777 Charlie: ರಕ್ಷಿತ್‌ ಶೆಟ್ಟಿಗೆ ಜತೆಯಾಗುತ್ತಿರುವ ಧನುಷ್‌, ಸಾಯಿಪಲ್ಲವಿ

By Suvarna News  |  First Published May 16, 2022, 9:28 AM IST
  • ರಕ್ಷಿತ್‌ ಶೆಟ್ಟಿಗೆ ಜತೆಯಾಗುತ್ತಿರುವ ಧನುಷ್‌, ಸಾಯಿಪಲ್ಲವಿ
  • ಬಹುಭಾಷಾ ತಾರೆಗಳಿಂದ 777 ಚಾರ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿನಟನೆಯ ‘777 ಚಾರ್ಲಿ’ ಚಿತ್ರಕ್ಕೆ ತಮಿಳಿನ ಧನುಷ್‌, ಸಾಯಿಪಲ್ಲವಿ, ನಿಬಿನ್‌ ಪೌಲ್‌ ಸೇರಿದಂತೆ ಹಲವು ತಾರೆಗಳು ಜತೆಯಾಗುತ್ತಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್‌ ಬಿಡುಗಡೆಗೆ ಇವರೆಲ್ಲ ಜತೆಯಾಗುತ್ತಿದ್ದಾರೆ. ಇಂದು (ಮೇ.19) ಮಧ್ಯಾಹ್ನ 12.12ಕ್ಕೆ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗುತ್ತಿದೆ. ಹೀಗಾಗಿ ತಮಿಳಿನಲ್ಲಿ ನಟ ಧನುಷ್‌ ಅವರು ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಅದೇ ರೀತಿ ಮಲಯಾಳಂನಲ್ಲಿ ನಿಬಿನ್‌ ಪೌಲ್‌, ಆಸೀಫ್‌ ಆಲಿ, ತೋವಿನೋ ಥಾಮಸ್‌, ಅಂಟೋನಿ ವರ್ಗಿಸ್‌, ಅರ್ಜುನ್‌ ಅಶೋಕನ್‌ ಬಿಡುಗಡೆ ಮಾಡುತ್ತಿದ್ದಾರೆ. ಇನ್ನೂ ತೆಲುಗಿನಲ್ಲಿ ನಟಿ ಸಾಯಿ ಪಲ್ಲವಿ, ವಿಕ್ಟರಿ ವೆಂಕಟೇಶ್‌ ಹಾಗೂ ರಾಣಾ ದಗ್ಗುಬಾಟಿ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸುತ್ತಿದ್ದಾರೆ. ಹಿಂದಿಯಲ್ಲೂ ದೊಡ್ಡ ಸೆಲೆಬ್ರಿಟಿ ಮೂಲಕ ಟ್ರೇಲರ್‌ ಅನಾವರಣಗೊಳ್ಳುತ್ತಿದೆ.

ಇನ್ನೂ ಕನ್ನಡ ವರ್ಷನ್‌ ಟ್ರೇಲರ್‌ ಅನ್ನು ಕನ್ನಡದ ಎಲ್ಲ ಸೆಲೆಬ್ರಿಟಿ ತಾರೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘777 ಚಾರ್ಲಿ’ ಚಿತ್ರದ ಟ್ರೇಲರ್‌ ಬಿಡುಗಡೆಗೆ ಸಾಥ್‌ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ 10ಕ್ಕೂ ಹೆಚ್ಚು ತಾರೆಗಳು ರಕ್ಷಿತ್‌ ಶೆಟ್ಟಿಅವರ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ಶುಭ ಕೋರಲಿದ್ದಾರೆ. ಒಂದೊಂದು ಭಾಷೆಯಲ್ಲಿ ಮೂರು, ನಾಲ್ಕು ಮಂದಿ ಸೆಲೆಬ್ರಿಟಿಗಳಿಂದ ಟ್ರೇಲರ್‌ ಬಿಡುಗಡೆ ಮಾಡಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಅಂಥದ್ದೊಂದು ಹೆಗ್ಗಳಿಕೆಗೆ ಕಿರಣ್‌ ರಾಜ್‌ ಕೆ ನಿರ್ದೇಶನದ ‘777 ಚಾರ್ಲಿ’ ಸಿನಿಮಾ ಪಾತ್ರವಾಗುತ್ತಿದೆ.

