ಕಥೆ ಬರೆಯಲು ಕಾಶಿನಾಥ್‌ ನನಗೆ ಸ್ಫೂರ್ತಿ: ಉದಯ್‌ ಮೆಹ್ತಾ

By Web DeskFirst Published Nov 28, 2019, 2:54 PM IST
Highlights

ನಿರ್ಮಾಪಕ ಉದಯ್‌ ಕೆ ಮೆಹ್ತಾ ಕತೆಗಾರರಾಗಿದ್ದಾರೆ. ಅರ್ಥಾತ್‌ ಮೊದಲ ಬಾರಿಗೆ ತಮ್ಮ ನಿರ್ಮಾಣದ ಚಿತ್ರಕ್ಕೆ ತಾವೇ ಕತೆ ಬರೆದಿದ್ದಾರೆ. ಹೀಗೆ ನಿರ್ಮಾಪಕರಿಂದಲೇ ಕತೆ ಬರೆಸಿಕೊಂಡು ಇದೇ ಶುಕ್ರವಾರ (ನ.29) ಪ್ರೇಕ್ಷಕರ ಮುಂದೆ ಬರುತ್ತಿರುವ ಸಿನಿಮಾ ‘ಬ್ರಹ್ಮಚಾರಿ’. ನೀನಾಸಂ ಸತೀಶ್‌, ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ, ಚಂದ್ರಮೋಹನ್‌ ನಿರ್ದೇಶನದ ಚಿತ್ರವಿದು. ಸಿನಿಮಾ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಉದಯ್‌ ಮೆಹ್ತಾ ಅವರು ತಾವೇ ಕತೆ ಬರೆದ ಗುಟ್ಟು ರಟ್ಟು ಮಾಡಿದರು.

- ನಾನು ಚಿತ್ರರಂಗಕ್ಕೆ ಬಂದು 10 ವರ್ಷಗಳಾಗುತ್ತಿವೆ. ಇಲ್ಲಿವರೆಗೂ 8 ಚಿತ್ರಗಳನ್ನು ನಿರ್ಮಿಸಿದ್ದೇನೆ. ಎಲ್ಲ ಚಿತ್ರಗಳೂ ನನಗೆ ಯಶಸ್ಸು ಕೊಟ್ಟಿವೆ.

- ‘ಬ್ರಹ್ಮಚಾರಿ’ ಚಿತ್ರವೂ ಯಶಸ್ವಿ ಆಗುತ್ತದೆಂಬ ನಂಬಿಕೆ ಇದೆ. 2015ರಲ್ಲಿ ಈ ಚಿತ್ರಕ್ಕೆ ನಾನೇ ಬರೆದಿದ್ದ ಕತೆ 2019ರಲ್ಲಿ ಸಿನಿಮಾ ಆಗಿ ಬರುತ್ತಿದೆ.

- ಈ ಚಿತ್ರಕ್ಕೆ ಕತೆ ಬರೆಯುವುದಕ್ಕೆ ನನಗೆ ದೊಡ್ಡ ಸ್ಫೂರ್ತಿ ಕಾಶಿನಾಥ್‌ ಅವರು. ಅವರ ಚಿತ್ರಗಳನ್ನು ನೋಡಿದ ನನಗೆ ಹೊಳೆದಿದ್ದೇ ‘ಬ್ರಹ್ಮಚಾರಿ’ ಚಿತ್ರದ ಕತೆ.

- ಲವ್‌ ಇನ್‌ ಮಂಡ್ಯ ಚಿತ್ರದಲ್ಲಿ ಕೇಬಲ್‌ ಹಾಕುವ ನಾಯಕನ ಪಾತ್ರ ಬ್ರಹ್ಮಚಾರಿ ಆದರೆ ಹೇಗಿರುತ್ತದೆ ಎಂಬುದನ್ನು ನನ್ನ ಕತೆಯ ಮತ್ತೊಂದು ತಿರುವು.

- ‘ಬ್ರಹ್ಮಚಾರಿ’ ಸಿನಿಮಾ ಈ ಜನರೇಷನ್‌ನ ‘ಅನುಭವ’. ಜೀವನಕ್ಕೆ ತುಂಬಾ ಮಹತ್ವ ಎನಿಸುವ ವಿಷಯವನ್ನು ಹಾಸ್ಯದ ರೂಪದಲ್ಲಿ ಹೇಳಲಾಗಿದೆ.

- ನಿರ್ದೇಶಕ ಚಂದ್ರಮೋಹನ್‌, ನಾಯಕ ನೀನಾಸಂ ಸತೀಶ್‌, ಹಿರಿಯ ನಟ ದತ್ತಣ್ಣ ಜತೆಯಾದ ಮೇಲೆ ನಾನು ಬರೆದುಕೊಂಡಿದ್ದ ಕತೆಗೆ ಜೀವ ಬಂದಿದೆ.

ಯುಟ್ಯೂಬ್‌ನಲ್ಲಿ ಬ್ರಹ್ಮಚಾರಿ ಹವಾ..ಸಿಕ್ಕಾಪಟ್ಟೆ ಡಬಲ್ ಮೀನಿಂಗೋ..!

- ನನ್ನ 8ನೇ ಸಿನಿಮಾ ‘ಬ್ರಹ್ಮಚಾರಿ’ ಯು/ಎ ಸರ್ಟಿಫಿಕೆಟ್‌ನೊಂದಿಗೆ ನ.29ರಂದು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

ತಮ್ಮ ನಿರ್ಮಾಣದ ಚಿತ್ರಕ್ಕೆ ತಾವೇ ಕತೆ ಬರೆದಿರುವ ಉದಯ್‌ ಕೆ ಮೆಹ್ತಾ ‘ಲವ್‌ ಇನ್‌ ಮಂಡ್ಯ’ ಚಿತ್ರ ಬಿಡುಗಡೆಯಾದ ದಿನವೇ ‘ಬ್ರಹ್ಮಚಾರಿ’ಯನ್ನು ತೆರೆಗೆ ಬರುತ್ತಿದ್ದಾರೆ. ಮೊದಲ ಬಾರಿಗೆ ಇವರ ನಿರ್ಮಾಣದ ಚಿತ್ರವೊಂದು ಕರ್ನಾಟಕದ ಎಲ್ಲ ಭಾಗಗಳ ವಿತರಣೆ ಹಕ್ಕುಗಳನ್ನು ಮಾರಾಟ ಮಾಡಿದ್ದು, ಕೆಆರ್‌ಜಿ ಸ್ಟುಡಿಯೋನ ಕಾರ್ತಿಕ್‌ ಗೌಡ ‘ಬ್ರಹ್ಮಚಾರಿ’ಯ ಹಿಂದೆ ನಿಂತಿದ್ದಾರೆ. ಈ ಚಿತ್ರದ ಯಶಸ್ಸಿನ ನಂತರ ಉದಯ್‌ ಕೆ ಮೆಹ್ತಾ ಮತ್ತೊಂದು ಕತೆ ರೆಡಿ ಮಾಡಿಕೊಂಡಿದ್ದು, ಅದು ‘ಬ್ರಹ್ಮಚಾರಿ’ಯ ಮುಂದುವರಿದ ಕತೆಯಂತೆ.

click me!