ಜೂ. 14ರಂದು ಅಮೇಜಾನ್‌ ಪ್ರೈಮ್‌ನಲ್ಲಿ 'ಅವತಾರ ಪುರುಷ'

Published : Jun 10, 2022, 10:53 AM IST
ಜೂ. 14ರಂದು ಅಮೇಜಾನ್‌ ಪ್ರೈಮ್‌ನಲ್ಲಿ 'ಅವತಾರ ಪುರುಷ'

ಸಾರಾಂಶ

ಕನ್ನಡ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ಅವತಾರ ಪುರುಷ ಪ್ರೀಮಿಯರ್ ಸ್ಟ್ರೀಮಿಂಗ್ ಘೋಷಣೆ ಮಾಡಿದ ಪ್ರೈಮ್ ವೀಡಿಯೋ

ಕಾಮಿಡಿ ಕಿಂಗ್ ಶರಣ್ ಮತ್ತು ಚುಟು ಚುಟು ಸುಂದರಿ ಆಶಿಕಾ ರಂಗನಾಥ್ ಅಭಿನಯಿಸಿರುವ ಅವತಾರ ಪುರುಷ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಪುಷ್ಕರ್ ಫಿಲಂಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಅವತಾರ ಪುರುಷ ಭಾರತ ಮತ್ತು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ 2022 ಜೂನ್ 14 ರಂದು ಸ್ಟ್ರೀಮ್ ಆಗಲಿದೆ.

ಪ್ರೈಮ್ ವೀಡಿಯೋ ಮೊಬೈಲ್ ಎಡಿಶನ್ಗೆ ಸಬ್ಸ್ಕ್ರೈಬ್ ಮಾಡುವ ಮೂಲಕವೂ ಗ್ರಾಹಕರು ಅವತಾರ ಪುರುಷ ಸಿನಿಮಾವನ್ನು ವೀಕ್ಷಿಸಬಹುದು. ಪ್ರೈಮ್ ವೀಡಿಯೋ ಮೊಬೈಲ್ ಎಡಿಶನ್ ಒಂದು ಬಳಕೆಯ, ಮೊಬೈಲ್ ಮಾತ್ರ ಪ್ಲಾನ್ ಆಗಿದ್ದು, ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಸದ್ಯ ಲಭ್ಯವಿದೆ. ಮುಂಬೈ, ಭಾರತ – 9 ಜೂನ್ 2022 ಕನ್ನಡ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ಅವತಾರ ಪುರುಷ ಸಿನಿಮಾದ ಎಕ್ಸ್ಕ್ಲೂಸಿವ್ ಸ್ಟ್ರೀಮಿಂಗ್ ಪ್ರೀಮಿಯರ್ ಘೋಷಣೆಯನ್ನು ಪ್ರೈಮ್ ವೀಡಿಯೋ ಇಂದು ಮಾಡಿದೆ. ಸುನಿ ನಿರ್ದೇಶನ ಮಾಡಿದ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಶರಣ್, ಆಶಿಕಾ ರಂಗನಾಥ್, ಸಾಯಿ ಕುಮಾರ್ ಮತ್ತು ಸುಧಾರಾಣಿ ಇದ್ದಾರೆ.

ಅವತಾರ ಪುರುಷ ಎಂಬುದು ಒಬ್ಬ ವಿದ್ವಾಂಸರ (ಸಾಯಿ ಕುಮಾರ್) ಕಥೆಯಾಗಿದ್ದು, ಅವರ ಒಬ್ಬನೇ ಮಗ ಕಳೆದು ಹೋಗಿರುತ್ತಾನೆ. ಇದಕ್ಕೆ ತನ್ನ ತಂಗಿಯೇ (ಸುಧಾರಾಣಿ) ಕಾರಣ ಎಂಬುದು ಅವರ ಅಭಿಪ್ರಾಯ. ಹೀಗಾಗಿ ಆಕೆಯ ಜೊತೆಗಿನ ಎಲ್ಲ ಸಂಬಂಧವನ್ನೂ ಅವರು ಕಡಿದುಕೊಳ್ಳುತ್ತಾರೆ. ಹಲವು ವರ್ಷಗಳ ನಂತರ, ತಂಗಿಯ ಪುತ್ರಿ (ಆಶಿಕಾ ರಂಗನಾಥ್) ಈ ಸಂಬಂಧವನ್ನು ಸುಧಾರಿಸುವ ನಿರ್ಧಾರ ಮಾಡುತ್ತಾಳೆ ಮತ್ತು ಇದಕ್ಕಾಗಿ ಜ್ಯೂನಿಯರ್ ಆರ್ಟಿಸ್ಟ್ (ಶರಣ್) ನೇಮಕ ಮಾಡುತ್ತಾರೆ. ಆತ ಕಳೆದುಹೋದ ಮಗನ ಪಾತ್ರವನ್ನು ವಹಿಸಬೇಕಿರುತ್ತದೆ. ಆದರೆ, ಈ ನಾಟಕದಿಂದ ಇನ್ನಷ್ಟು ಸಮಸ್ಯೆ ಎದುರಾಗುತ್ತದೆ ಎಂಬುದು ಆಕೆಗೆ ತಿಳಿದಿರುವುದಿಲ್ಲ.