Tap to resize

Latest Videos

ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದವರಿಗೆ ರಕ್ಷಿತ್ ಶೆಟ್ಟಿ ಕೊಟ್ರು ಕ್ಲಾರಿಟಿ!

ಚಿತ್ರದ ಟ್ರೇಲರ್‌ ಅನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡದಲ್ಲಿ ಬಹುತೇಕ ನಟ, ನಟಿಯರು ಚಿತ್ರದ ಟ್ರೇಲರ್‌ ಅನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳಲಿದ್ದಾರೆ. ಟೀಸರ್‌ ಕೂಡ ಇದೇ ರೀತಿ ಬಿಡುಗಡೆ ಮಾಡಿದ್ದೇವೆ. ತೆಲುಗು ಮತ್ತು ಮಲಯಾಳಂನಲ್ಲಿ ಅಧಿಕೃತವಾಗಿ ಎಂಟು ಮಂದಿ ತಾರೆಗಳು ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದಾರೆ.

- ಕಿರಣ್‌ರಾಜ್‌ ಕೆ, ನಿರ್ದೇಶಕ

‘ಚಾರ್ಲಿ ಹಾಗೂ ಧರ್ಮ ಥಿಯೇಟರ್‌ ಕಡೆ ನಡೆಯುತ್ತಿದ್ದಾರೆ. ಅದಕ್ಕೂ ಮುನ್ನ ಸ್ಪೆಷಲ್ಲಾಗಿ ನಿಮ್ಮ ಮುಂದೆ ಕಾಣಿಸಿಕೊಳ್ತಿದ್ದಾರೆ’ ಎಂದು ರಕ್ಷಿತ್‌ ಶೆಟ್ಟಿ ಟ್ರೇಲರ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಬರೆದುಕೊಂಡಿದ್ದಾರೆ. ‘ರಕ್ಷಿತ್‌ ನಿಮ್ಮ ಸಿನಿಮಾ ಆಗಮನಕ್ಕೆ ಎದುರು ನೋಡುತ್ತಿದ್ದೇನೆ’ ಎಂದು ನಟಿ ರಮ್ಯಾ (Ramya) ಟ್ವೀಟ್‌ ಮಾಡಿದ್ದಾರೆ. ಚಿತ್ರ ಜೂ.10ಕ್ಕೆ ತೆರೆ ಕಾಣಲಿದೆ. ಕಿರಣ್‌ರಾಜ್‌ (Kiran Raj) ನಿರ್ದೇಶನದ ಚಿತ್ರವನ್ನು ರಕ್ಷಿತ್‌ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋ ಮೂಲಕ ನಿರ್ಮಿಸುತ್ತಿದ್ದಾರೆ.

ನಟಿ ರಮ್ಯಾರನ್ನ ಇದುವರೆಗೂ ಭೇಟಿ ಮಾಡಿಲ್ಲ; ಗಾಸಿಪ್‌ ಬಗ್ಗೆ ರಕ್ಷಿತ್ ಶೆಟ್ಟಿ ಕ್ಲಾರಿಟಿ!

ಹಿಂದಿ ವಿತರಣೆ ಹಕ್ಕು ಖರೀದಿಸಿದ ಯುಎಫ್‌ಓ: ‘777 ಚಾರ್ಲಿ’ ಸಿನಿಮಾದ ಹಿಂದಿ ವಿತರಣೆ ಹಕ್ಕು ಖ್ಯಾತ ವಿತರಣಾ ಸಂಸ್ಥೆ ಯುಎಫ್‌ಓ ಪಾಲಾಗಿದೆ. ತೆಲುಗಿನಲ್ಲಿ ರಾಣಾ ದಗ್ಗು ಬಾಟಿ ವಿತರಣೆಯ ಹೊಣೆ ಹೊತ್ತರೆ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಚಿತ್ರ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.

777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್‌: ರಕ್ಷಿತ್‌ ಶೆಟ್ಟಿನಟನೆ, ಕಿರಣ್‌ ರಾಜ್‌ ಕೆ ನಿರ್ದೇಶನದ ‘777 ಚಾರ್ಲಿ’ ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್‌ ನೀಡಿದ್ದಾರೆ. ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್‌ ಪ್ರೊಡಕ್ಷನ್‌ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಿತ್‌ ಶೆಟ್ಟಿಅವರ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. 

click me!