ಸಾಯಿ ಪಲ್ಲವಿ 'ಗಾರ್ಗಿ'ಗೆ ರಕ್ಷಿತ್ ಸಾಥ್; ಹೃದಯ ಕದಲಿಸಿದ ಸಿನಿಮಾ ಎಂದ ಸಿಂಪಲ್ ಸ್ಟಾರ್

Published : Jul 04, 2022, 01:11 PM IST
ಸಾಯಿ ಪಲ್ಲವಿ 'ಗಾರ್ಗಿ'ಗೆ ರಕ್ಷಿತ್ ಸಾಥ್; ಹೃದಯ ಕದಲಿಸಿದ ಸಿನಿಮಾ ಎಂದ ಸಿಂಪಲ್ ಸ್ಟಾರ್

ಸಾರಾಂಶ

 ಗಾರ್ಗಿ ಮೂಲಕ ಸಾಯಿ ಪಲ್ಲವಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲಲು ಸಜ್ಜಾಗಿದ್ದಾರೆ. ಸಾಯಿ ಪಲ್ಲವಿ ಗಾರ್ಗಿಗೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ (Rakshith Shetty) ಸಾಥ್ ನೀಡಿದ್ದಾರೆ. 

ಸೌತ್ ಸಿನಿ ರಂಗದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಸದ್ಯ ಗಾರ್ಗಿ (Gargi) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಯಿ ಪಲ್ಲವಿ ಸಿನಿಮಾ ಅಂದ್ಮೇಲೆ ಅಭಿಮಾನಿಗಳಲ್ಲಿ ಸಹಜವಾಗಿ ಕುತೂಹಲ ಇದ್ದೆ ಇರುತ್ತದೆ. ಸಿನಿಮಾಗಳ ಆಯ್ಕೆ ವಿಚಾರಗಳಲ್ಲಿ ಚೂಸಿ ಆಗಿರುವ ಸಾಯಿ ಪಲ್ಲವಿ ತನ್ನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದರೆ ಮಾತ್ರ ಆ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸಾಯಿ ಪಲ್ಲವಿ ಅಂತಹದೆ ಒಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಗಾರ್ಗಿ ಮೂಲಕ ಸಾಯಿ ಪಲ್ಲವಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲಲು ಸಜ್ಜಾಗಿದ್ದಾರೆ. ಸಾಯಿ ಪಲ್ಲವಿ ಗಾರ್ಗಿಗೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ Rakshith Shetty) ಸಾಥ್ ನೀಡಿದ್ದಾರೆ. 

ನಟ ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ 777 ಚಾರ್ಲಿ (777 Charlie) ಸಿನಿಮಾಗೆ ಸಾಯಿ ಪಲ್ಲವಿ ಸಾಥ್ ನೀಡಿದ್ದರು. 777 ಚಾರ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದ ಸಾಯಿ ಪಲ್ಲವಿ ಬಳಿಕ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಚಾರ್ಲಿಯ ಅಭಿನಯಕ್ಕೆ ಫಿದಾ ಆಗಿದ್ದರು. ಇದೀಗ ರಕ್ಷಿತ್ ಶೆಟ್ಟಿ ಗಾರ್ಗಿಯ ಬೆಂಬಲಕ್ಕೆ ನಿಂತಿದ್ದಾರೆ. ಹೌದು, ಗಾರ್ಗಿ ಸಿನಿಮಾವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

