
ಮೂವರು ಸ್ನೇಹಿತರ ತುಂಟಾಟ-ಜಗಳ-ಪ್ರೀತಿ ಕಥೆಗೆ 'ಗಾಳಿಪಟ' ಕಟ್ಟಿ ಹಾರಿಸಿದ ಮಾಸ್ಟರ್ ನಿರ್ದೇಶಕ ಯೋಗರಾಜ್ ಭಟ್ 'ಗಾಳಿಪಟ-2'ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಅರ್ಜುನ್ ಜನ್ಯಾ ಕಂಪೋಸಿಷನ್‌ನ ಇಂಟ್ರಡಕ್ಷನ್ ಸಾಂಗನ್ನು ಸದ್ಯ ಕುದುರೆಮುಖದಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಈ ಹಿಂದೆ ರಿಷಿ- ಶರಣ್ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆ ನಂತರ ಚಿತ್ರತಂಡವೇ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಿತ್ತು.
ಗಾಳಿಪಟ-2: ಶರಣ್-ರಿಷಿ ಔಟ್, ಗಣೇಶ್- ದಿಗಂತ್ ಇನ್!
ಚಿತ್ರದಲ್ಲಿ ಯಂಗ್ ಆಗಿ ಕಾಣಿಸಿಕೊಳ್ಳಬೇಕೆಂದು ನಿರ್ದೇಶಕ ಪವನ್ ಕುಮಾರ್ ಮುವಾಯ್ ಥಾಯ್ ಅಭ್ಯಾಸ ಮಾಡಿದ್ದಾರೆ. ಡಿಸೆಂಬರ್ 2 ರಿಂದ ಶೂಟಿಂಗ್ ಶುರುವಾಗಿದ್ದು ಜನವರಿ 8 ರ ವರೆಗೂ ನಡೆಯಲಿದೆ.
ಇನ್ನು ನಾಯಕಿರ ಪಾತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿದ್ದ ತಂಡ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ನಾಯಕಿಯರನ್ನು ಖಚಿತಪಡಿಸಿದೆ.
'ಗಾಳಿಪಟ 2'ಗೆ ನಾಯಕಿಯರು ಬದಲಾದರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.