರಣಾದಾಯಿ ವಿಡಿಯೋಗಳನ್ನ ಮಾಡುವುದು ನೋಡುವುದು ಇವರ ಮುಖ್ಯ ಹವ್ಯಾಸ. ತನಗೆ ಅಬ್ದುಲ್ ಕಲಾಂ ಪ್ರೇರಣೆ ಎನ್ನುವ ಇವರು  ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಭಾಷೆಗಳನ್ನೂ ಬಲ್ಲರು. ಪ್ರಾಥಮಿಕವಾಗಿ ಭರತನಾಟ್ಯ, ಡಾನ್ಸ್, ಸಂಗೀತ ಕಲಿತಿರುವ ಹೇಮಂತ್ ನಟನಾ ಅಭ್ಯಾಸವನ್ನೂ ಮಾಡಿದ್ದದಾರೆ. ಕಥೆಗಳನ್ನು ಬರೆಯುವುದು ಅವರ ಇಷ್ಟದ ಕೆಲಸಗಳಲ್ಲಿ ಒಂದು.

'ಪಾರು'ಗೆ ಕಾಟ ಕೊಡುವ ಈ ವಿಲನ್‌ ಹಿಂದೆ ಇದೆ ಒಳ್ಳೆಯ ಮುಖ!

ಕ್ರಿಯಾತ್ಮಕ ನಿರ್ದೇಶಕನಾಗುವ ಕನಸು ಹೊತ್ತ ಹೇಮಂತ್‌ಗೆ ಈ ವಿಚಾರದಲ್ಲಿ ಬನ್ಸಾಲಿ, ರಾಜಮೌಳಿ ಹಾಗೂ ಸಂತೋಷ್ ಆನಂದರಾಮ್ ಮಾದರಿಯಂತೆ. ವಿದ್ಯಾರ್ಥಿ ನಿಲಯವನ್ನು ಮೂಲವಾಗಿರಿಸಿಕೊಂಡು ರಚಿಸಿರುವ ಚಿತ್ರ 'ನವೋದಯ ಡೇಸ್'ನಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಕೊಂಡಿರುವ ಹೇಮಂತ್ ಈ ವರ್ಷ ಬಿ. ಕಾಂ ಪದವಿ ಮುಗಿಸಿದ್ದಾರೆ. ಪ್ರಸ್ತುತ ಚಿರಂಜೀವಿ ಸರ್ಜಾ ಅಭಿನಯದ 'ಕ್ಷತ್ರಿಯ' ಚಿತ್ರದಲ್ಲಿ ಅಭಿನುಸುತ್ತಿದ್ದಾರೆ.

ಸೀಮಾ ಪೋನಡ್ಕ
ವಿವೇಕಾನಂದ ಕಾಲೇಜು, ಪುತ್ತೂರು

click me!