
ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಟೀಸರ್ ಮೂಲಕ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈಗಾಗಲೇ ಭರ್ಜರಿ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. ಕೆಲ ದಿನಗಳ ಹಿಂದೆ ಪ್ರಮೋಶನ್ ಗಿಮಿಕ್‌ಗಾಗಿ ಪ್ರೇಕ್ಷಕರಿಗೆ ಕ್ಯಾಶ್ ಪ್ರೈಸ್ ಸ್ಪರ್ಧೆ ಏರ್ಪಡಿಸಿದೆ.
'ಅವನೇ ಶ್ರೀಮನ್ನಾರಾಯಣ' ನೋಡಿದವರಿಗೆ ಸಿಗಲಿದೆ ಎರಡೂವರೆ ಲಕ್ಷ ರೂ ಕ್ಯಾಶ್!
ಈಗ ಟ್ರೈನ್‌ನಲ್ಲೂ ಶ್ರೀಮನ್ನಾರಾಯಣನ ವಿಶೇಷ ಪ್ರಚಾರ ಶುರುವಾಗಿದೆ. ರೈಲಿನ ಬೋಗಿ ಒಳಗೆ, ಹೊರಗಡೆ ಶ್ರೀಮನ್ನಾರಾಯಣನ ಪೋಸ್ಟರ್ ಪ್ರಚಾರ ಭರ್ಜರಿಯಾಗಿದೆ. ಮೈಸೂರು,ಹಾಸನ,ಉತ್ತರ ಕರ್ನಾಟಕ, ಯಶವಂತಪುರ, ವೈಟ್ ಫೀಲ್ಡ್ ಸಂಚರಿಸುವ ರೈಲಿನಲ್ಲಿ ಶ್ರೀಮನ್ನಾರಾಯಣ ಪೋಸ್ಟರ್ ರಾರಾಜಿಸುತ್ತಿದೆ.
ರಕ್ಷಿತ್ ಶೆಟ್ಟಿ ಲೈಫಲ್ಲಿ ಬಂದ್ಲು ಮತ್ತೊಂದು ಸುಂದರಿ; ಫ್ಯಾನ್ಸ್ ರಿವೀಲ್ ಮಾಡಿದ್ರು ಲವ್ ಕಹಾನಿ!
ಡಿಸೆಂಬರ್ 27 ಕ್ಕೆ ಶ್ರೀಮನ್ನಾರಾಯಣ ಚಿತ್ರ ಗ್ರಾಂಡ್ ರಿಲೀಸ್ ಆಗಲಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ , ಮಾಸ್ಟರ್ ಪೀಸ್ ಖ್ಯಾತಿಯ ಶಾನ್ವಿ ಶ್ರೀವಾತ್ಸವ್ ಅಭಿನಯದ ಬಹು ಕೋಟಿ ಹಾಗೂ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಚಿತ್ರತಂಡ ಈಗಾಗಲೇ ಟೀಸರ್ ಬಿಟ್ಟಿದ್ದು ರಕ್ಷಿತ್ ಸ್ಟೈಲ್ ಸಖತ್ ಇಷ್ಟವಾಗುವಂತಿದೆ. ನವ ನಿರ್ದೇಶಕ ಸಚಿನ್ ನಿರ್ದೇಶನದ ಪ್ರಥಮ ಚಿತ್ರ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.