'ಈ ಚಿತ್ರವನ್ನು ಯಾಕೆ ಕನ್ನಡದಲ್ಲಿ ಪ್ರಸ್ತುತಪಡಿಸಲು ಒಪ್ಪಿಕೊಂಡೆ? ಗೌತಮ್ ನನ್ನ ಒಳ್ಳೆಯ ಸ್ನೇಹಿತ, ನಾವು ಭೇಟಿಯಾದಾಗಲೆಲ್ಲಾ ಸಿನಿಮಾದ ಕುರಿತತು ಮತ್ತು ಕಥೆಗಳ ಬಗ್ಗೆ ಮಾತನಾಡುವುದೇ ಹೆಚ್ಚು. ಗೌತಮ್ ಸಿನಿಮಾದ ಬಗೆಗಿನ ಪ್ರೇಮ ಮತ್ತು ಒಲವು. ಅದರ ಜೊತೆಗೆ ಗಾರ್ಗಿ ಮೂಡಿ ಬಂದಿರುವ ರೀತಿ. ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತು. ಸಾಯಿ ಪಲ್ಲವಿ ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿರುವುದು ಮತ್ತೊಂದು ಬಲವಾದ ಕಾರಣ ಎಂದು ಹೇಳಬಹುದು. ಇವೆಲ್ಲ ಒಂದು ಕಡೆ ಆದರೆ ಚಿತ್ರ ವೀಕ್ಷಿಸಿದ ನಂತರ ನನ್ನ ಬಳಿ ಸಾವಿರ ಕಾರಣಗಳಿದ್ದವ' ಎಂದಿದ್ದಾರೆ.  

Vikrant Rona: ರಕ್ಷಿತ್ ಶೆಟ್ಟಿ ಆಡಿದ ಮಾತಿಗೆ ವೇದಿಕೆ ಮೇಲೆ ಬಂದು ಅಪ್ಪಿಕೊಂಡ ಸುದೀಪ್

'ಗರುಡುಗಮನ ವೃಷಭ ವಾಹನ ಚಿತ್ರದ ನಂತರ ಈ ದೃಶ್ಯಾವಳಿ ಹೃದಯ ಕದಲಿಸಿದ ಸಿನಿಮಾ ಎಂದರೆ ತಪ್ಪಾಗಲಾರದು. ಚಿತ್ರವು ನಿಮ್ಮನ್ನು ಗಾರ್ಗಿಯ ಪ್ರಪಂಚದೊಳಗೆ ಸೆಳೆದು, ಅವಳ ಧೈರ್ಯ ಮತ್ತು ಹೋರಾಟದ ನಡುವೆ ಮನ ಕಲಕುವ ದೃಶ್ಯಗಳು ಹಾಗೂ ಗೌತಮ್ ಅವುಗಳನ್ನು ರೂಪಿಸಿರುವ ರೀತಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಸಾಯಿ ಪಲ್ಲವಿ ಗಾರ್ಗಿ ಪಾತ್ರವನ್ನು ಜೀವಿನಿ ನಿಜ ಜೀವನಕ್ಕೆ ಹತ್ತಿರವಿದೆ ಎನಿಸುವಂತೆ ನಟಿಸಿದ್ದಾರೆ. ಕಾಳಿ ವೆಂಕಟ್ ಇಂದ್ರ ಎಂಬುವ ಪಾತ್ರವನ್ನು ನಿರ್ವಹಿಸಿದ್ದಾರೆ' ಎಂದು ಗಾರ್ಗಿ ವಿಮರ್ಶೆ ನೀಡಿದ್ದಾರೆ.

ಚಾರ್ಲಿಯನ್ನು ಮೆಚ್ಚಿದ ಪರಭಾಷಾ ಸ್ಟಾರ್ಸ್; ಬೋನಿ ಕಪೂರ್, ರಿಕಿ, ಮಧುರ್ ಭಂಡಾರ್ಕರ್ ಪ್ರತಿಕ್ರಿಯೆ

ರಕ್ಷಿತ್ ಶೆಟ್ಟಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಇನ್ನು ನಮ್ಮ ಸಿನಿಮಾಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿರುವಾಗ, ಬೇರೆ ಭಾಷೆಯ ಒಳ್ಳೆಯ ಚಿತ್ರಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ ಎಂದು ರಕ್ಷಿತ್ ಹೇಳಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar