ಚಾರ್ಲಿಗೂ ಫ್ಯಾನ್ಸ್ ಕ್ಲಬ್: ಚಿಕ್ಕಬಳ್ಳಾಪುರದಲ್ಲಿ ಗಮನ ಸೆಳೆದ ಬ್ಯಾನರ್

Published : Jun 10, 2022, 02:51 PM IST
ಚಾರ್ಲಿಗೂ ಫ್ಯಾನ್ಸ್ ಕ್ಲಬ್: ಚಿಕ್ಕಬಳ್ಳಾಪುರದಲ್ಲಿ ಗಮನ ಸೆಳೆದ ಬ್ಯಾನರ್

ಸಾರಾಂಶ

ಚಿಕ್ಕಬಳ್ಳಾಪುರ ದಲ್ಲಿ ಗಮನ ಸೆಳೆದ 777 ಚಾರ್ಲಿ ಬ್ಯಾನರ್. ಅದ್ಧೂರಿ ಪ್ರದರ್ಶನ ಕಾಣುತ್ತಿದೆ ರಕ್ಷಿತ್ ಶೆಟ್ಟಿ ಕಿರಣ್ ರಾಜ್ ಕಾಂಬಿನೇಷನ್‌ನ ಚಾರ್ಲಿ ಸಿನಿಮಾ........

ವರದಿ - ರವಿಕುಮಾರ್ ವಿ
ಚಿಕ್ಕಬಳ್ಳಾಪುರ ಜಿಲ್ಲೆ

ಚಿಕ್ಕಬಳ್ಳಾಪುರ - ಸಿನಿಮಾ ನಾಯಕರಿಗೆ ಅಭಿಮಾನಿಗಳ ಸಂಘ ಇರೋದು ಸಹಜ, ಅವರ ನಾಯಕರ ಸಿನಿಮಾಗಳ ರಿಲೀಸ್‌ಗೆ ಕಟೌಟ್ ಹಾಕಿ , ಪ್ಲೆಕ್ಸ್ ಹಾಕಿ ಸಂಭ್ರಮಿಸಿದೋ ಕೂಡ ಫ್ಯಾಷನ್.. ಆದ್ರೆ ಚಾರ್ಲಿಗೂ ಈಗ ಅಭಿಮಾನಿಗಳ ಸಂಘವೊಂದು ಹುಟ್ಟಿಕೊಂಡಿದೆ.

ಅಷ್ಟಕ್ಕೂ ಈ ಚಾರ್ಲಿ ಯಾರು ಅಂತೀರಾ? ಅಂದಹಾಗೆ 777ಚಾರ್ಲಿ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿರೋ ಚಿತ್ರ.ಯಾರಿಗೂ ಬೇಡವಾದ ನಾಯಿ ಈಗ ಚಾರ್ಲಿ ಸಿನಿಮಾದ ಹೀರೋ ಆಗಿ ಮಿಂಚಿದೆ. 777 ಚಾರ್ಲಿ ಸಿನೆಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಾರ್ಲಿಗೂ ಚಿಕ್ಕಬಳ್ಳಾಪುರದಲ್ಲಿ ಸಂಘವೊಂದು ಹುಟ್ಟಿಕೊಂಡಿದ್ದು, ನಗರದ ಬಾಲಾಜಿ ಚಿತ್ರಮಂದಿರ ಬಳಿ ಸಿನಿಮಾ ಯಶಸ್ವಿಯಾಗಲೆಂದು ಹಾರೈಸಿ ಬ್ಯಾನರ್ ಹಾಕಿರೋದು ಎಲ್ಲೆಡೆ ವೈರಲ್ ಆಗಿದೆ. 

ಚಾರ್ಲಿ ಅಭಿಮಾನಿಗಳ ಸಂಘ, ಭುವನೇಶ್ವರಿ ವೃತ್ತ ಚಿಕ್ಕಬಳ್ಳಾಪುರ ಎಂಬ ಬ್ಯಾನರ್ ಈಗ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಈ ಪೋಸ್ಟರ್ ಅನ್ನು ಫೇಸ್‌ಬುಕ್ , ವಾಟ್ಸಪ್‌ಗಳ ಸ್ಟೇಟಸ್‌ಗೆ ಹಾಕಿಕೊಂಡು ಗಮನ ಸೆಳೆದಿದ್ದಾರೆ.