“ಅವತಾರ ಪುರುಷ ಕೌಟುಂಬಿಕ ಮನರಂಜನೆ ಸಿನಿಮಾ ಆಗಿದ್ದು, ಇದರಲ್ಲಿ ಕಾಮಿಡಿ, ಡ್ರಾಮಾ ಮತ್ತು ಸೂಪರ್ನ್ಯಾಚುರಲ್ ಫ್ಯಾಂಟಸಿ ಇದೆ” ಎಂದು ಅವತಾರ ಪುರುಷ ಸಿನಿಮಾದ ನಿರ್ದೇಶಕ ಸುನಿ ಹೇಳಿದ್ದಾರೆ. “ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆಯಾದಾಗ ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿದ್ದಾರೆ ಮತ್ತು ಜಗತ್ತಿನ ವಿವಿಧ ಭಾಗದ ಜನರು ಕೂಡ ಈ ಸಿನಿಮಾವನ್ನು ಇದೇ ರೀತಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ. ಸಿನಿಮಾ ಉತ್ತಮ ಮನರಂಜನೆ ನೀಡುತ್ತದೆ. ಈ ಶುಕ್ರವಾರ ನಿಮ್ಮ ಕುಟುಂಬದ ಜೊತೆಗೆ ಕುಳಿತು ನೋಡಿ” ಎಂದು ಸುನಿ ಹೇಳಿದ್ದಾರೆ.

ಅವತಾರ ಪುರುಷ ನನ್ನದೇ ಲೈಫ್‌ ಸ್ಟೋರಿ ಅನಿಸಿತು: ಶರಣ್‌

'ಮೊದಲ ಸಿನಿಮಾ ಬಿಡುಗಡೆ ಸಂಭ್ರಮದ ಭಾವನೆ ಇದೆ. ಎಲ್ಲವೂ ಹೊಸದಾಗಿ ಕಾಣುತ್ತಿದೆ. ಪ್ರಶ್ನೆಗಳು, ಕುತೂಹಲ, ಎಕ್ಸೈಟ್‌ಮೆಂಟ್‌, ಎಮೋಷನ್‌, ನಾನು ತೆರೆ ಮೇಲೆ ಬಂದಾಗ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ. ಹೀಗೆ ಮೊದಲ ಸಿನಿಮಾ ಮಾಡಿದಾಗ ಆಗುವ ಅನುಭವ ಈಗ ಆಗುತ್ತಿದೆ. ‘ಅವತಾರ ಪುರುಷ’ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಈಗಾಗಲೇ ನೋಡಿದವರು ಹೇಳುತ್ತಿದ್ದಾರೆ. ಆ ಒಂದು ನಂಬಿಕೆ ಮತ್ತು ಸಮಾಧಾನ ಕೂಡ ಇದೆ.ಎರಡು ಭಾಗಗಳಲ್ಲಿ ಕತೆ ಹೇಳಬೇಕು ಎಂಬುದು ಸಂಪೂರ್ಣವಾಗಿ ಚಿತ್ರತಂಡದ ನಿರ್ಧಾರ. ತುಂಬಾ ದೊಡ್ಡ ಕತೆ, ಮೇಕಿಂಗ್‌ ಹಾಗೂ ವಿಷ್ಯುವಲ್‌ ದೊಡ್ಡದಾಗಿದೆ. ಹೀಗಾಗಿ ಒಂದೇ ಕಂತಿನಲ್ಲಿ ಕತೆ ಹೇಳಿ ಮುಗಿಸಿದರೆ ಅಪೂರ್ಣ ಅನಿಸುತ್ತದೆ. ಅಲ್ಲದೆ ಈ ಕತೆಯನ್ನು ನಿರ್ಮಾಪಕರು ವೆಬ್‌ ಸರಣಿ ಮಾಡಬೇಕು ಅಂದುಕೊಂಡಿದ್ದರಂತೆ. ವೆಬ್‌ ಸರಣಿ ಕತೆ ಒಂದು ಕಂತಿನಲ್ಲಿ ಹೇಳಲು ಸಾಧ್ಯವಿಲ್ಲ ಎನಿಸಿ, ಚಿತ್ರೀಕರಣ ಮಾಡುತ್ತಾ ಹೋದಂತೆ ಭಾಗ 2 ಯೋಚನೆ ಬಂತು.' ಎಂದು ಶರಣ್ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!