ಥಿಯೇಟರ್ ಬಳಿ ಚಾರ್ಲಿ ಸಂಘದ ಬ್ಯಾನರ್

ಹೌದು 777 ಚಾರ್ಲಿ ಸಿನಿಮಾ ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರಮಂದಿರದ ಬಳಿ ಚಾರ್ಲಿ ಅಭಿಮಾನಿಗಳ ಸಂಘ ಎಂದು ನಾಯಿಗಳೇ ಇರೋ ಬ್ಯಾನರ್ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೂ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅಭಿನಯಸಿದ್ದರೂ ಕೂಡ ಎಲ್ಲರ ಆಕರ್ಷಣೆ ಆಗಿರೋದು ಮಾತ್ರ ಚಾರ್ಲಿಯೇ, ಹೀಗಾಗಿ ನಟ ಚಾರ್ಲಿ(ನಾಯಿ) ಅಭಿಮಾನಿಗಳ ಸಂಘದ ಕಟೌಟ್ ವಿಶೇಷವಾಗಿದೆ.

ಮನೆಯವ್ರಿಗೇ ಬೇಡವಾಗಿದ್ದ ನಾಯಿ, ಚಾರ್ಲಿ ಸಿನಿಮಾದ ಹೀರೋ ಆಯ್ತು!

ಸಾಮಾಜಿಕ ಜಾಲತಾಣಗಳಲ್ಲಿ ಚಾರ್ಲಿ ಬ್ಯಾನರ್ ವೈರಲ್

ಚಾರ್ಲಿ ಅಭಿಮಾನಿಗಳ ಸಂಘ, ಭುವನೇಶ್ವರಿ ವೃತ್ತ ಚಿಕ್ಕಬಳ್ಳಾಪುರ ಎಂಬ ಹೆಸರಿನ ಸಂಘವೊಂದಿದೆ ಎಂದು ಬ್ಯಾನರ್ ಹಾಕಿರೋದು ಈಗ ಎಲ್ಲೆಡೆ ವೈರಲ್ ಆಗಿದ್ದು, 777 ಚಾರ್ಲಿ ಸಿನಿಮಾ ಶತದಿನೋತ್ಸವ ಆಚರಿಸಲೆಂದು ಹಾರೈಸಿದ್ದಾರೆ. ಇದೀಗ ಈ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ, ಜನರು ಚಾರ್ಲಿ ಬ್ಯಾನರ್ ನ್ನು ಫೇಸ್ ಬುಕ್ ಹಾಗೂ ವಾಟ್ಸಫ್ ನ ಸ್ಟೇಟಸ್ ಗೆ ಹಾಕಿಕೊಂಡಿದ್ದಾರೆ.

ಚಾರ್ಲಿ ಅಭಿಮಾನಿಗಳ ಸಂಘಕ್ಕೂ ಪದಾಧಿಕಾರಿಗಳು

ಹೌದು ಈ ಸಂಘದ ನಾಯಿಗಳಿಗೆ ವಿವಿಧ ಹೆಸರಿಟ್ಟಿದ್ದು, ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಎಂದು ಆ ನಾಯಿಗಳ ಫೋಟೋ ಕೆಳಗೆ ಉಲ್ಲೇಖಿಸಲಾಗಿದೆ. ರಾಯನ್ ಅಧ್ಯಕ್ಷ, ರಾಕಿ - ಉಪಾಧ್ಯಕ್ಷ, ಜಾಕಿ - ಖಜಾಂಚಿ, ಕರಿಯ - ಕಾನೂನು ಸಲಹೆಗಾರ, ಬಂಟು ಸಂಘಟನಾ ಕಾರ್ಯದರ್ಶಿ ಸೆರಿದಂತೆ ಉಳಿದ 7 ನಾಯಿಗಳನ್ನು ಸದಸ್ಯರೆಂದು ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